ಬಳ್ಳಾರಿ: ಗೇಟ್ ಮುರಿದು ಬಿದ್ದು ತುಂಗಾ ಭದ್ರಾ ನದಿಯಲ್ಲಿದ್ದ ನೀರು ಅನಿವಾರ್ಯವಾಗಿ ಹೊರಗೆ ಬಿಡಲೇಬೇಕಾಗಿತ್ತು. ತುಂಗಾಭದ್ರಾ ನದಿ ನೀರಿನಿಂದ ಮೂರು ರಾಜ್ಯದ ರೈತರಿಗೆ ಅನುಕೂಲವಾಗಲಿದೆ. ಗೇಟ್ ಸರಿಯಾದ ಮೇಲೆ ನೀರಿನ ಬಗ್ಗೆಯೇ ರೈತರಿಗೆ ಚಿಂತೆಯಾಗಿತ್ತು. ಇದೀಗ ಆ ಚಿಂತೆ ಕಳೆದಿದೆ, ನೀರು ಮತ್ತೆ ಭರ್ತಿಯಾಗಿದೆ.
ಮಲೆನಾಡು ಭಾಗದಲ್ಲಿ ಹೆಚ್ಚು ಮಳೆಯಾದರೆ ತುಂಗಾಭದ್ರಾ ಡ್ಯಾಂ ತುಂಬುವ ನಿರೀಕ್ಷೆ ಇತ್ತು. ಅದರಂತೆ ಗೇಟ್ ರಿಪೇರಿ ಕಾರ್ಯದ ಬಳಿಕ ಮಲೆನಾಡು ಭಾಗದಲ್ಲಿ ಜೋರು ಮಳೆಯಾಗಿದೆ. ಹೀಗಾಗಿ ನಿರೀಕ್ಷೆಗೂ ಮೀರಿ ಬಹಳ ಬೇಗನೇ ತುಂಗಾಭದ್ರಾ ಡ್ಯಾಂ ಭರ್ತಿಯಾಗಿದೆ. ಇದರಿಂದ ಡ್ಯಾಂ ಅಚ್ಚುಕಟ್ಟು ಪ್ರದೇಶದ ರೈತರ ಮೊಗದಲ್ಲಿ ಸಂತಸವೂ ಹೆಚ್ಚಾಗಿದೆ.
‘ಎಲ್ಲರ ಪ್ರಾರ್ಥನೆಯಿಂದ, ವರುಣನ ಕೃಪೆಯಿಂದ ತುಂಗಾಭದ್ರಾ ಡ್ಯಾಂ ಮತ್ತೆ ತುಂಬಿದೆ. ಹೆಚ್ಚುವರಿ ನೀರನ್ನು ನದಿಗೆ ಕ್ರೈಸ್ಟ್ ಗೇಟ್ ಮುಖಾಂತರ ಬಿಡಲಾಗುವುದು’ ಎಂದು ಜಿಲ್ಲಾಧಿಕಾರಿಗಳ ಕಚೇರಿ ತಿಳಿಸಿದೆ. ತುಂಗಾ ಭದ್ರಾ ಜಲಾಶಯದಲ್ಲಿ 90 ಟಿಎಂಸಿ ನೀರು ಜಾಸ್ತಿಯಾದಾಗಲೇ ಭರ್ತಿಯಾಗುವ ಮುನ್ಸೂಚನೆ ಸಿಕ್ಕಿತ್ತು. ಆದರೆ ಗೇಟ್ ಕಿತ್ತುಕೊಂಡು ಬಿಟ್ಟಿತ್ತು. ದುರಸ್ತಿ ಕಾರ್ಯ ನಡೆಯುವಾಗಲೇ ಸಿಎಂ ಸಿದ್ದರಾಮಯ್ಯ ಅವರು ಮತ್ತೊಮ್ಮೆ ನೀರು ತುಂಬುತ್ತೆ ಎಂಬ ಭರವಸೆಯನ್ನು ನೀಡಿದ್ದರು. ಇದೀಗ ಅದು ಸತ್ಯವಾಗಿದೆ. ತುಂಗಾಭದ್ರಾ ಜಲಾಶಯದಲ್ಲಿ ಇಂದಿನ ನೀರಿನ ಮಟ್ಟ: 1631.92 ಅಡಿ ಇದೆ. ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ : 105.788 ಟಿಎಂಸಿಯನ್ನು ಹೊಂದಿದೆ. ಕಳೆದ 24 ಗಂಟೆಯ ಒಳಹರಿವು ಸರಾಸರಿ : 39945 ಕ್ಯುಸೆಕ್ ಆಗಿದೆ. ಇನ್ನು ಕಳೆದ 24 ಗಂಟೆಯ ಹೊರ ಹರಿವು : 15235 ಕ್ಯುಸೆಕ್ ಆಗಿದೆ.
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಚಿತ್ರದುರ್ಗ ಫೆ. 06 :…
ಚಿತ್ರದುರ್ಗ. ಫೆ.06: ಎಲ್ಲರೂ ಕೈಜೋಡಿಸಿ ಟಿಬಿ ಮುಕ್ತ ಸಮಾಜ ನಿರ್ಮಾಣ ಮಾಡೋಣ ಎಂದು ಕಾಸವರಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ…
ಚಿತ್ರದುರ್ಗ, ಫೆಬ್ರವರಿ. 06 : ಜಿಲ್ಲಾಸ್ಪತ್ರೆಯ ಕಾರ್ಯವೈಖರಿಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ.ನಾಗಲಕ್ಷ್ಮೀ ಚೌಧರಿ ಬೇಸರ ವ್ಯಕ್ತಪಡಿಸಿದರು. ನಗರದ…
ಚಿತ್ರದುರ್ಗ. ಫೆ.05: ಜಿಲ್ಲೆಯಲ್ಲಿ ಬಾಲ್ಯವಿವಾಹ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು, ಬಾಲ್ಯವಿವಾಹಕ್ಕೆ ಬಡತನವೇ ಪ್ರಮುಖ ಕಾರಣ. ಹಾಗಾಗಿ ಸರ್ಕಾರದ ಯೋಜನೆ, ಸೌಲಭ್ಯಗಳನ್ನು…
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 06 : ನಗರದ ಪ್ರತಿಷ್ಠಿತ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯ ಐಸಿಎಸ್‍ಸಿ ವಿಭಾಗದ 9ನೇ ತರಗತಿಯಲ್ಲಿ…
ಶಿವಮೊಗ್ಗ: ವೈದ್ಯೋ ನಾರಾಯಣ ಹರಿ ಎಂಬ ಮಾತಿದೆ. ಈ ನಾಣ್ನುಡಿಯಂತೆ ಜನರ ಪರವಾಗಿ ವೈದ್ಯಕೀಯ ಸೇವೆ ಮಾಡುವುದು ತುಂಬಾ ಕಡಿಮೆ…