ವೃದ್ಧರು, ಅಂಗವಿಕಲು ಮತ ಹಾಕಲು ಇನ್ಮುಂದೆ ಮತಗಟ್ಟೆಗೆ ತೆರಳಬೇಕಿಲ್ಲ..!

suddionenews
1 Min Read

ಉತ್ತರಪ್ರದೇಶ: ಚುನಾವಣಾ ಸಮಯದಲ್ಲಿ ವೃದ್ಧರು, ಅಂಗವಿಕಲರು ಮತದಾನಕಟ್ಟೆಗೆ ಹೋಗಿ ಮತದಾನ ಮಾಡ್ತಾ ಇದ್ದದ್ದೇ ಒಂದು ಕಷ್ಟ. ಎಲ್ಲೋ ದೂರದಲ್ಲಿ ಮತಗಟ್ಟೆಗಳಿದ್ದರೆ ಸಂಬಂಧಿಕರ ಸಹಾಯದಿಂದಲೋ, ಅಥವಾ ಅಕ್ಕಪಕ್ಕದವರ ಸಹಾಯದಿಂದಲೋ ಮತಗಟ್ಟೆಗೆ ಹೋಗಲು ಹರಸಾಹಸ ಪಡಬೇಕಾಗಿತ್ತು.

ಮತದಾನ ನಡೆಯುವ ಪ್ರತಿ ರಾಜ್ಯದಲ್ಲೂ ಇಂಥದ್ದೊಂದು ಘಟನೆಗಳು ಕಣ್ಣಿಗೆ ಬೀಳುತ್ತೆ. ಆದ್ರೆ ಇನ್ಮುಂದೆ ಅಂತ ದೃಶ್ಯಗಳು ಕಾಣುವ ಅವಶ್ಯಕತೆಯಿಲ್ಲ. ಯಾಕಂದ್ರೆ ಇನ್ಮುಂದೆ ವೃದ್ಧರು, ಅಂಗವಿಕಲರು ಮತಗಟ್ಟೆಗೆ ಹೋಗಿ ಮತದಾನ ಮಾಡುವ ಅವಶ್ಯಕತೆ ಇಲ್ಲ. ಈಗ ಏನಿದ್ರು ಮನೆಯಲ್ಲೇ ಕುಳಿತು ಮತದಾನ ಮಾಡಬಹುದು.

ಮನೆಯಲ್ಲೇ ಇದ್ದು ಅಭ್ಯರ್ಥಿಗಳಿಗೆ ಮತ ಚಲಾಯಿಸುವ ವ್ಯವಸ್ಥೆಯನ್ನು ಅವರಿಗೆ ಮಾಡಿಕೊಡಲಾಗುವುದು ಎಂದು ಆಯೋಗ ಹೇಳಿದೆ. ಉತ್ತರ ಪ್ರದೇಶ ಹಾಲಿ ಸರ್ಕಾರದ ಅವಧಿ ಮೇ 14ಕ್ಕೆ ಮುಗಿಯಲಿದೆ. ಚುನಾವಣೆಯನ್ನು ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು ಎಂದು ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಮನವಿ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *