ಮಾಜಿ ಸಂಸದ ಶಿವರಾಮೇಗೌಡ ವಿರುದ್ಧ ರೊಚ್ಚಿಗೆದ್ದ ದಿ.ಮಾದೇಗೌಡರ ಅಭಿಮಾನಿಗಳು..!

suddionenews
1 Min Read

ಮಂಡ್ಯ: ಮಾಜಿ ಸಂಸದ ಶಿವರಾಮೇಗೌಡ ವಿರುದ್ಧ ಮಂಡ್ಯ ಜಿಲ್ಲೆಯಲ್ಲಿ ಆಕ್ರೋಶ ಭುಗಿಲೆದ್ದಿದೆ. ಪ್ರತಿಭಟಿಸಿ, ಮಾಜಿ ಸಂಸದರ ವಿರುದ್ಧ ಧಿಕ್ಕಾರ ಕೂಗುತ್ತಿದ್ದಾರೆ. ದಿ. ಮಾದೇಗೌಡರ ವಿರುದ್ಧವಾಗಿ ಅವಹೇಳನವಾಗಿ ಮಾತಿಡಿದ್ದು, ಮಾದೇಗೌಡ ಅವರ ಬೆಂಬಲಿಗರನ್ನ ಕೆರಳಿಸಿದೆ.

ಮದ್ದೂರು-ಮಳವಳ್ಳಿ ರಾ.ಹೆ ತಡೆದು ಮಾದೇಗೌಡ ಅವರ ಅಭಿಮಾನಿಗಳು ಆಕ್ರೋಶ ಹೊರ ಹಾಕಿದ್ದಾರೆ. ಮದ್ದೂರು ತಾಲೂಕಿನ ಕೆ ಎಂ ದೊಡ್ಡಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಶಿವರಾಮೇಗೌಡ ಅವರ ಪ್ರತಿಕೃತಿ ದಹಿಸಿದ್ದಾರೆ.

ಶಿವರಾಮೇಗೌಡರದ್ದೆ ಎನ್ನಲಾದ ಆಡಿಯೋವೊಂದು ಇತ್ತೀಚೆಗೆ ವೈರಲ್ ಆಗಿತ್ತು. ಆ ಆಡಿಯೋದಲ್ಲಿ ದಿ.ಮಾದೇಗೌಡ ಅವರಿಗೆ ಎಕ್ಕಡದಲ್ಲಿ ಹೊಡೆದಿದ್ದೆ ಎಂದು ಹೇಳಲಾಗಿತ್ತು. ಆ ಆಡಿಯೋ ನಂದೆ ಎಂದು ಶಿವರಾಮೇಗೌಡ ಒಪ್ಪಿಕೊಂಡಿದ್ದಾರೆ. ಈ ಬೆನ್ನಲ್ಲೇ ಜೆಡಿಎಸ್ ಪಕ್ಷ ಅವರನ್ನ ಉಚ್ಛಾಟನೆ ಮಾಡಿದೆ. ಇದೀಗ ಮಾದೇಗೌಡ ಅವರ ಅಭಿಮಾನಿಗಳು ಅವರ ವಿರುದ್ಧ ಧ್ವನಿ ಎತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *