in

ಭದ್ರಾ ಜಲಾಶಯದಿಂದ ವಿವಿ ಸಾಗರ ಜಲಾಶಯಕ್ಕೆ ನೀರು ಲಿಫ್ಟ್ ಮಾಡುವ ಅವಧಿ ವಿಸ್ತರಿಸುವಂತೆ ಮುಖ್ಯಮಂತ್ರಿಗಳಿಗೆ ನೀರಾವರಿ ಹೋರಾಟ ಸಮಿತಿ ಒತ್ತಾಯ

suddione whatsapp group join

ಚಿತ್ರದುರ್ಗ, (ಸೆ.16) : ಭದ್ರಾ ಜಲಾಶಯದಿಂದ ವಿವಿ ಸಾಗರ ಜಲಾಶಯಕ್ಕೆ ನೀರು ಲಿಫ್ಟ್ ಮಾಡುವ ಅವಧಿ ವಿಸ್ತರಣೆ ಮಾಡುವಂತೆ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ನೀರಾವರಿ ಹೋರಾಟ ಸಮಿತಿ ಒತ್ತಾಯಿಸಿದೆ.

ಜಿಲ್ಲಾಧಿಕಾರಿ ಮೂಲಕ ಸಿಎಂಗೆ ಮನವಿ ಸಲ್ಲಿಸಿದ ಸಮಿತಿಯವರು, ಭದ್ರಾ ಮೇಲ್ದಂಡೆ ಯೋಜನೆಯಡಿ ಭದ್ರಾ ಜಲಾಶಯದಿಂದ ಎರಡು ಹಂತದಲ್ಲಿ ನೀರನ್ನು ಲಿಫ್ಟ್ ಮಾಡಿ ವಿವಿ ಸಾಗರ ಜಲಾಶಯಕ್ಕೆ ಬಿಡಲಾಗುತ್ತಿದೆ. ಪ್ರಸಕ್ತ ಸಾಲಿನ ಲಿಫ್ಟ್ ಅವಧಿ ಅಕ್ಡೋಬರ್ 15 ಕ್ಕೆ ಪೂರ್ಣಗೊಳ್ಳಲಿದೆ.  ರಾಜ್ಯ ಸರ್ಕಾರ ಜೂನ್ 15 ರಿಂದ ಅಕ್ಟೋಬರ್ 15 ವರೆಗೆ ನೀರನ್ನು ಲಿಫ್ಟ್ ಮಾಡಲು ಅವಕಾಶ ನೀಡಿದೆ. ಈ ಅವಧಿಯನ್ನು ಮುಂದಿನ ಜನವರಿವರೆಗೆ ವಿಸ್ತರಿಸಬೇಕೆಂದು ಆಗ್ರಹಿಸಿದರು.

ಭದ್ರಾ ಜಲಾಶಯದಲ್ಲಿನ ನೀರು ಸಂಗ್ರಹ ಸಾಮಥ್ರ್ಯವನ್ನು ಆಧರಿಸಿ ನೀರನ್ನು ಲಿಪ್ಠ್ ಮಾಡಲಾಗುತ್ತಿದೆ. ಭದ್ರಾ ಜಲಾಶಯದಲ್ಲಿ ಯೋಜನೆಗೆ 12.50 ಟಿಎಂಸಿ ನೀರು ಕಾಯ್ದಿರಿಸಲಾಗಿದೆ. ಹಾಲಿ ಭಧಾರ ಜಲಾಶಯ ಮತ್ತೆ ಭರ್ತಿಯಾಗಿದೆ .ಸೆಪ್ಟಂಬರ್ 15 ರ ಗುರುವಾರ ಜಲಾಶಯದ ನೀರಿನ ಮಟ್ಟ 185.50 ಅಡಿಯಷ್ಟಿದೆ. ಕೇವಲ ಅರ್ಧ  ಅಡಿ ಮಾತ್ರ ಬಾಕಿ ಉಳಿದಿದೆ. ಜಲಾಶಯದಿಂದ 14 ಸಾವಿರ ಕ್ಯೂಸೆಕ್ಸ್ ನೀರನ್ನು ಹೊರ ಬಿಡಲಾಗುತ್ದಿದೆ. ಜಲಾಶಯದಿಂದ ಹೊರ ಹೋಗುವ ನೀರನ್ನು ಬಳಕೆ ಮಾಡಿಕೊಂಡಲ್ಲಿ ವಿವಿ ಸಾಗರ ಜಲಾಶಯದ ಸಂಗ್ರಹ ಸಾಮಥ್ರ್ಯ ಇಮ್ಮಡಿಗೊಳಿಸಬಹುದಾಗಿದೆ.

ಭದ್ರಾ ಮೇಲ್ದಂಡೆ ಕಾಮಗಾರಿ ಪೂರ್ಣಗೊಳ್ಳದ ಕಾರಣ ಕೇವಲ ಒಂದು ಮೋಟಾರು ಪಂಪ್ ಗಳಲ್ಲಿ ನೀರನ್ನು ಲಿಫ್ಟ ಮಾಡಲಾಗುತ್ತಿದೆ ಹಾಗೊದು ವೇಳೆ ನಾಲ್ಕು ಪಂಪುಗಳಲ್ಲಿ ನೀರನ್ನು ಲಿಫ್ಟ್ ಮಾಡಿದ್ದರೆ ಇμÉ್ಟೂತ್ತಿಗೆ ವಿವಿ ಸಾಗರ ಜಲಾಶಯವನ್ನು ಭರ್ತಿ ಮಾಡಬಹುದಿತ್ತು. ಅದು ಸಾಧ್ಯವಾಗದೇ ಹೋಗಿದೆ. ಜಲಾಶಯ ಭರ್ತಿಯಾಗಿ ಹೊರ ಹೋಗುವ ನೀರನ್ನು ಬಳಕೆ ಮಾಡಿಕೊಂಡು  ನೀರಿನ ನಿರ್ವಹಣೆ ಸೂತ್ರ ಅನುಸರಿಸಬೇಕಿದೆ. ಹಾಗಾಗಿ ರಾಜ್ಯ ಸರ್ಕಾರ ಕೂಡಲೇ ಜಲ ಸಂಪನ್ಮೂಲ ಇಲಾಖೆಗೆ ನಿರ್ದೇಶನ ನೀಡಿ ಭದ್ರಾ ಜಲಾಶಯದಿಂದ ನೀರನ್ನು ಲಿಫ್ಟ್ ಮಾಡುವ ಅವಧಿಯನ್ನು ಜನವರಿಗೆ ವರೆಗೆ ವಿಸ್ತರಿಸಿದರೆ ನಾಲ್ಕು ಟಿಎಂಸಿಯಷ್ಟು ಮೇಲೆತ್ತಬಹುದು,. ಭದ್ಹಾ ಜಲಾಶಯ ಹಾಲಿ ಭರ್ತಿಯಾಗಿದ್ದು ಮತ್ತೆ ಅಕ್ಟೋಬರ್ ನಲ್ಲಿ ಮಳೆ ಬರುವ ಸಾಧ್ಯತೆಗಳು ಹೆಚ್ಚಿವೆ. ಆಗಲೂ ಜಲಾಶಯ ಮತ್ತೆ ಭರ್ತಿ ಆಗುತ್ತದೆ.

ನೀರು ಲಿಫ್ಟ್ ಮಾಡುವ ಅವಧಿಯನ್ನು ವಿಸ್ತರಿಸಿದರೆ ಮುಂಬರುವ ಬೇಸಗೆ ದಿನಗಳನ್ನು ಚಿತ್ರದುರ್ಗ ಜಿಲ್ಲೆ ಸಮರ್ಥವಾಗಿ  ಎದುರಿಸಲು ಸಾಧ್ಯವಾಗುತ್ತದೆ. ಚಳ್ಳಕೆರೆ ಹಾಗೂ ಮೊಳಕಾಲ್ಮುರು ತಾಲೂಕುಗಳ ಬ್ಯಾರೇಜುಗಳನ್ನು ಭರ್ತಿ ಮಾಡಬಹುದು. ವಿವಿ ಸಾಗರ ಅಚ್ಚುಕಟ್ಟು ರೈತರ ಹಿತ ಕಾಪಾಡಬಹುದು. ಹಾಗಾಗಿ ಸರ್ಕಾರ ತುರ್ತಾಗಿ ತೀರ್ಮಾನ ಕೈಗೊಂಡು ಜನವರಿ ಅಂತ್ಯದವರೆಗೆ ನೀರನ್ನು ಲಿಫ್ಟ ಮಾಡಬೇಕೆಂದು ಹೋರಾಟ ಸಮಿತಿ ಆಗ್ರಹಿಸುತ್ತದೆ.

ನೀರಾವರಿ ಹೋರಾಟ ಸಮಿತಿ ಸಂಚಾಲಕ ಕೆ.ಆರ್ ದಯಾನಂದ್, ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ನುಲೇನೂರು ಎಂ.ಶಂಕರಪ್ಪ, ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಸುರೇಶ್ ಬಾಬು, ಜಿಲ್ಲಾ ಉಪಾದ್ಯಕ್ಷ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಮಲ್ಲಾಪುರ ತಿಪ್ಪೇಸ್ವಾಮಿ, ಹಿರಿಯೂರು ತಾಲೂಕು ಅಧ್ಯಕ್ಷ ಬಿ.ಓ.ಶಿವಕುಮಾರ್, ಹಂಪಯ್ಯನಮಾಳಿಗೆ ಧನಂಜಯ, ಮೇಟಿಕುರ್ಕೆ ತಿಪ್ಪೇಸ್ವಾಮಿ, ಹಿರಿಯೂರಿನ ಗೌಸ್ ಪೀರ್ , ಸಜ್ಜನಕೆರೆ ರೇವಣ್ಣ ಉಪಸ್ಥಿತರಿದ್ದರು.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ರಾಯಚೂರಿನಲ್ಲಿ ವೈರಲ್ ಫೀವರ್ : 600ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು..!

ಚಿತ್ರದುರ್ಗ ಜಿಲ್ಲೆಯಲ್ಲಿ 15 ಅಂಗನವಾಡಿ ಕಾರ್ಯಕರ್ತೆ, 81 ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ