ಶಿವಮೊಗ್ಗ: ಎಲ್ಲೋ ಒಂದು ಕಲ್ಲಂಗಡಿ ಒಡೆದೋಯ್ತು ಅನ್ನೋದಕ್ಕೆ ಇಷ್ಟೊಂದು ಬೊಬ್ಬೆ ಹಾಕಿದಂತ ಕಾಂಗ್ರೆಸ್ ನ ಡಿ ಕೆ ಶಿವಕುಮಾರ್ ಅವರು, ಸಿದ್ದರಾಮಯ್ಯ ನವರು, ಕುಮಾರಸ್ವಾಮಿ ಯವರು ಕಲ್ಲಂಗಡಿ ಒಡೆದಿದ್ದಕ್ಕೆ ಬೊಬ್ಬೆ ಹಾಕ್ತಾರೆ. ಪೊಲೀಸ್ ಅಧಿಕಾರಿಯ ತಲೆ ಹೊಡೆದಿದ್ದಕ್ಕೆ ಬೊಬ್ಬೆ ಹಾಕಲ್ಲ. ಕೇವಲ ರಾಜಕಾರಣವೇ ಇವರ ಉದ್ದೇಶ. ಮುಸಲ್ಮಾನರ ಸಂತೃಪ್ತಿ ಪಡೆದುಕೊಂಡು. ಅದರ ಮುಖಾಂತರ ಮತ್ತೆ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಬೇಕು ಎಂಬ ಕನಸನ್ನು ಕಾಣುತ್ತಾ ಇದ್ದಾರೆ.
ಕರ್ನಾಟಕ ರಾಜ್ಯದ ಜನತೆಗೆ ಗೊತ್ತು. ಇಡೀ ಹಿಂದೂ ಸಮಾಜ ಇದನ್ನು ಗಮನಿಸುತ್ತಾ ಇದೆ. ಮುಸಲ್ಮಾನರಲ್ಲಿರುವ ರಾಷ್ಟ್ರ ಭಕ್ತರು ಸಹ ಇದನ್ನು ಗಮನಿಸುತ್ತಾ ಇದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ನವರದ್ದು ಅಧಿಕಾರದ ದಾಹ ಇದೆ. ಇದಕ್ಕೋಸ್ಕರ ಕೊಲೆಗಳು ಆಗ್ತಾ ಇವೆ, ಜೀವಗಳು ಹೋಗ್ತಾ ಇವೆ, ದೊಂಬಿಗಳು ನಡೆಯುತ್ತಾ ಇವೆ. ಇದೆಲ್ಲ ನಿಲ್ಲಬೇಕು ಅಂದ್ರೆ ಗೃಹಮಂತ್ರಿಗಳು, ಮುಖ್ಯಮಂತ್ರಿಗಳಿಗೆ ಈ ಕಡೆ ಗಮನ ಹರಿಸಿ ಎಂದು ಮನವಿ ಮಾಡುತ್ತೇನೆ ಎಂದಿದ್ದಾರೆ.
ಈ ರೀತಿ ದೊಂಬಿ ಮಾಡಬೇಕು ಎಂದು ತೀರ್ಮಾನ ಮಾಡಿ ಇಡೀ ಹುಬ್ಬಳ್ಳಿಯನ್ನು ಅಶಾಂತಿ ಮಾಡಿದ್ದಾರೆ. RSS ಮುರ್ದಾಬಾದ್ ಘೋಷಣೆಗಳನ್ನು ಕೂಗಿಸಿದ್ದಾರೆ. ಅಲ್ಲಾ ಹು ಅಕ್ಬರ್ ಅಂತ ಕೂಗುತ್ತಾರೆ. ಈ ರೀತಿಯ ಕಲ್ಲು ತೂರಾಟ ಮಾಡಿರುವ ಪುಂಡರಿಗೆ ನೇರವಾಗಿ ಎದುರಿಸುವಂತ ಶಕ್ತಿ ಹಿಂದು ಸಂಘಟನೆಗಳಿಗಿದೆ. ಆದ್ರೆ ಕಾನೂನನ್ನು ಕೈಗೆ ತೆಗೆದುಕೊಳ್ಳಲು ತಯಾರಿಲ್ಲ. ಮೌಲ್ವಿ ಹೇಡಿಯಂತೆ ಓಡಿ ಹೋಗಿದ್ದಾನೆ. ಅಮಿತ್ ಶಾ ಅವರನ್ನು ಪ್ರಧಾನಿ ಮೋದಿಯವರನ್ನು ಮನವಿ ಮಾಡುತ್ತೇನೆ. ಈ ರೀತಿ ಗೂಂಡಾಗಿರಿ ಮಾಡಿಸಿ ಓಡಿ ಹೋಗಿರುವಂತ ಆ ರಾಷ್ಟ್ರ ದ್ರೋಹಿಯನ್ನು ಎಲ್ಲಿದ್ದರು ಬಂಧಿಸಬೇಕೆಂದು ಒತ್ತಾಯ ಮಾಡುತ್ತಿದ್ದೇನೆ ಎಂದಿದ್ದಾರೆ.






GIPHY App Key not set. Please check settings