Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸಂವಿಧಾನ ಜಾರಿಯಾಗಿ 75 ವರ್ಷವಾದರೂ ಆಶಯಗಳು ಈಡೇರಿಲ್ಲ : ಎಎಪಿ ಜಿಲ್ಲಾಧ್ಯಕ್ಷ ಜಗದೀಶ್

Facebook
Twitter
Telegram
WhatsApp

ವರದಿ ಮತ್ತು ಫೋಟೋ
                ಸುರೇಶ್ ಪಟ್ಟಣ್, ಮೊ : 87220 22817

ಚಿತ್ರದುರ್ಗ,(ನ.26) :  ಸಂವಿಧಾನದ ಮೂಲ ಆಶಯವನ್ನು ಯಾವ ರಾಜಕೀಯ ಪಕ್ಷಗಳು ಸಹಾ ಆಚರಣೆ ಮಾಡುತ್ತಿಲ್ಲ, ಗಾಂಧೀಜಿಯವರ ಕಂಡ ಕನಸು ನನಸಾಗದೇ ಉಳಿದಿದೆ ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಜಗದೀಶ್ ತಿಳಿಸಿದರು.

ನಗರದ ಆಮ್ ಆದ್ಮಿ ಪಕ್ಷ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಇಂದು ಸಂವಿಧಾನ ದಿನಾಚರಣೆಯಾಗಿದೆ. ನಮ್ಮ ದೇಶದ ಸಂವಿಧಾನ ಉತ್ತಮವಾದ ಕೊಡುಗೆಯನ್ನು ನೀಡಿದೆ. ಸಂವಿಧಾನ ಜಾರಿಯಾಗಿ 75 ವರ್ಷವಾಗಿದೆ. ಆದರೆ ಇದರ ಆಶಯಗಳು ಇದುವರೆವಿಗೂ ಈಡೇರಿಲ್ಲ. ಇದನ್ನು ಈಡೇರಿಸಲು ಯಾವ ರಾಜಕೀಯ ಪಕ್ಷಕ್ಕೂ ಸಹಾ ಆಸಕ್ತಿ ಇಲ್ಲವಾಗಿದೆ. ಆಮ್ ಆದ್ಮಿ ಪಕ್ಷ ಬಡವರಿಗಾಗಿ ಆರೋಗ್ಯ, ಶಿಕ್ಷಣ ಮತ್ತು ಆಹಾರವನ್ನು  ನೀಡಬೇಕೆನ್ನುವುದು ಮೂಲ ಉದ್ದೇಶವಾಗಿದೆ. ಈಗಾಗಲೇ ದೆಹಲಿ, ಮತ್ತು ಪಂಜಾಬ್‍ನಲ್ಲಿ ಆಧಿಕಾರವನ್ನು ಮಾಡುತ್ತಿರುವ ಪಕ್ಷ ಅಲ್ಲಿನ ಬಡವರಿಗಾಗಿ ವಿವಿಧ ರೀತಿಯ ಯೋಜನೆಯನ್ನು ಜಾರಿ ಮಾಡಿದೆ ಎಂದರು.

ರಾಜಕೀಯ ಪಕ್ಷದವರು ಸಂವಿಧಾನವನ್ನು ತಾವು ಅಧಿಕಾರಕ್ಕೆ ಬರಲು ಬಳಸಿಕೊಳ್ಳುತ್ತಾರೆ ಹೊರೆತು ಅಧಿಕಾರಕ್ಕೆ ಬಂದ ಮೇಲೆ ಜಾರಿ ಮಾಡುವುದಿಲ್ಲ. ಮೂಲ ಸೌಕರ್ಯವನ್ನು ನೀಡುವುದಿಲ್ಲ, ದೇಶದ ಶೇ.80ರಷ್ಟು ಜನರಿಗಾಗಿ ಏನನ್ನು ಸಹಾ ಮಾಡುತ್ತಿಲ್ಲ ಶೇ.20 ರಷ್ಟು ಜನರಿಗಾಗಿ ಮಾತ್ರ ಇಂದಿನ ಸರ್ಕಾರಗಳು ಮಾಡುತ್ತಿವೆ.  ರೈತರ ಸಬಲೀಕರಣವಾಗುತ್ತಿಲ್ಲ ಬರೀ ಬಾಯಿ ಮಾತಿನಲ್ಲಿ ಮಾತ್ರ ರೈತರೆನ್ನುತಾರೆ ಅವರ ಪ್ರಗತಿಗಾಗಿ ಏನನ್ನು ಸಹಾ ಮಾಡುತ್ತಿಲ್ಲ, ಇತ್ತೀಚಿನ ದಿನ ಮಾನದಲ್ಲಿ ಧರ್ಮವನ್ನು ಎಲ್ಲಾ ಕಡೆಗೂ ಎಳೆಯುತ್ತಿದ್ದಾರೆ ಆವರ ಆಚರಣೆಯ ಧರ್ಮ ಅವರ ಮನೆಯಲ್ಲಿ ಮಾತ್ರ ಇರಬೇಕಿದೆ ಹೂರಗಡೆ ಎಲ್ಲರು ಒಂದೇ ಎಂಬ ಮನೋಭಾವ ಬರಬೇಕಿದೆ. ಧರ್ಮದಲ್ಲಿ ರಾಜಕೀಯ ಬರಬಾರದು ಆದರೆ ಇಂದಿನ ರಾಜಕೀಯ ಪಕ್ಷದವರು ಧರ್ಮದಲ್ಲಿ ರಾಜಕೀಯವನ್ನು ಬೆರಸುವುದರ ಮೂಲಕ ತಮ್ಮ ಬೇಳೆಯನ್ನು ಬೇಯಿಸಿಕೊಳ್ಳುತ್ತಿದ್ದಾರೆ ಎಂದು ಜಗದೀಶ್ ಆರೋಪಿಸಿದರು.

ಕರ್ನಾಟಕದಲ್ಲಿ ಆಮ್ ಆದ್ಮಿ ಪಕ್ಷವನ್ನು ಆಧಿಕಾರಕ್ಕೆ ತರುವ ಪ್ರಯತ್ನವನ್ನು ಮಾಡಲಾಗುತ್ತಿದೆ ಈಗಾಗಲೇ ರಾಜ್ಯ ಎಲ್ಲಾ ಜಿಲ್ಲೆಗಳಲ್ಲಿಯೂ ಸಹಾ ಪಕ್ಷವನ್ನು ಸಂಘಟಿಸಲಾಗುತ್ತಿದೆ, ಇದೇ ರೀತಿ ಚಿತ್ರದುರ್ಗದಲ್ಲಿ ಹಲವಾರು ತಿಂಗಳುಗಳಿಂದ ಪಕ್ಷವನ್ನು ಸಂಘಟಿಸಲಾಗುತ್ತಿದೆ. ಮುಂಬರುವ ಚುನಾವಣೆಯಲ್ಲಿ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರದಿಂದಲೂ ಸ್ಫರ್ದೇಯನ್ನು ಮಾಡಲಿದೆ, ಈಗಾಗಲೇ ನಾಲ್ಕು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆಯನ್ನು ಮಾಡಲಾಗಿದೆ. ಚುನಾವಣೆಯಲ್ಲಿ ಸ್ಥಳೀಯರಿಗೆ ಪ್ರಾತಿನೀಧ್ಯವನ್ನು ನೀಡಲಾಗುವುದು. ನಮ್ಮಲ್ಲಿ ಹಣಕ್ಕೆ ಮಾನ್ಯತೆ ಇಲ್ಲ ಹಣವನ್ನು ನೀಡಿ ಮತವನ್ನು ಖರೀದಿ ಮಾಡದೇ ಪ್ರಮಾಣೀಕವಾಗಿ ಚುನಾವಣೆಯನ್ನು ಎದುರಿಸಲಾಗುವುದು. ಇಲ್ಲಿ ಹಣವನ್ನು ನೀಡಿ ಮತಗಳಿಸಿದರೆ ಗೆದ್ದವರು ಭ್ರಷ್ಠರಾಗುತ್ತಾರೆ. ಎಂದ ಅವರು ರಾಜ್ಯದಲ್ಲಿ ನಮ್ಮ ಪಕ್ಷ ಆಧಿಕಾರವನ್ನು ಹಿಡಿದರೆ ಮದ್ಯ ಕರ್ನಾಟಕವಾದ ಚಿತ್ರದುರ್ಗವನ್ನು ಪ್ರಗತಿಯತ್ತ ಕೊಂಡೂಯ್ಯಲಾಗುವುದು ಎಂದು ಆಶ್ವಾಸನೆ ನೀಡಿದರು.

ಪಕ್ಷದ ಪ್ರಚಾರ ಸಮಿತಿಯ ಅಧ್ಯಕ್ಷರಾದ ಶೇಷಣ್ ಕುಮಾರ್ ಮಾತನಾಡಿ, ವಿದೇಶದಲ್ಲಿಯೂ ಸಹಾ ನಮ್ಮ ಪಕ್ಷವನ್ನು ಬೆಂಬಲಿಸಿದ್ದಾರೆ. ದೆಹಲಿ ಮತ್ತು ಪಂಜಾಬ್‍ನಲ್ಲಿ ಅಧಿಕಾರವನ್ನು ಹಿಡಿಯಲಾಗಿದೆ. ಇದೇ ರೀತಿ ಗೋವಾದಲ್ಲಿ ಶೇ. 30ರಷ್ಟು ಮತಗಳನ್ನು ಪಡೆಯಲಾಗಿದೆ. ಗುಜರಾತ್‍ನಲ್ಲಿ ಚುನಾವಣೆ ಪ್ರಚಾರ ಪ್ರಾರಂಭವಾಗಿದೆ. ಇಂದಿನ ಯುವ ಜನಾಂಗಕ್ಕೆ ನಮ್ಮ ಸಂವಿಧಾನದ ಬಗ್ಗೆ ಮಾಹಿತಿ ಇಲ್ಲ ಇದನ್ನು ತಿಳಿಸುವ ಕಾರ್ಯವನ್ನು ಮಾಡಬೇಕಿದೆ. ಸಂವಿಧಾನವನ್ನು ಕಡೆಗಣಿಸಿದರೆ ನಮ್ಮ ಬದುಕನ್ನು ಕಡೆಗಣಿಸಿದಂತೆ, ಇತರೆ ರಾಜಕೀಯ ಪಕ್ಷಗಳು ಶ್ರೀಮಂತರ ಪರವಾಗಿ ಕೆಲಸ ಮಾಡುತ್ತಿವೆ ನಮ್ಮ ಪಕ್ಷ ಬಡವರ ಪರವಾಗಿ ಕೆಲಸ ಮಾಡುತ್ತಾ ಅವರಿಗೆ ಅಗತ್ಯವಾದ ಆಹಾರ, ಶಿಕ್ಷಣ ಮತ್ತು ಆರೋಗ್ಯವನ್ನು ನೀಡಲು ಮುಂದಾಗಿದೆ ಎಂದರು.

ಗೋಷ್ಟಿಯಲ್ಲಿ ಪಕ್ಷದ ಉಪಾಧ್ಯಕ್ಷರಾದ ಫಾರೂಕ್, ಕಾರ್ಯದರ್ಶಿ ಕೆಂಚಪ್ಪ, ಮಹಿಳಾ ಘಟಕದ ಅಧ್ಯಕ್ಷರಾದ ರಾಧಮ್ಮ ಕಾರ್ಯದರ್ಶೀ ಅನಿಲಮ್ಮ ರಾಮಣ್ಣ ಭಾಗವಹಿಸಿದ್ದರು.

ದೇಶದಲ್ಲಿ ಆಮ್ ಆದ್ಮಿ ಪಕ್ಷ ಸ್ಥಾಪನೆಯಾಗಿ ನ.26ಕ್ಕೆ ಇಂದಿಗೆ 10 ವರ್ಷ ಆಗಿದ್ದು ಇದರ ಅಂಗವಾಗಿ ನಗರದ ಜಿಲ್ಲಾ ಕಚೇರಿಯಲ್ಲಿ ವಿವಿಧ ರೀತಿಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು,
ಪಕ್ಷದ ಕಚೇರಿಯ ಮುಂಭಾಗದಲ್ಲಿ ಪಕ್ಷದ ಧ್ವಜವನ್ನು ಜಿಲ್ಲಾಧ್ಯಕ್ಷರಾದ ಜಗದೀಶ್ ಧ್ವಜಾರೋಹಣವನ್ನು ನೇರವೇರಿಸಿದರು. ತದ ನಂತರ ಪಕ್ಷ ಕಚೇರಿಯ ಆವರಣದಲ್ಲಿ ಪಕ್ಷ ಸ್ಥಾಪನೆಯಾಗಿ 10 ಆದ ಸವಿನೆನಪಿಗಾಗಿ ಜಿಲ್ಲಾಧ್ಯಕ್ಷರು ಕೇಕ್‍ನ್ನು ಕಟ್ ಮಾಡುವುದರ ಮೂಲಕ ಆಚರಣೆಯನ್ನು ಮಾಡಿದರು.

ಈ ಸಂದರ್ಭದಲ್ಲಿ ಪಕ್ಷದ ಪ್ರಚಾರ ಸಮಿತಿಯ ಅಧ್ಯಕ್ಷರಾದ ಶೇಷಣ್ ಕುಮಾರ್ ಉಪಾಧ್ಯಕ್ಷರಾದ ಫಾರೂಕ್, ಕಾರ್ಯದರ್ಶಿ ಕೆಂಚಪ್ಪ, ಮಹಿಳಾ ಘಟಕದ ಅಧ್ಯಕ್ಷರಾದ ರಾಧಮ್ಮ ಕಾರ್ಯದರ್ಶೀ ಅನಿಲಮ್ಮ ರಾಮಣ್ಣ ಸೇರಿದಂತೆ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.

 

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | ಕ್ರೂಸರ್ ವಾಹನ ಪಲ್ಟಿ  ಓರ್ವ ಸಾವು, 13 ಮಂದಿಗೆ ಗಾಯ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ಮಾರ್ಚ್. 28 : ತಾಲ್ಲೂಕಿನ ತಳಕು ಪೋಲೀಸ್ ಠಾಣೆ ವ್ಯಾಪ್ತಿಯ ರಾಷ್ಟೀಯ ಹೆದ್ದಾರಿ 150 ಎ

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕ್ವಾರಿ ಅಂಡ್ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್‍ಗೆ ಶಕ್ತಿ ತುಂಬಬೇಕಾಗಿದೆ : ಅಬ್ದುಲ್ ಮಾಜಿದ್

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,    ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 28  : ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಭೆ ನಡೆಸಿ ಹೊಸ ಅಸೋಸಿಯೇಷನ್‍ಗೆ ಶಕ್ತಿ ತುಂಬಬೇಕಾಗಿದೆ

ಪ್ರಹ್ಲಾದ್ ಜೋಶಿಗೆ ಬೆಂಬಲ ನೀಡಿದ ವಾಲ್ಮೀಕಿ ಸಮಾಜ

ಹುಬ್ಬಳ್ಳಿ: ಧಾರವಾಡದಲ್ಲಿ ಪ್ರಹ್ಲಾದ ಜೋಶಿ ಅವರ ಸ್ಪರ್ಧೆಗೆ ದಿಂಗಾಲೇಶ್ವರ ಶ್ರೀಗಳ ಬೆಂಬಲಿಗರು ವಿರೋಧ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ ಪ್ರಹ್ಲಾದ ಜೋಶಿ ಅವರ ಬೆಂಬಲಕ್ಕೆ ವಾಲ್ಮೀಕಿ ಸಮಾಜದ ಶ್ರೀಗಳು ನಿಂತಿದ್ದಾರೆ. ಇಂದು ಪ್ರಹ್ಲಾದ್ ಜೋಶಿ ಅವರ ಪರವಾಗಿ

error: Content is protected !!