ಚಿಕ್ಕಬಳ್ಳಾಪುರ : ಮಕ್ಕಳ ಭವಿಷಗಯ ಉಜ್ವಲವಾಗಿರಲಿ ಎಂದು ಹಾರೈಸುವ ತಂದೆ-ತಾಯಂದಿರು ಅವರಿಗಾಗಿ ತಮಗಾಗುವ ಕಷ್ಟವನ್ನು ಸಹಿಸಿಕೊಳ್ಳುತ್ತಾರೆ. ತಾವೂ ಉಪವಾಸ ಇದ್ದರು ಮಕ್ಕಳ ಹೊಟ್ಟೆ ತುಂಬಿಸುತ್ತಾರೆ. ಅಷ್ಟೊಂದು ಪ್ರೀತಿ ಮಮಕಾರ ಇಟ್ಟು ಬೆಳೆಸುವ ಮಕ್ಕಳು ಹಾದಿ ತಪ್ಪಿದ್ರೆ ಯಾವ ತಂದೆ ತಾಯಿಗೆ ತಾನೇ ಖುಷಿ ಆಗುತ್ತೆ ಹೇಳಿ.
ತನ್ನ ಮಗ ಕುಡಿತದ ಚಟಕ್ಕೆ ಬಿದ್ದು ಹಾಳಾಗೋದನ್ನ ಸಹಿಸಿಕೊಳ್ಳಲಾಗದ ತಂದೆ ಮಗನಿಗೆ ಬುದ್ಧಿವಾದ ಹೇಳಿದ್ದೇ ತಪ್ಪಾಗಿ ಹೋಗಿದೆ. ಕುಡಿದು-ಗಲಾಟೆ ಮಾಡಬೇಡ, ಇದ್ರಿಂದ ನಿನ್ನ ಜೀವನ ಹಾಳಾಗುತ್ತೆ ಅಂತ ಬುದ್ದಿವಾದ ಹೇಳಿದ್ದಕ್ಕೆ ತನ್ನ ತಾತನ ಜೊತೆ ಸೇರಿ ತಂದೆಯನ್ನೆ ಕೊಲೆ ನಾಡಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ
ಜಿಲ್ಲೆಯ ಗೌರೀಬಿದನೂರು ತಾಲ್ಲೂಕು ಚನ್ನಬೈರೇನಹಳ್ಳಿ ಗ್ರಾಮದ 50 ವರ್ಷದ ಮುನೇಗೌಡ ಕೊಲೆಯಾದ ವ್ಯಕ್ತಿ. ಮಂಜುನಾಥ್ ಕೊಲೆ ಮಾಡಿದ ವ್ಯಕ್ತಿ.
ಮಂಜುನಾಥ್ ಕುಡಿತಕ್ಕೆ ದಾಸನಾಗಿದ್ದ. ಪ್ರತಿದಿನ ಕಂಠಪೂರ್ತಿ ಕುಡಿದು, ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ಅಷ್ಟೇ ಇಡೀ ಗ್ರಾಮಕ್ಕೆ ಆ ಗಲಾಟೆ ಕೇಳುವಂತೆ ಮಾಡುತ್ತಿದ್ದ. ಜೊತೆಗೆ ತನ್ನ ತಾತನಿಗೂ ಕುಡಿತದ ಚಟ ಹತ್ತಿಸಿದ್ದ. ಮಂಜುನಾಥ್ ತಂದೆ ಮನೆಯಲ್ಲಿ ಹೆಣ್ಣು ಮಕ್ಕಳಿದ್ದಾರೆ. ಕುಡಿದು ಹೀಗೆ ಗಲಾಟೆ ಮಾಡಬೇಡ, ನಿನ್ನ ಜೀವನ ಕೂಡ ಹಾಳಾಗುತ್ತೆ ಎಂದಿದ್ದ. ಈ ಬುದ್ದಿ ಮಾತನ್ನು ಕೇಳದ ಮಗ ಮಾತಿಗೆ ಮಾತು ಬೆಳೆಸಿದ್ದಾಬೆ. ಜಗಳ ಅತಿರೇಕಕ್ಕೆ ತಿರುಗಿ ತಂದೆಯ ಸಾವಿನಲ್ಲಿ ಅಂತ್ಯ ಕಂಡಿದೆ.
ಸದ್ಯ ಮಂಜುನಾಥ್ ಹಾಗೂ ಅವರ ತಾತ ಪೊಲೀಸ್ ವಶದಲ್ಲಿದ್ದಾರೆ.


