ರೈತರು ಬೆಳೆ ಸಮೀಕ್ಷೆ ಮಾಡುವಾಗ ನಿಖರ ಬೆಳೆ ನಮೂದಿಸಿ : ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ

ದಾವಣಗೆರೆ. ಮಾ.05: ರೈತರು ಬೆಳೆ ಸಮೀಕ್ಷೆ ಕೈಗೊಂಡಾಗ ತಾವು ಬೆಳೆದಿರುವ ಬೆಳೆ ಹಾಗೂ ವಿಸ್ತೀರ್ಣವನ್ನು ನಿಖರವಾಗಿ ದಾಖಲಿಸಬೇಕು. ಜಗಳೂರು ತಾಲ್ಲೂಕಿನ ಬಿಳಿಚೋಡು ಹೋಬಳಿ ಅಸಗೋಡು ಗ್ರಾಮ ವ್ಯಾಪ್ತಿಯಲ್ಲಿ 545 ಎಕರೆ ಟೊಮೆಟೊಗೆ ವಿಮೆ ಪಾವತಿಸಿದ್ದು ವಾಸ್ತವದಲ್ಲಿ 11.23 ಎಕರೆ ಟೊಮೆಟೊ ಬೆಳೆ ಬೆಳೆಯಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದ್ದಾರೆ.

 

ಪ್ರಸಕ್ತ ಸಾಲಿನ ಹಿಂಗಾರು ಹಂಗಾಮಿನಲ್ಲಿ À ಬಿಳಿಚೋಡು ಹೋಬಳಿಯ ಅಸಗೋಡು ಗ್ರಾಮದಲ್ಲಿ ಟೊಮೆಟೊ ಬೆಳೆಗೆ ರೈತರು ಬೆಳೆ ವಿಮಾ ಕಂತನ್ನು ಪಾವತಿಸಿದ್ದು, ಅಕ್ರಮವಾಗಿ ಬೆಳೆ ಸಮೀಕ್ಷೆ ಆಪ್‍ನಲ್ಲಿ ಟೊಮೆಟೊ ಬೆಳೆಯನ್ನು ಖಾಸಗಿ ನಿವಾಸಿಗಳ ನೆರವಿನಿಂದ ದಾಖಲಿಸಲಾಗಿದೆ. ಸಾಂಪ್ರದಾಯಿಕವಾಗಿ ಬೆಳೆಯಲ್ಪಡುವ ವಿಸ್ತೀರ್ಣಕ್ಕಿಂತಲೂ ಹೆಚ್ಚಿನ ಪ್ರದೇಶದಲ್ಲಿ ಟೊಮೆಟೊ ಬೆಳೆಯು ದಾಖಲಾಗಿದ್ದರಿಂದ, ಜಿಲ್ಲೆಯ ಉಪ ವಿಭಾಗಾಧಿಕಾರಿಗಳ ನೇತೃತ್ವದಲ್ಲಿ ತಂಡಗಳನ್ನು ರಚಿಸಿ ಭೌತಿಕವಾಗಿ 307 ಪ್ಲಾಟ್ ಗಳನ್ನು ಪುನರ್ ಪರಿಶೀಲಿಸಿದಾಗ ಕೇವಲ 13 ಪ್ಲಾಟುಗಳಲ್ಲಿ ಟೊಮೆಟೊ ಬೆಳೆದಿರುವುದು ಕಂಡು ಬಂದಿದೆ. 545 ಎಕರೆ ಪ್ರದೇಶಕ್ಕೆ ಬೆಳೆ ವಿಮಾ ಕಂತನ್ನು ಪಾವತಿಸಲಾಗಿದ್ದು, ಕೇವಲ 11.23 ಎಕರೆ ಪ್ರದೇಶದಲ್ಲಿ ಟೊಮೆಟೊ ಬೆಳೆ ಕಂಡುಬಂದಿರುತ್ತದೆ.

 

ಬೆಳೆ ಸಮೀಕ್ಷೆಯನ್ನು ಮಾಡುವಾಗ ಅಥವಾ ಮಾಡಿಸುವಾಗ ಕಡ್ಡಾಯವಾಗಿ ತಾವು ಬೆಳೆದಿರುವ ಬೆಳೆ ಹಾಗೂ ವಿಸ್ತೀರ್ಣವನ್ನು ಪ್ರಲೋಭನೆಗೆ ಒಳಗಾಗದೇ ತಾವು ನಿಖರವಾಗಿ ಬೆಳೆದ ಬೆಳೆಯನ್ನು ದಾಖಲಿಸಬೇಕು. ಯಾರಾದರೂ ತಪ್ಪು ಮಾಹಿತಿ ನೀಡಲು ಆಮಿಷವೊಡ್ಡಿದಲ್ಲಿ ಜಿಲ್ಲಾಡಳಿತದ ಗಮನಕ್ಕೆ ತರಬಹುದೆಂದು ಜಿಲ್ಲಾಧಿಕಾರಿಯವರು ತಿಳಿಸಿದ್ದಾರೆ.

 

ಬೆಳೆ ವಿಮೆ ಪರಿಹಾರಕ್ಕೆ ಸಂಬಂಧಿಸಿದಂತೆ ರೈತರು ಪಾವತಿಸಿರುವ ಬೆಳೆ ವಿಮಾ ಕಂತು ಹಾಗೂ ಬೆಳೆದಿರುವ ಬೆಳೆ ಮತ್ತು ವಿಸ್ತೀರ್ಣ ಬಹಳ ಮುಖ್ಯವಾಗಿರುತ್ತದೆ. ರೈತರು ತಾವು ಬೆಳೆದಿರುವ ಬೆಳೆಯನ್ನು “ಬೆಳೆ ಸಮೀಕ್ಷೆ” ಆಪ್ ನಲ್ಲಿ ದಾಖಲಿಸಲು  ಅವಕಾಶವಿರುತ್ತದೆ. ರೈತರು ತಾವು ಬೆಳೆದಿರುವ ಬೆಳೆಯನ್ನು ಬೆಳೆ ಸಮೀಕ್ಷೆ ಆಪ್ ನಲ್ಲಿ ದಾಖಲಿಸಲು ಕಷ್ಟವಾದಲ್ಲಿ ಸಂಬಂಧಿಸಿದ ಗ್ರಾಮದಲ್ಲಿನ ಖಾಸಗಿ ನಿವಾಸಿಗಳಿಂದ ಬೆಳೆ ದಾಖಲೀಕರಣವನ್ನು ಕೈಗೊಳ್ಳಲಾಗುತ್ತಿದ್ದು,. ಜಿಲ್ಲಾಡಳಿತದಿಂದ ಈ ಚಟುವಟಿಕೆಯನ್ನು ಅನುμÁ್ಠನಗೊಳಿಸಲಾಗುತ್ತಿದೆ. ಬೆಳೆ ನಷ್ಟ ಹೊಂದಿರುವ ರೈತರಿಗೆ ವಿಮೆ ಪರಿಹಾರ ದೊರಕಿಸಿಕೊಡಲು ನಿಯಮಾನುಸಾರ ಕ್ರಮ ಜರುಗಿಸಲಾಗುತ್ತಿದೆ. ಕಳೆದ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಗೆ ರೂ.140 ಕೋಟಿಗಳಿಗಿಂತಲೂ ಹೆಚ್ಚು ವಿಮಾ ಪರಿಹಾರವಾಗಿ ನೀಡಿದ್ದು ಹಣ ನೇರವಾಗಿ ರೈತರ ಖಾತೆಗಳಿಗೆ ಜಮೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

suddionenews

Recent Posts

ಆಲಪ್ಪುಳ ಜಿಮ್ಖಾನಾ’ ಕರ್ನಾಟಕ ಜನರ ಮನಸ್ಸು ಗೆದ್ದ ಕ್ರೀಡಾ ಹಾಸ್ಯ ಚಿತ್ರ!

  ಅಲಪ್ಪುಳ ಜಿಮ್ಖಾನಾ ಎಂಬುದು ಮಲಯಾಳಂ ಆಕ್ಷನ್ ಚಿತ್ರ, ಖಲೀದ್ ರೆಹಮಾನ್ ನಿರ್ದೇಶಿಸಿದ್ದಾರೆ, ಇದರಲ್ಲಿ ನಾಸ್ಲಿನ್ ಗಫೂರ್ ಮತ್ತು ಲುಕ್ಮಾನ್…

4 hours ago

ಈ ರಾಶಿಯವರು ಮದುವೆಗೆ ತುಂಬಾ ಹಠ ಮಾಡುವವರು ಹೇಳಿದ ಮಾತು ಕೇಳುವುದೇ ಇಲ್ಲ

ಈ ರಾಶಿಯವರು ಮದುವೆಗೆ ತುಂಬಾ ಹಠ ಮಾಡುವವರು ಹೇಳಿದ ಮಾತು ಕೇಳುವುದೇ ಇಲ್ಲ, ಈ ರಾಶಿಯವರ ಭಾಗ್ಯ ಎನ್ನಬೇಕೋ ಪುಣ್ಯ…

10 hours ago

ಪೋಕ್ಸೋ ಹಾಗೂ ಬಾಲ್ಯ ವಿವಾಹ ತಡೆಗೆ ನಾಲ್ಕು ಹಂತದಲ್ಲಿ ಜಾರಿ ತಂಡಗಳ ರಚನೆ : ಜಿಲ್ಲಾಧಿಕಾರಿ ಸೂಚನೆ

ಚಿತ್ರದುರ್ಗ.ಎಪ್ರಿಲ್.11: ಜಿಲ್ಲೆಯಲ್ಲಿ ಪೋಕ್ಸೋ ಹಾಗೂ ಬಾಲ್ಯ ವಿವಾಹ ಪ್ರಕರಣಗಳ ತಡೆಗೆ ಸಮಗ್ರ ಯೋಜನೆ ರೂಪಿಸುವುದರೊಂದಿಗೆ ಹಳ್ಳಿ, ಗ್ರಾಮ ಪಂಚಾಯಿತಿ, ತಾಲ್ಲೂಕು…

20 hours ago

ವಕ್ಫ್ ಬಿಲ್ ವಿರೋಧಿಸಿ ಪ್ರಚೋದನಕಾರಿ ಹೇಳಿಕೆ : ಸೂಕ್ತ ಕ್ರಮಕ್ಕೆ ಬಿಜೆಪಿ ಒತ್ತಾಯ

ಸುದ್ದಿಒನ್, ದಾವಣಗೆರೆ, ಏಪ್ರಿಲ್. 11 : ಮಹಾನಗರ ಪಾಲಿಕೆಯ ಕಾಂಗ್ರೆಸ್ ಮಾಜಿ ಕಾರ್ಪೊರೇಟರ್ ವಕ್ಫ್ ಬಿಲ್ ವಿರೋಧಿಸಿ ಪ್ರಚೋದನಕಾರಿಯಾಗಿ ಆಡಿದ…

20 hours ago

ಯತ್ನಾಳ್ ಪರವಾಗಿ ಮಾತನಾಡಿದ್ದ ಜಯಮೃತ್ಯುಂಜಯ ಸ್ವಾಮೀಜಿ; ಎಚ್ಚರಿಕೆ ನೀಡಿದ ಪಂಚಮಸಾಲಿ ಟ್ರಸ್ಟ್

ಹುಬ್ಬಳ್ಳಿ; ಇತ್ತೀಚೆಗಷ್ಟೇ ಶಾಸಕ ಯತ್ನಾಳ್ ಅವರನ್ನು ಬಿಜೆಪಿ ಉಚ್ಛಾಟನೆ ಮಾಡಿದೆ. ಆರು ವರ್ಷಗಳ ಕಾಲ ಪಕ್ಷದಿಂದ ಹೊರಗಿಟ್ಟಿದೆ. ಹೀಗಾಗಿ ಪಂಚಮಸಾಲಿ…

21 hours ago

ಹಿರಿಯೂರಿನಲ್ಲಿ ಆಲಿಕಲ್ಲು ಸಹಿತ ಮಳೆಯ ಆರ್ಭಟ : ಬೆಳೆ ಹಾನಿ

ಸುದ್ದಿಒನ್, ಹಿರಿಯೂರು, ಏಪ್ರಿಲ್. 11 : ನಗರ ಪ್ರದೇಶ ಹಾಗೂ ತಾಲೂಕಿನ ವಿವಿಧ ಕಡೆಗಳಲ್ಲಿ ಗಾಳಿ, ಗುಡುಗು, ಮಿಂಚು ಸೇರಿದಂತೆ…

21 hours ago