ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಹಮ್ಮಿಕೊಂಡಿದ್ದು, ಎಲ್ಲಾ ರಾಜ್ಯಕ್ಕೂ ಭೇಟಿ ನೀಡುತ್ತಿದ್ದಾರೆ. ಈ ಭೇಟಿಯ ವೇಳೆ ಹಲವರು ರಾಹುಲ್ ಗಾಂಧಿಗೆ ಜೊತೆಯಾಗುತ್ತಿದ್ದಾರೆ. ಇದೀಗ ರಾಜಸ್ಥಾನದಲ್ಲಿ ರಾಹುಲ್ ಗಾಂಧಿಗೆ ಆರ್ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಜೊತೆಯಾಗಿದ್ದಾರೆ.
Former Governor of RBI, Dr. Raghuram Rajan joined Rahul Gandhi in today’s #BharatJodoYatra pic.twitter.com/BQax4O0KSF
— Darshni Reddy (@angrybirdtweetz) December 14, 2022
ಇಂದು ಬೆಳಗ್ಗೆ ರಾಜಸ್ಥಾನದಿಂದ ಮತ್ತೆ ಯಾತ್ರೆ ಆರಂಭವಾಗಿದೆ. ಸವಾಯಿ ಮಾಧೋಪುರದ ಭಡೋತಿಯಿಂದ ಯಾತ್ರೆ ಪುನರಾರಂಭವಾಗಿದ್ದು, ಈ ಯಾತ್ರೆಯಲ್ಲಿ ಆರ್ಬಿಐ ಮಾಜಿ ಗವರ್ನರ್ ರಾಜನ್ ಸೇರಿಕೊಂಡಿದ್ದಾರೆ. ರಾಜನ್ ಅವರು ನೋಟು ಅಮಾನ್ಯೀಕರಣದ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ನೀತಿಯನ್ನು ಕಟುವಾಗಿ ಟೀಕಿಸಿದ್ದರು.
ಇದೀಗ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಳ್ಳುವ ಮೂಲಕ ರಾಹುಲ್ ಗಾಂಧಿ ಅವರಿಗೆ ಬೆಂಬಲವಾಗಿ ನಿಂತಿದ್ದಾರೆ. ಕನ್ಯಾಕುಮಾರಿಯಿಂದ ಶುರುವಾದ ಭಾರತ್ ಜೋಡೋ ಯಾತ್ರೆ 2023ರ ಫೆಬ್ರವರಿ ಆರಂಭದಲ್ಲಿ ಕಾಶ್ಮೀರ ತಲುಪಲಿದೆ. ಭಾರತ್ ಜೋಡೋ ಯಾತ್ರೆಯಲ್ಲಿ ಆಯಾ ರಾಜ್ಯದಲ್ಲಿ ಸಾಗುವಾಗ ಅಲ್ಲಿನ ಹೋರಾಟಗಾರರು, ರಾಜಕಾರಣಿಗಳು, ಸಿನಿಮಾ ಗಣ್ಯರು ಕೂಡ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸುತ್ತಿದ್ದಾರೆ.