in

ಚಿತ್ರದುರ್ಗ ನಗರಸಭೆಯ ಭ್ರಷ್ಟಾಚಾರವನ್ನು ಬಯಲಿಗೆಳೆಯುವೆ : ಬಿ.ಎಲ್.ರವಿಶಂಕರ್‌ ಬಾಬು

suddione whatsapp group join

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತ್ರದುರ್ಗ,(ಜ.27): ಜೆ.ಸಿ.ಆರ್.ಬಡಾವಣೆ ಏಳನೇ ಕ್ರಾಸ್‍ನಲ್ಲಿರುವ ಉದ್ಯಾನವನದ ಜಾಗವನ್ನು ಕಬಳಿಸಿದ್ದೇನೆಂದು ಬಿಜೆಪಿ ನಗರ ಮಂಡಲ ಅಧ್ಯಕ್ಷ ನವೀನ್ ಚಾಲುಕ್ಯ ನನ್ನ ಮೇಲೆ ಸುಳ್ಳು ಆಪಾದನೆ ಮಾಡಿರುವುದರಲ್ಲಿ ಸತ್ಯಾಂಶವಿಲ್ಲವೆಂದು ನಗರಸಭೆ ಮಾಜಿ ಸದಸ್ಯ ಸಾಮಾಜಿಕ ಕಾರ್ಯಕರ್ತ ಬಿ.ಎಲ್.ರವಿಶಂಕರ್‍ಬಾಬು ಅಪವಾದಕ್ಕೆ ತಿರುಗೇಟು ನೀಡಿದರು.

ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿ.ಆರ್.ಉಲ್ಲಾಸ್ ಜಾಗವನ್ನು ಖರೀದಿ ಮಾಡಿದ್ದಾರೆ. ಅದು ಪಾರ್ಕ್ ಜಾಗವಲ್ಲ. ಚಳ್ಳಕೆರೆ ವಾಸಿಯಾದ ನವೀನ್ ಚಾಲುಕ್ಯರವರ ಪತ್ನಿ ನಗರಸಭೆ ಸದಸ್ಯೆ ಅವರ ಸದಸ್ಯತ್ವವನ್ನು ವಜಾಗೊಳಿಸುವಂತೆ ನ್ಯಾಯಾಲಯದಲ್ಲಿ ದಾವೆ ಹೂಡಿದ್ದೇನೆ.

ನಗರಸಭೆ ಸದಸ್ಯನಾದಾಗಿನಿಂದಲೂ ನಾನು ಪ್ರಾಮಾಣಿಕವಾಗಿದ್ದೇನೆ. ನಗರದಲ್ಲಿರುವ ಒಳ್ಳೆ ರಸ್ತೆಗಳನ್ನೆಲ್ಲಾ ಕಿತ್ತು ಸಿಮೆಂಟ್ ರಸ್ತೆ ಮಾಡುತ್ತಿದ್ದಾರೆ. ನಗರಸಭೆಯಲ್ಲಿ ಕೋಟಿಗಟ್ಟಲೆ ಹಣ ಲೂಟಿಯಾಗುತ್ತಿದೆ. ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಈಗ ನಗರಸಭೆಗೂ ಕೈಹಾಕಿದ್ದಾರೆ.

ನಗರಸಭೆ ಈಗ ತಿಪ್ಪಾರೆಡ್ಡಿ ನಿವಾಸದಲ್ಲಿ ಕೇಂದ್ರ ಕಚೇರಿಯಾಗಿದೆ. ಹಾಗಾಗಿ ನಗರಸಭೆಯ ಒಂದೊಂದೆ ಭ್ರಷ್ಟಾಚಾರವನ್ನು ಬಯಲಿಗೆಳೆಯುವುದಾಗಿ ಬಿ.ಎಲ್.ರವಿಶಂಕರ್‌ ಬಾಬು ತಿಳಿಸಿದರು.

ನಾನು ನಗರಸಭೆ ಚುನಾವಣೆಗೆ ಸ್ಪರ್ಧಿಸಿದಾಗ ಕೇವಲ ಎರಡು ಲಕ್ಷ ರೂ.ಗಳು ಮಾತ್ರ ಖರ್ಚಾಗಿದೆ. ಈಗ ಚುನಾವಣೆಗೆ ನಿಲ್ಲುವವರು ಇಪ್ಪತ್ತೈದರಿಂದ ಐವತ್ತು ಲಕ್ಷ ರೂ.ಗಳವರೆಗೆ ಖರ್ಚು ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಗೆದ್ದು ಬಂದವರು ಎಷ್ಟರ ಮಟ್ಟಿಗೆ ಭ್ರಷ್ಟಾಚಾರ ಮಾಡಬಹುದು ಎನ್ನುವುದನ್ನು ಜನಸಾಮಾನ್ಯರೆ ಊಹಿಸಿಕೊಳ್ಳಬಹುದು.

ಆರ್.ಟಿ.ಐ.ಕಾರ್ಯಕರ್ತ ಹಾಗೂ ನರೇಂದ್ರಮೋದಿ ಅಭಿಮಾನಿಗಳ ಬಳಗದ ಅಧ್ಯಕ್ಷ ಪಿ.ಲೀಲಾಧರ ಠಾಕೂರ್ ಮಾತನಾಡಿ ಡಾ.ಭೀಮಪ್ಪನಾಯಕರವರು 1958 ರಲ್ಲಿ ಜೆ.ಸಿ.ಆರ್.ಬಡಾವಣೆಯಲ್ಲಿ ಲೇಔಟ್ ನಿರ್ಮಿಸಿದರು. ಆಗ ನಗರ ವಾಸಿಯಾದ ಶ್ರೀಮತಿ ಲಕ್ಷ್ಮಿನರಸಮ್ಮ ಕೋಂ ಲೇಟ್ ನಾಗಭೂಷಣನಾಯ್ಕರವರಿಗೆ ಚಿತ್ರದುರ್ಗದ ಅಂದಿನ ಪುರಸಭೆಯಿಂದ ಜಾಗ ಅಲಾಟ್ ಮಾಡಲಾಗಿತ್ತು. ಲಕ್ಷ್ಮಿನರಸಮ್ಮ ಮೃತಪಟ್ಟ ನಂತರ ಅವರ ವಾರಸುದಾರರಾದ ಶ್ರೀಮತಿ ನಂಜಮ್ಮನವರಿಗೆ ಫೌತಿ ಖಾತೆ ವರ್ಗಾವಣೆಯಾಗಿತ್ತು.

ನಂತರ ಬಿ.ಎಲ್.ರವಿಶಂಕರ್‍ಬಾಬುರವರ ಅಳಿಯ ಕಾರೇಹಳ್ಳಿ ಉಲ್ಲಾಸ್ ದಿನಾಂಕ: 20-2-2016 ರಂದು ಕ್ರಯಕ್ಕೆ ಪಡೆದಿದ್ದು, ಹಕ್ಕು ಮತ್ತು ಸ್ವಾಧೀನದಲ್ಲಿರುತ್ತದೆ. ಹಾಗಾಗಿ ಜಾಗ ಕಬಳಿಸುವ ಪ್ರಶ್ನೆಯ ಇಲ್ಲ. ನವೀನ್ ಚಾಲುಕ್ಯ ಬಿ.ಎಲ್.ರವಿಶಂಕರ್‍ಬಾಬುರವರ ಮೇಲೆ ಗುರುತರವಾದ ಆರೋಪ ಮಾಡಬೇಕಾದರೆ ದಾಖಲೆಗಳನ್ನು ಪರಿಶೀಲಿಸಬೇಕು. ನವೀನ್ ಚಾಲುಕ್ಯ ಅವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡಲಿದ್ದಾರೆ ಎಂದು ಹೇಳಿದರು.

ಚಿತ್ರದುರ್ಗದ ಅಭಿವೃದ್ದಿ ಬಗ್ಗೆ ಯಾರಾದರೂ ಅಸಮಾಧಾನಗೊಂಡು ಧ್ವನಿಯೆತ್ತಿದರೆ ಅಂತಹವರ ವಿರುದ್ದ ಇಲ್ಲಸಲ್ಲದ ಆರೋಪ ಮಾಡುವುದು ಬಿಜೆಪಿ.ಯವರಿಗೆ  ಸಾಮಾನ್ಯವಾಗಿಬಿಟ್ಟಿದೆ. 2013-14 ರಿಂದ 2018-19 ನೇ ಸಾಲಿನಲ್ಲಿ ಕುಡಿಯುವ ನೀರಿಗಾಗಿ ಸರ್ಕಾರದ ವತಿಯಿಂದ ನಗರದ 35 ವಾರ್ಡ್‍ಗಳಲ್ಲಿ ಕೊರೆಸಲಾಗಿರುವ ಕೊಳವೆಬಾವಿ ಹಾಗೂ ಮೋಟಾರ್ ಪೈಪ್ ಅಳವಡಿಕೆಯಲ್ಲಿಯೂ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದ್ದು, ಉನ್ನತ ಮಟ್ಟದ ತನಿಖೆಯಾಗಬೇಕೆಂದು ಪಿ.ಲೀಲಾಧರ ಠಾಕೂರ್ ಒತ್ತಾಯಿಸಿದರು.

What do you think?

-1 Points
Upvote Downvote

Written by suddionenews

Leave a Reply

Your email address will not be published.

GIPHY App Key not set. Please check settings

ರೈತರ ಸಮಸ್ಯೆಗಳನ್ನು ಪರಿಹರಿಸುವಂತೆ ಅಖಂಡ ಕರ್ನಾಟಕ ರೈತ ಸಂಘ ಮನವಿ

ಚಿತ್ರದುರ್ಗದ ಎಸ್‌.ಜೆ.ಎಂ.ಟಿ.ಯಲ್ಲಿ ಅದ್ದೂರಿಯಾಗಿ ನಡೆದ ಗ್ರಾಜ್ಯೂಯೇಷನ್ ಡೇ-2023