ಬೆಂಗಳೂರು: ನಿನ್ನೆ ರಾತ್ರಿ ಮಳೆ ಬಂದರೂ ಸಹ ಅದನ್ನು ಲೆಕ್ಕಿಸದೆ ರಾಹುಲ್ ಗಾಂಧಿ ತಮ್ಮ ಭಾಷಣವನ್ನು ಮುಂದುವರೆಸಿದ್ದರು. ಈ ದೃಶ್ಯ ಎಲ್ಲೆಡೆ ವೈರಲ್ ಆಗಿದೆ. ಮಳೆಯೇ ಬರಲಿ, ಬಿಸಿಲೆ ಇರಲಿ ಕನ್ಯಾಕುಮಾರಿಯಿಂದ ಕಾಶ್ಮೀರದ ತನಕ ಯಾತ್ರೆ ನಿಲ್ಲಲ್ಲ ಎಂದು ರಾಹುಲ್ ಗಾಂಧಿ ಶಪಥ ಮಾಡಿದ್ದರು. ಆ ಶಪಥದಂತೆ ರಾತ್ರಿ ಮಳೆಯ ನಡುವೆಯೇ ರಾಹುಲ್ ಗಾಂಧಿ ಭಾಷಣ ಮಾಡಿದ್ದಾರೆ.
ಈ ಬಗ್ಗೆ ಕಾಂಗ್ರೆಸ್ ನಾಯಕರು ಹಮ್ಮೆ ಪಟ್ಟಿದ್ದಾರೆ. ಫೋಟೋ ಹಂಚಿಕೊಂಡು ಖುಷಿ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಶಾಸಕ ಜಮೀರ್ ಅಹ್ಮದ್, ಒಳ್ಳೆಯ ಕೆಲಸ ಮಾಡುವ ಧೃಡ ಸಂಕಲ್ಪ ನಮ್ಮಲ್ಲಿದ್ದರೆ, ಏನೇ ಎದುರಾದರೂ ಅದನ್ನು ತಪ್ಪಿಸಲು ಸಾಧ್ಯವೇ ಇಲ್ಲ ಎಂಬುದಕ್ಕೆ ಈ ದೃಶ್ಯವೇ ಸಾಕ್ಷಿ. ನಮ್ಮ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರು ಇಂದು ಮೈಸೂರಿನಲ್ಲಿ ಸುರಿಯುವ ಮಳೆಯನ್ನೂ ಲೆಕ್ಕಿಸದೇ ಭಾರತ ಐಕ್ಯತಾ ಯಾತ್ರೆಯ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ನೆರೆದವರಿಗೆ ಉತ್ಸಾಹ, ಹುಮ್ಮಸ್ಸು ತುಂಬಿದರು.
ರಾಹುಲ್ ಗಾಂಧಿಯವರ ಇಚ್ಛಾಶಕ್ತಿಯ ಎದುರು ಒಂದು ಕ್ಷಣ ಮಳೆಯೂ ಮಂಕಾದಂತಿತ್ತು. ಯಾರು ಎಷ್ಟೇ ಅಡ್ಡಿಪಡಿಸಲಿ, ನೂರೆಂಟು ವಿಘ್ನಗಳು ಬರಲಿ, ಭಾರತ ಐಕ್ಯತಾ ಯಾತ್ರೆ ಮುಂದುವರಿಯುತ್ತದೆ. ಕಾಂಗ್ರೆಸ್ ಪಕ್ಷ ಎಂತಹಾ ಕ್ಲಿಷ್ಟ ಸಂದರ್ಭದಲ್ಲೂ ದೇಶದ ಅಭಿವೃದ್ಧಿಗಾಗಿ ಹಾಗೂ ಜನರ ದನಿಯಾಗಿ ನಿಲ್ಲಲಿದೆ ಎಂಬ ಸಂದೇಶವನ್ನು ರಾಹುಲ್ ಗಾಂಧಿ ಅವರು ನೀಡಿದ್ದಾರೆ. ಅವರ ಬದ್ಧತೆಗೆ ನನ್ನದೊಂದು ಸಲಾಂ ಎಂದು ಟ್ವೀಟ್ ಮಾಡಿದ್ದಾರೆ.
ಸುದ್ದಿಒನ್ ಚಾಂಪಿಯನ್ಸ್ ಟ್ರೋಫಿಯ ಎರಡನೇ ಪಂದ್ಯದಲ್ಲಿ ಭಾರತ ಪಾಕಿಸ್ತಾನವನ್ನು 6 ವಿಕೆಟ್‌ಗಳಿಂದ ಹೀನಾಯವಾಗಿ ಸೋಲಿಸಿತು. ಇದರೊಂದಿಗೆ, ತಂಡವು 2017…
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ. ಫೆ. 23…
ಸುದ್ದಿಒನ್ ವಿರಾಟ್ ಕೊಹ್ಲಿ 14,000 ಏಕದಿನ ರನ್ ಗಳಿಸಿದ ವೇಗದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಸಚಿನ್…
ದಾವಣಗೆರೆ; ರಾಜ್ಯದಲ್ಲಿ ಇನ್ನೇನು ತಾಲೂಕು, ಜಿಲ್ಲಾ ಪಂಚಾಯತಿಗಳ ಚುನಾವಣೆಗೆ ದಿನಾಂಕ ಘೋಷಣೆಯಾಗಲಿದೆ. ಈ ಸಂಬಂಧ ರೇಣುಕಾಚಾರ್ಯ ಅವರು…
ತುಮಕೂರು: ಬೆಸ್ಕಾಂ ತುಮಕೂರು ನಗರ ಉಪ ವಿಭಾಗ 1ರ ವ್ಯಾಪ್ತಿಯಲ್ಲಿ ಅಟಲ್ ಭೂ ಜಲ ಯೋಜನೆಯಡಿಯಲ್ಲಿ ಪ್ರತ್ಯೇಕ ಕೃಷಿ…
ಸುದ್ದಿಒನ್ ಪ್ರತಿಯೊಬ್ಬ ಭಾರತೀಯ ಅಭಿಮಾನಿಯೂ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಬ್ಯಾಟ್‌ನಿಂದ ರನ್‌ಗಳನ್ನು ನಿರೀಕ್ಷಿಸುತ್ತಾರೆ.…