ಶಿವಮೊಗ್ಗ; ಇತ್ತೀಚೆಗೆ ನಡೆದ ಬೆಳವಣಿಗೆಯಲ್ಲಿ ಈಶ್ವರಪ್ಪ ಅವರು ಮತ್ತೆ ಬಿಜೆಪಿ ಸೇರ್ತಾರೆ ಎಂಬ ಮಾತುಗಳು ಕೇಳಿ ಬರ್ತಾ ಇತ್ತು. ಆದ್ರೆ ಈಗ ನೋಡಿದ್ರೆ ಈಶ್ವರಪ್ಪ ಅವರು ಹೊಸ ಪಕ್ಷವೊಂದನ್ನ ಕಟ್ಟಿದ್ದಾರೆ. ಮುಂದಿನ ಚುನಾವಣೆಯ ಬಗ್ಗೆ ಮಾತನಾಡಿದ್ದಾರೆ. ಈ ಪಕ್ಷಕ್ಕೆ ನೂರಾರು ಜನರು ಕಾರ್ಯಕರ್ತರು ಸೇರ್ಪಡೆಯಾಗಿದ್ದಾರೆ. ಬಡವರಿಗೆ ಅನುಕೂಲ ಆಗ್ಬೇಕು ಅಂತ ಕಟ್ಟಿರುವ ಪಕ್ಷ ಇದು ಅಂತ ಹೇಳಿದ್ದಾರೆ.
ಈ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರ ಆಕ್ರೋಶ ಹೊರ ಹಾಕಿರುವ ಈಶ್ವರಪ್ಪ ಅವರು, ಸಿದ್ದರಾಮಯ್ಯ ಹೋಗುವಾಗ ಇವರೆಲ್ಲ ಬಹುಪರಾಕ್ ಮಾಡಿದ್ರು. ಆಂಜನೇಯ, ಶ್ರೀರಾಮಚಂದ್ರನ ಬಂಟ. ಸಿದ್ದರಾಮಯ್ಯನ ಬಂಟ ಆಂಜನೇಯ. ನಾನು ತಂದೇ ತರ್ತೀನಿ, ಮಂತ್ರಿ ಆದ್ಮೇಲೆ ತರ್ತೀನಿ ಅಂದ್ರು. ಸೋತೆ ಹೋಗಿಟ್ರು. ಆಂಜನೇಯನ ಸ್ಥಿತಿ ನಾಳೆ ಸಿದ್ದರಾಮಯ್ಯಗೂ ಬಂದೇ ಬರುತ್ತೆ ಎನ್ನು ವ ಎಚ್ಚರಿಕೆಯನ್ನ ಕೊಟ್ಟೆ ಕೊಡ್ತೀನಿ.
ನಾನೇಳಿರೋದಲ್ಲ ಸಿದ್ದರಾಮಯ್ಯ ಅವರ ಮಗ ಯತೀಂದ್ರ ಅವರೇ ಹೇಳಿದ್ದು. ಪ್ರಬಲ ಜಾತಿಗಳ ಒತ್ತಡಕ್ಕೆ ಜಾರಿಗೆ ತರೋದಕ್ಕೆ ಆಗ್ಲಿಲ್ಲ. ಅದಕ್ಕೆ ಸಿದ್ದರಾಮಯ್ಯ ಅವರ ಉತ್ತರವೇನು. ಪ್ರಬಲ ಜಾತಿ ಅಷ್ಟೇ ಅಲ್ಲ. ಹಿಂದುಳಿದವರು ಬೇಡ ಅಂದ್ರು ಅಂತ. ಹಿಂದುಳಿದವರನ್ನ, ದಲಿತರನ್ನ ಆ ಹೆಸರನ್ನ ಇಟ್ಕೊಂಡೆ ರಾಜ್ಯದಲ್ಲಿ ಕಾಂಗ್ರೆಸ್ ಅವತ್ತಿಂದಾನೂ ರಾಜಕಾರಣ ಮಾಡಿಕೊಂಡು ಅಧಿಕಾರಕ್ಕೆ ಬಂದಿದೆ. ಈಗ ದಲಿತರನ್ನು, ಹಿಂದುಳಿದವರನ್ನು ಪಕ್ಕಕ್ಕೆ ಸರಿಸಿ, ಕೇಂದ್ರ ನಾಯಕರ ಆಶೀರ್ವಾದ ಕೃಪಾ ಕಟಾಕ್ಷ ಇರಬೇಕು ಅಂತ ಈ ರೀತಿ ಮಾಡ್ತಿದ್ದಾರೆ ಎಂದು ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ. ಸದ್ಯ ಹೊಸ ಪಕ್ಷವೊಂದನ್ನ ಕಟ್ಟಿ, ಕಾರ್ಯಕರ್ತರನ್ನ ಬರಮಾಡಿಕೊಂಡಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

















