ಮಕ್ಕಳಿಗೆ ಪಾಠದ ಜೊತೆಗೆ ಆಟಕ್ಕೂ ಒತ್ತು ನೀಡಿ : ಫಾತ್ಯರಾಜನ್

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ನ. 16 : ಪೋಷಕರು ತಮ್ಮ ಮಕ್ಕಳನ್ನು ಬುದ್ದಿವಂತರನ್ನಾಗಿ ಮಾಡುವ ನಿಟ್ಟಿನಲ್ಲಿ ಅವರು ದೈಹಿಕವಾಗಿ ಸದೃಢವಾಗುವುದನ್ನು ಮರೆಯುತ್ತಿದ್ದಾರೆ. ಮಕ್ಕಳಿಗೆ ಪಾಠದ ಜೊತೆಗೆ ಆಟಕ್ಕೂ ಸಹಾ ಪ್ರಾತಿನಿಧ್ಯವನ್ನು ನೀಡುವಂತೆ ಚಿತ್ರದುರ್ಗ ಪುಟಬಾಲ್ ಆಸೋಷಿಯೇಷನ್ ಅಧ್ಯಕ್ಷರಾದ ನ್ಯಾಯಾವಾದಿಗಳಾದ ಫಾತ್ಯರಾಜನ್ ಕರೆ ನೀಡಿದರು.

 

ನಗರದ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಚಿತ್ರದುರ್ಗ ಪುಟ್‍ಬಾಲ್ ಅಸೋಸಿಯೇಷನ್ ಹಾಗೂ ಸೆಡ್ ಟೆಕ್ನಾಲಜಿವತಿಯಿಂದ 14 ಮತ್ತು 17 ನೇ ವಯಸ್ಸಿನ ಮಕ್ಕಳಿಗೆ ಹಮ್ಮಿಕೊಂಡಿದ್ದ ಪುಟ್‍ಬಾಲ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಮಾನದಲ್ಲಿ ಪೋಷಕರು ತಮ್ಮ ಮಕ್ಕಳು ಹೆಚ್ಚಿನ ಅಂಕಗಳನ್ನು ಪಡೆಯಬೇಕು ಉತ್ತಮವಾದ ಕೆಲಸವನ್ನು ಪಡೆಯಬೇಕು ಕೈತುಂಬ ಸಂಬಳವನ್ನು ತೆಗೆದುಕೊಳ್ಳಬೇಕು ಎಂಬ ಆಸೆಯನ್ನು ಹೊಂದಿರುತ್ತಾರೆ ಯಾವ ಪೋಷಕರು ತಮ್ಮ ಮಕ್ಕಳು ಕ್ರೀಡಾಪಟುಗಳು ಆಗಬೇಕೆಂದು ಬಯಸುವುದಿಲ್ಲ ಈ ರೀತಿ ಆಗಬೇಕೆಂದು ಬಯಸುವವರ ಸಂಖ್ಯೆ ಕಡಿಮೆ ಇದೆ ಎಂದು ವಿಷಾಧಿಸಿದರು.

ಮಕ್ಕಳು ಪಠ್ಯವನ್ನು ಓದುವುದರಿಂದ ಮಾನಸಿಕವಾಗಿ ಸದೃಢರಾಗುತ್ತಾರೆ ಅದೇ ರೀತಿ ಕ್ರೀಡೆಯಲ್ಲಿ ತಮ್ಮನ್ನು ತಾವು ತೊಡಗಿಸುವುದರಿಂದ ದೈಹಿಕವಾಗಿ ಸಬಲರಾಗುತ್ತಾರೆ ಆದರೆ ಇತ್ತೀಚಿನ ದಿನದಲ್ಲಿ ಮಕ್ಕಳು ಮೈದಾನದಲ್ಲಿ ಆಟವಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಬಹುತೇಕ ಮಕ್ಕಳು ತಮ್ಮ ಪೋಷಕರ ಮೊಬೈಲ್‍ನಲ್ಲಿ ಆಟವನ್ನು ಆಡುತ್ತಿದ್ದಾರೆ ಇದರ ಬದಲು ಮೈದಾನದಲ್ಲಿ ಆಡುವುದರಿಂದ ಮಕ್ಕಳಲ್ಲಿ ಗೆಳೆತನ, ಸ್ನೇಹ ಬೆಳೆಯುತ್ತದೆ ಇದರಿಂದ ಮಕ್ಕಳನ್ನು ಮೈದಾನಕ್ಕೆ ಆಡುವುದಕ್ಕೆ ಕಳುಹಿಸುವಂತೆ ಫಾತ್ಯರಾಜನ್ ತಿಳಿಸಿದರು.

 

ಅಂತರಾಷ್ಟ್ರೀಯ ಕ್ರೀಡಾಪಟು ಎನ್.ಡಿ.ಕುಮಾರ್ ಮಾತನಾಡಿ, ಚಿಕ್ಕವಯಸ್ಸಿನಿಂದಲೇ ಮಕ್ಕಳಿಗೆ ಆವರಿಗೆ ಇಷ್ಠವಾದ ಆಟದಲ್ಲಿ ಅವರನ್ನು ತೊಡಗಿಸಿಕೊಳ್ಳಬೇಕಿದೆ, ಕ್ರೀಡೆಯಲ್ಲಿ ತೊಡಗಿಸಿಕೊಂಡವರು ವಿದ್ಯೆಗೆ ಸಹಾಯಕವಾಗುತ್ತದೆ. ಸತತವಾದ ಪರಿಶ್ರಮದಿಂದ ಕ್ರೀಡೆಯನ್ನು ಕಲಿಯಬೇಕಿದೆ. ಚಿತ್ರದುರ್ಗದಲ್ಲಿ ಇರುವ ಕ್ರೀಡಾಪಟುಗಳಿಗೆ ಸೆಡ್ ಸಂಸ್ಥೆಯೊಂದು ಸಹಾಯ ಹಸ್ತವನ್ನು ನೀಡುತ್ತಿರುವುದು ಶ್ಲಾಘನೀಯವಾದದು. ಇದೇ ರೀತಿ ನಗರದ ದಾನಿಗಳು ಸಹಾಯವನ್ನು ಮಾಡುವುದರ ಮೂಲಕ ಕ್ರೀಡಾಪಟುಗಳಿಗೆ ನೆರವಾಗಬೇಕಿದೆ ಎಂದು ಕರೆ ನೀಡಿದರು.

 

ಸೆಡ್ ಸಂಸ್ಥೆಯ ಮುಖ್ಯಸ್ಥರಾದ ಅಂಜುಮ್ ಮಾತನಾಡಿ, ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ ಆದರೆ ಇದರಲ್ಲಿ ಭಾಗವಹಿಸುವುದು ಮುಖ್ಯವಾಗಿದೆ. ಇಲ್ಲಿ ಭಾಗವಹಿಸುವ ಎಲ್ಲರು ಸಹಾ ಗೆಲುವ ಸಮಾರ್ಥವನ್ನು ಹೊಂದಿದ್ದಾರೆ. ಆದರೆ ಗೆಲವುವುದು ಒಬ್ಬರು ಮಾತ್ರ ಎನ್ನುವುದನ್ನು ಮರೆಯಬಾರದು ಎಂದ ಅವರು, ನಮ್ಮ ಸಂಸ್ಥೆ ಈ ರೀತಿಯಾದ ಪುಟ್‍ಬಾಲ್ ಆಟವನ್ನು ಪೋಷಿಸುವುದಕ್ಕಾಗಿ ಸಹಾಯವನ್ನು ಮಾಡಲಾಗುತ್ತಿದೆ. ಇದರ ಪ್ರಯೋಜವನ್ನು ಪಡೆಯುವಂತೆ ತಿಳಿಸಿ ನಮ್ಮ ಕಂಪನಿಯವತಿಯಿಂದ ಇಲ್ಲಿನ ಕ್ರೀಡಾಪಟುಗಳಿಗೆ ಟಿ ಶರ್ಟ, ಷೂ, ಬಾಲ್‍ಗಳನ್ನು ನೀಡಲಾಗಿದ್ದು ಈ ಪಂದ್ಯಾವಳಿಯಲ್ಲಿ ಗೆಲುವ ಕ್ರೀಡಾಟಪುಗಳಿಗೆ ಟ್ರೋಫಿಯನ್ನು ನೀಡಲಾಗುತ್ತಿದೆ ಎಂದರು.

 

ಇದೇ ಸಂದರ್ಭದಲ್ಲಿ ದೈಹಿಕ ಶಿಕ್ಷಕರಾದ ವಿಲ್ಸನ್, ತರಬೇತುದಾರರಾದ ಸತ್ಯನಾರಾಯಣ, ಮಾತನಾಡಿದರು. ಇದೇ ಸಮಯದಲ್ಲಿ ಮಕ್ಕಳ ಕ್ರೀಡೆಗೆ ಸಹಾಯ ಮಾಡಿದ ಕ್ರೀಡಾ ಪೋಷಕರನ್ನು ಸನ್ಮಾನಿಸಲಾಯಿತು.

suddionenews

Recent Posts

ಮೈಕ್ರೋ ಫೈನಾನ್ಸ್ ಸುಗ್ರಿವಾಜ್ಞೆಗೆ ಅಂಕಿತ ಹಾಕದ ರಾಜ್ಯಪಾಲರು : ಸರ್ಕಾರಕ್ಕೆ ಹಿನ್ನಡೆ

ಬೆಂಗಳೂರು: ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ಹೆಚ್ಚಾಗಿದೆ. ಇದರಿಂದ ಅದೆಷ್ಟೋ ಜನ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಸಾಲ ಕೊಟ್ಟ…

1 hour ago

ಚಿತ್ರದುರ್ಗ APMC | ಶೇಂಗಾ, ಕಡಲೆ ಸೇರಿದಂತೆ ಇತರೆ ಉತ್ಪನ್ನಗಳ ಫೆಬ್ರವರಿ 07 ರ ಮಾರುಕಟ್ಟೆ ಧಾರಣೆ ವಿವಿರ ಇಲ್ಲಿದೆ…!

  ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 07 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೇಂಗಾ, ಕಡಲೆ, ಮೆಕ್ಕೆಜೋಳ ಸೇರಿದಂತೆ ಇತರೆ…

2 hours ago

ಚಿತ್ರದುರ್ಗದ ಅಳಿಯ ಡಾಲಿ ಮೇಲೆ ದರ್ಶನ್ ಫ್ಯಾನ್ಸ್ ಗರಂ : ಫುಲ್ ಟ್ರೋಲ್..!

ಬೆಂಗಳೂರು: ನಟ ಡಾಲಿ ಧನಂಜಯ್ ಮದುವೆ ಸಂಭ್ರಮದಲ್ಲಿದ್ದಾರೆ. ಚಿತ್ರದುರ್ಗದ ಅಳಿಯ ಬೇರೆ ಆಗ್ತಾ ಇದ್ದಾರೆ. ಧನ್ಯತಾ ಮೂಲತಃ ಚಿತ್ರದುರ್ಗದವರು. ಆದರೆ…

4 hours ago

ಮೂಡಾ ಅಪ್ಡೇಟ್: ಸಿಎಂ ಸಿದ್ದರಾಮಯ್ಯರಿಗೆ ರಿಲೀಫ್ ನೀಡಿದ ಹೈಕೋರ್ಟ್

ಬೆಂಗಳೂರು: ಇಂದು ಹೈಕೋರ್ಟ್ ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದು ಸಿಎಂ ಸಿದ್ದರಾಮಯ್ಯ ಅವರಿಗೆ ಬಿಗ್ ರಿಲೀಫ್ ನೀಡಿದೆ. ಈ…

5 hours ago

ಈ ರಾಶಿಯವರಿಗೆ ಒಳ್ಳೆಯ ಉದ್ಯೋಗ ಅವಕಾಶಗಳು ಒದಗಿ ಬರಲಿವೆ

ಈ ರಾಶಿಯವರಿಗೆ ಒಳ್ಳೆಯ ಉದ್ಯೋಗ ಅವಕಾಶಗಳು ಒದಗಿ ಬರಲಿವೆ, ಈ ರಾಶಿಯವರಿಗೆ ಉತ್ತಮ ಸಂಗಾತಿ ಸಿಗುವರು, ಶುಕ್ರವಾರದ ರಾಶಿ ಭವಿಷ್ಯ…

11 hours ago

ಫೆಬ್ರವರಿ 10ಕ್ಕೆ ಕರ್ನಾಟಕದಲ್ಲಿ ಕುಂಭಮೇಳ : ಹೇಗಿದೆ ತಯಾರಿ..?

  144 ವರ್ಷಗಳಿಗೊಮ್ಮೆ ಬರುವ ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದರೆ ಕರ್ಮ ಕಳೆಯುತ್ತದೆ ಎಂದು ನಂಬಲಾಗಿದೆ. ಹೀಗಾಗಿ ಕೋಟ್ಯಾಂತರ ಮಂದಿ…

20 hours ago