in

ರೈತರು ಎಷ್ಟೇ ಕೃಷಿ ಮಾಡಿದ್ರು ನೆಮ್ಮದಿ ಇಲ್ಲ : ಕೃಷಿ ಸಚಿವೆ ಶೋಭಾ ಕರಂದ್ಲಾಜೆ

suddione whatsapp group join

ಕಲಬುರಗಿ: ಕೇಂದ್ರ ಸರ್ಕಾರದಲ್ಲಿ ಸಚಿವೆಯಾಗಿ ಸ್ಥಾನ ಪಡೆದಿರೋ ನೂತ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಇಂದು ಕಲಬುರಗಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಮಾತನಾಡಿರುವ ಅವರು, ರೈತರು ಎಷ್ಟೇ ಕೃಷಿ ಮಾಡಿದ್ದರೂ ನೆಮ್ಮದಿಯಿಲ್ಲ, ರೈತರು ಹಲವಾರು ವರ್ಷಗಳಿಂದ ಕಷ್ಟದಲ್ಲಿದ್ದಾರೆ, ಅವರ ಕಷ್ಟಗಳ ನಿವಾರಣೆಗಾಗಿ ನಾನು ಬದ್ಧನಾಗಿದ್ದು, ಕೃಷಿ ಲಾಭದಾಯಕ ಅಲ್ಲ ಎನಿಸಿದೆ. ಹೀಗಾಗಿ ಕೃಷಿಕರ ಮಕ್ಕಳು ಕೆಲಸಕ್ಕಾಗಿ ವಲಸೆ ಹೋಗುತ್ತಿದ್ದಾರೆ ಎಂದಿದ್ದಾರೆ.

ಇನ್ನು ನಾನೊಬ್ಬಳು ಕೃಷಿಕರ ಮಗಳಾಗಿದ್ದು, ನನಗೆ ಕೃಷಿ ಮಂತ್ರಿ ಆಗೋ ಅವಕಾಶ ಸಿಕ್ಕಿದೆ, ಈ ಖಾತೆ ಬಹಳ ಕಷ್ಟಕರವಾದ ಖಾತೆ ಆದರೂ ಕೃಷಿ ತಜ್ಞರ ಮಾಹಿತಿ ಆಧರಿಸಿ ಉತ್ತಮ ಕೆಲಸ ಮಾಡುತ್ತೇನೆ. 2021ರಲ್ಲಿ ಕೃಷಿಗಾಗಿ ಕೇಂದ್ರ ಬಜೆಟ್‍ನಲ್ಲಿ ಕೃಷಿಗಾಗಿ 123000 ಕೋಟಿ ರೂ. ನೀಡಿದೆ. ಇಂದು ಸಮಾಜ ಮತ್ತೆ ಕೃಷಿ ಕಡೆ ಮುಖ ಮಾಡ್ತಿದ್ದಾರೆ.

ಕೃಷಿ ರೈತರಿಗೆ ಲಾಭದಾಯಕವಾಗಿಸೋದು ನಮಗೆ ಸವಾಲಿನ ಕೆಲಸ. ಸಣ್ಣ ರೈತರನ್ನು ಒಟ್ಟುಗೂಡಿಸಿ ಸಂಘಗಳನ್ನು ಮಾಡುವ ಕೆಲಸ ಮಾಡಬೇಕಾಗುತ್ತದೆ. ಸಣ್ಣ ರೈತರಿಗೆ ಕೃಷಿ ಸಾಧನಗಳನ್ನು ಬಾಡಿಗೆಗೆ ಕೋಡುವ ಕೆಲಸ ಮಾಡಬೇಕಿದೆ. ಕೃಷಿ ಉತ್ಪನ್ನ ಉತ್ಪಾದನೆ, ಮಾರ್ಕೆಟಿಂಗ್‍ಗೆ ಕೇಂದ್ರ ಸರ್ಕಾರ ಒತ್ತು ಕೊಡುತ್ತಿದೆ ಎಂದು ಹೇಳಿದ್ದಾರೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಮನೆ ಮನೆಗೂ ಪತ್ರಿಕೆ ತಲುಪಿಸುವವರಿಗೆ ಸಾಮಾಜಿಕ ಭದ್ರತೆಯ ಭರವಸೆ ನೀಡಿದ ಸಚಿವ

ಅದೆಷ್ಟೋ ವರ್ಷಗಳಿಂದ ಕಾಯ್ತಿದ್ದ ಘಳಿಗೆ : ಒಂದಾಗೆ ಬಿಟ್ರು ರಾಜ್, ವಿಷ್ಣು ಫ್ಯಾನ್ಸ್..ಕಾರಣ ಇಲ್ಲಿದೆ