Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕನ್ನಡ ನೆಲ, ಜಲ,ನಾಡ, ನುಡಿ ಬಗ್ಗೆ ಪ್ರತಿಯೊಬ್ಬರು ನಿತ್ಯ ಗೌರವಿಸುವ ಮನೋಭಾವ ರೂಡಿಸಿಕೊಳ್ಳಬೇಕು :  ಬಿ. ನಾರಾಯಣಪ್ಪ 

Facebook
Twitter
Telegram
WhatsApp

ಕುರುಗೋಡು. ನ.01 : ಕರ್ನಾಟಕದ ನೆಲ, ಜಲ, ನಾಡ, ನುಡಿಯನ್ನು ಉಳಿಸಿ ಬೆಳಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ತಹಸೀಲ್ದಾರ್ ಕೆ. ರಾಘವೇಂದ್ರ ರಾವು ಹೇಳಿದರು.

ಸಮೀಪದ ಎಚ್. ವಿರಾಪುರ ಗ್ರಾಮದ ಶ್ರೀ ಜ್ಞಾನ ಶಿವಯೋಗಿ ಜಡೇಶ ತಾತನ ಮಠದಲ್ಲಿ ಪತ್ರಕರ್ತರ ಸಹಯೋಗದೊಂದಿಗೆ ಮಠದ ಜಡೇಶ ತಾತನ ನೇತೃತ್ವದಲ್ಲಿ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಎಸ್. ಎಸ್. ಎಲ್. ಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು,
ದಕ್ಷಿಣ ಭಾರತದಲ್ಲಿ ಹರಡಿದ್ದ ಕನ್ನಡ ಭಾಷಿಕರ ಎಲ್ಲ ಪ್ರದೇಶಗಳನ್ನು ಒಗ್ಗೂಡಿಸಿ ಮೈಸೂರು ರಾಜ್ಯವು 1956 ರಲ್ಲಿ ಅಸ್ತಿತ್ವಕ್ಕೆ ಬಂದಿತು. ಕರ್ನಾಟಕ ಹುಟ್ಟಿಗೆ ಆಲೂರು ವೆಂಕಟರಾವ್‌ ಅವರು ಮೊದಲಿಗೆ ಕರ್ನಾಟಕ ಏಕೀಕರಣ ಚಳುವಳಿಯನ್ನು ಸ್ವಾತಂತ್ರ್ಯ ಪೂರ್ವವೇ 1905 ರಲ್ಲಿ ಆರಂಭಿಸಿದರು. ನಂತರ ಭಾರತಕ್ಕೆ ಸ್ವಾತಂತ್ರ್ಯ ದೊರೆತು ಗಣರಾಜ್ಯವಾದ ನಂತರ ಭಾಷೆಗಳ ಆಧಾರದ ಮೇಲೆ 1956ರ ನವೆಂಬರ್ 01 ರಂದು ರಾಜ್ಯಗಳನ್ನು ವಿಂಗಡಿಸಿದರು.
ಈ ಹಿನ್ನಲೆಯಲ್ಲಿ ಕರ್ನಾಟಕಕ್ಕೆ ಬಳ್ಳಾರಿ ಜಿಲ್ಲೆ ಸೇರಿಕೊಂಡಿರುವುದು ಸಂತೋಷದ ವಿಷಯ ಈ ಹಿಂದೆ ಬಳ್ಳಾರಿ ಯಲ್ಲಿ ಕೂಡ ಕನ್ನಡದ ಮಾತೃ ಭಾಷೆ ಯನ್ನು ಉಳಿಸಿ ಬೆಳಿಸುವುದಕ್ಕೆ ಅನೇಕ ಗಣ್ಯರ ಪಾತ್ರ ಮಹತ್ವವಾಗಿದೆ, ಆದರೆ ಬರೆ ಆಂಧ್ರದ ಜನತೆ ಇದ್ದು ತೆಲುಗು ಭಾಷೆ ಮಾತನಾಡುವ ಸಂದರ್ಭದಲ್ಲಿ ಕನ್ನಡ ಭಾಷೆಗೆ ಇಂದು ಆದ್ಯತೆ ಸಿಕ್ಕು ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ಸಂತೋಷ ವ್ಯಕ್ತಪಡಿಸಿದರು.ಇಂದಿನ ದಿನ ಮಾನಗಳಲ್ಲಿ ಅನೇಕ ಸಂಘಟನೆಗಳು ಹೋರಾಟ ಮಾಡಿ ವಿವಿಧ ಬೇಡಿಕೆಗಳ ಹಾಗೂ ಹಕ್ಕು ಗಳನ್ನು ಪಡೆಯಲು ಮುಂದಾಗುತ್ತಾರೆ. ಸಂವಿಧಾನ ಬದ್ದವಾಗಿ ಪ್ರತಿಯೊಬ್ಬರಿಗೂ ಸಮಾಜದಲ್ಲಿ ಅವರವರ ಹಕ್ಕು ಪಡಿಯುವುದಕ್ಕೆ ಅವಕಾಶ ಇದೆ ಆದರೆ ರೈತರ ಬಗ್ಗೆ ಸರಿಯಾಗಿ ಯಾರು ಕಾಳಜಿ ತೋರುತ್ತಿಲ್ಲ. ಇವತ್ತು ರೈತ ಹಗಲು, ರಾತ್ರಿ ಎನ್ನದೆ ಲಕ್ಷ ಗಟ್ಟಲೆ ಬಂಡವಾಳ ಹಾಕಿ ಬಿತ್ತನೆ ಮಾಡುತ್ತಾನೆ ಅದಕ್ಕೆ ಸೂಕ್ತವಾದ ಬೆಂಬಲಿತ ಬೆಲೆ ಸಿಗುತ್ತಿಲ್ಲ ಇದರ ಬಗ್ಗೆ ಯಾವ ಚುನಾಯಿತ ಪ್ರತಿನಿದಿಗಳು ದ್ವನಿ ಎತ್ತುತ್ತಿಲ್ಲ ಇದು ದುರಂತವಾಗಿದೆ, ಅದೇ ಕೇವಲ ಒಂದು ವರ್ಷ ರೈತರು ಏನು ಬಿತ್ತನೆ ಮಾಡದೆ ಇದ್ರೆ ದೇಶದ್ಯಂತದ ಪರಿಸ್ಥಿತಿ ಏನಾಗಬಹುದು ಇದರ ಬಗ್ಗೆ ಪ್ರತಿಯೊಬ್ಬರೂ ಯೋಚನೆ ಮಾಡಬೇಕಾಗಿದೆ ಎಂದರು.

ಚೀನಾ, ಭಾರತ ಇವತ್ತು ಕಣ್ಣು ಮುಚ್ಚಿ ತೆಗಿಯುವುದರ ಒಳಗೆ ಯುದ್ಧ ಕ್ರಾಮಣೆಗಳು ನಡೆಯುತ್ತವೆ ಭಾರತದಲ್ಲಿ ಸೈನಿಕರು ಇರುವುದರಿಂದ ದೇಶದಲ್ಲಿ ಪ್ರತಿಯೊಬ್ಬರೂ ಉತ್ತಮ ಜೀವನ ನಡೆಸುತ್ತಿದ್ದಾರೆ. ಅವರು ಇಲ್ಲದಿದ್ರೆ ನೀರು ಕೂಡ ಕುಡಿಯಲು ಸಾಧ್ಯವಾಗುತ್ತಿರಲಿಲ್ಲ ಆದರೆ ಅವರಿಗೂ ಸೂಕ್ತವಾದ ಭದ್ರತೆ ಇಲ್ಲದಾಗಿದೆ ಎಂದು ಬೇಸಾರ ವ್ಯಕ್ತಪಡಿಸಿದರು.

ಆದ್ದರಿಂದ ಸಮಾಜದ ಹಿರಿಯರು, ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಪ್ರತಿಯೊಂದರ ಬಗ್ಗೆ ಗಮನಹರಿಸಿ ಅವುಗಳ ಬಗ್ಗೆ ದ್ವನಿ ಎತ್ತಬೇಕಾಗಿದೆ. ಹಕ್ಕುಗಳನ್ನು ಪಡೆಯಬೇಕಾಗಿದೆ ಎಂದು ತಿಳಿಸಿದರು.

ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಗುಣ ಮಟ್ಟದ ಶಿಕ್ಷಣ ಕೊಡಿಸಿ ಅವರನ್ನು ಉದ್ಯೋಗವಂತರನ್ನಾಗಿ ಮಾಡಿ ಎಂದು ಸಲಹೆ ನೀಡಿದರು.

ನಂತರ 2023 ವಿಧಾನಸಭೆಯ ಕಾಂಗ್ರೆಸ್ ಪಕ್ಷದ ಕಂಪ್ಲಿಯ ಸೇವಾಕಾಕ್ಷಿ ಬಿ. ನಾರಾಯಣಪ್ಪ ಮಾತನಾಡಿ, ಕನ್ನಡ ನಡೆ, ನುಡಿ ಬಗ್ಗೆ ಕೇವಲ ನಂ.1 ರಂದು ಗೌರವಿಸುವುದಲ್ಲ ಅದಕ್ಕೆ ನಿತ್ಯ ಗೌರವಿಸುವಂತ ಮನೋಭಾವ ಎಲ್ಲರಲ್ಲಿ ಮೂಡಬೇಕಾಗಿದೆ. ಇವತ್ತು ಪ್ರತಿಯೊಬ್ಬರೂ ಕನ್ನಡಿಗ ಎಂದು ಹೆದೆ ತಟ್ಟಿ ಹೇಳಿಕೊಳ್ಳುವಂತ ಆತ್ಮಸ್ಥೈರ್ಯ ಹುಟ್ಟಬೇಕು. ನಾಡಿನ ನೆಲ. ಜಲ, ನಡೆ, ನುಡಿಗಳನ್ನು ಕಾಪಾಡಿಕೊಳ್ಳಬೇಕಾದ ಅನಿವಾರ್ಯ ಇದೆ ಎಂದರು. ಇಂದಿನ ದಿನಮಾನಗಳಲ್ಲಿ ಹೆಸರಿಗೆ ಮಾತ್ರ ಕನ್ನಡಿಗ ಅಂತ ಹೇಳಿಕೊಂಡು ಅದರ ಘನತೆ ಯನ್ನು ಹದೆಗೆಡಿಸುವ ಜನ ಕಂಡು ಬರುತ್ತಿದ್ದಾರೆ ಇಂತವರ ಬಗ್ಗೆ ಬಹಳ ಎಚ್ಚರ ವಹಿಸಿ ಕನ್ನಡ ವನ್ನು ಉಳಿಸಿ ಬೆಳಸಬೇಕಾಗಿದೆ ಎಂದು ಹೇಳಿದರು.

ತದನಂತರ ಜ್ಞಾನ ಶಿವಯೋಗಿ ಮಠದ ಜಡೇಶ ತಾತ ಮಾತನಾಡಿ, ಸಮಾಜದಲ್ಲಿ ಇಂದು ಪ್ರತಿಯೊಬ್ಬರೂ ತುಂಗಭದ್ರಾ ನೀರನ್ನು ಸೇವಿಸುತ್ತಿದ್ದಾರೆ. ಆದರೆ ಎಲ್ಲಿಯೂ ತುಂಗಭದ್ರಾ ವೃತ್ತ, ವಾರ್ಡ್ ಗಳು, ಏರಿಯಾ ಗಳು ಎಲ್ಲಿ ಕಾಣುತ್ತಿಲ್ಲ. ಪಕ್ಕದಲ್ಲಿ ಡ್ಯಾಂ ಇದ್ದು ಹೆಸರಿಗೆ ಮಾತ್ರ ಹೋಗಿ ಅಷ್ಟು ನೀರು ಇದಾವೆ, ಇಷ್ಟು ನೀರು ಇದಾವೆ ಎಂದು ಬರೆ ಪೋಸ್ ಕೊಟ್ಟು ಸೆಲ್ಫಿ ತೆಗೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುತ್ತಾರೆ ಇದರಿಂದ ನೀರಿನ ಮೇಲೆ ಗೌರವ ಕೊಟ್ಟಂತಾಗುವುದಲ್ಲ ಎಲ್ಲಂದರಲ್ಲಿ ತುಂಗಭದ್ರಾ ಎನ್ನುವ ಹೆಸರು ರಾರಾಜಿಸಬೇಕು ಇದರ ಬಗ್ಗೆ ಈಗಾಗಲೇ ಸಂಬಂದಿಸಿದ ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್ ಅವರಿಗೆ ಮನವಿ ನೀಡಿದ್ದೇವೆ ಇದರ ಬಗ್ಗೆ ಈ ಹಿಂದೆ ಪುನೀತ್ ರಾಜಕುಮಾರ್ ನಮಗೆ ಸಾಥ್ ನೀಡಿದ್ದರು ಆದ್ದರಿಂದ ಎಲ್ಲರೂ ಇದಕ್ಕೆ ಸಹಕರಿಯಾಗಬೇಕಿದೆ ಎಂದು ತಿಳಿಸಿದರು.

ಇದೆ ವೇಳೆ ಎಂ. ಸೂಗೂರು, ಮುದ್ದಟನೂರು, ವಿರಾಪುರ,ಎಮ್ಮಿಗನೂರು, ಸೋಮಲಾಪುರ, ಗುತ್ತಿಗೆನೂರು ಪ್ರೌಢ ಶಾಲೆಯಲ್ಲಿ ಎಸ್. ಎಸ್. ಎಲ್. ಸಿ ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ವಿರಾಪುರ, ಎಮ್ಮಿಗನೂರು ಭಾಗದ ಮುಖಂಡರು, ಸಂಘ ಸಂಸ್ಥೆಯವರು, ಶಿಕ್ಷಣ ಪ್ರೇಮಿಗಳು, ಶಾಲೆಯ ಶಿಕ್ಷಕರು ಇತರರು ಇದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | ದಾಖಲೆ ಇಲ್ಲದೆ ಸಾಗಿಸುತ್ತಿದ್ದ 20 ಲಕ್ಷ ವಶಕ್ಕೆ 

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್, 19 :  ನಗರದ ತಿರುಮಲ ಡಾಬ ಚೆಕ್ ಪೋಸ್ಟ್ ಬಳಿಯಲ್ಲಿ ಮಧ್ಯಾಹ್ನ ಸುಮಾರು 3.00 ಗಂಟೆ ಸಮಯದಲ್ಲಿ ಯಾವುದೇ ಸೂಕ್ತ ದಾಖಲಾತಿ ಇಲ್ಲದೆ ಸಾಗಿಸುತ್ತಿದ್ದ ರೂ.20,93,928 ರ ಮೊತ್ತವನ್ನು ಸಂಬಂಧಿಸಿದ

ಇದು ಪಿಕ್ ಪಾಕೆಟ್ ಸರ್ಕಾರ : ಹಿರಿಯೂರಿನಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ

ಸುದ್ದಿಒನ್, ಹಿರಿಯೂರು, ಏಪ್ರಿಲ್, 19  : ಗ್ಯಾರಂಟಿ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ 2 ಸಾವಿರ ಹಣ ಕೊಟ್ಟು ಕುಟುಂಬದ ಮುಖ್ಯಸ್ಥರಿಂದ ಪ್ರತಿ ತಿಂಗಳು  5 ರಿಂದ 6 ಸಾವಿರ ವಸೂಲಿ ಮಾಡುತ್ತಿದ್ದಾರೆ . ಇದು

ಚಿತ್ರದುರ್ಗ ನಗರಸಭೆಯ ಆಸ್ತಿ ಸೇರಿದಂತೆ ಇನ್ನಿತರೆ ತೆರಿಗೆಗಳನ್ನು ಮೊಬೈಲ್ ಹಾಗೂ ಆನ್‍ಲೈನ್ ಮೂಲಕ ಪಾವತಿಗೆ ಅವಕಾಶ : ಪೌರಾಯುಕ್ತೆ ಎಂ.ರೇಣುಕಾ

ಚಿತ್ರದುರ್ಗ. ಏ.19:  ಚಿತ್ರದುರ್ಗ ನಗರಸಭೆಯ ಆಸ್ತಿ ತೆರಿಗೆ, ನೀರಿನ ಕರ ಹಾಗೂ ಇತರೆ ಶುಲ್ಕಗಳನ್ನು ಮೊಬೈಲ್ ಹಾಗೂ ಆನ್‍ಲೈನ್ ಮೂಲಕ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ಮೊಬೈಲ್ ಅಪ್ಲಿಕೇಷನ್‍ಗಳಾದ ಭೀಮ್, ಭಾರತ್ ಬಿಲ್ ಪೇ, ಫೋನ್

error: Content is protected !!