Connect with us

Hi, what are you looking for?

ಪ್ರಮುಖ ಸುದ್ದಿ

ಎಲ್ ನೈನೊ ಅಂತರಾಳ; ಸಮುದ್ರ ತಡಿಯಲಿ ನಡೆಯೋ ವಿಚಿತ್ರದ ಬಗ್ಗೆ ನೀವು ಅರಿಯಲೇ ಬೇಕು !!

ಸ್ಪಾನಿಷ್ ಭಾಷೆಯಲ್ಲಿ ಎಲ್ ನೈನೊ ಎಂದರೆ ಬಾಲ ಯೇಸು ಎಂದರ್ಥ. ದಕ್ಷಿನ ಅಮೆರಿಕದ ಕೆಲವು ಪ್ರದೇಶಗಳಲ್ಲಿ ಕುತೂಹಲದ ನೈಸರ್ಗಿಕ ಘಟನೆಯೊಂದು ಕ್ರಿಸ್ಮಸ್ ಸಂದರ್ಭದಲ್ಲಿ ನಡೆಯುವುದರಿಂದ ಅದಕ್ಕೆ ಈ ಹೆಸರು ಬಂದಿದೆ.

ದಕ್ಷಿಣ ಅಮೆರಿಕ ಪೆಸಿಫಿಕ್ ಸಾಗರದ ಪೂರ್ವದಲ್ಲಿ ಪ್ರತಿ ಐದರಿಂದ ಎಂಟು ವರ್ಷಗಳಿಗೊಮ್ಮೆ ಸಮುದ್ರ ನೀರಿನ ಗತಿ ಬದಲಾಗುತ್ತದೆ. ಪೆರು ಮತ್ತು ಈಕ್ವೆಡಾರ್‌ನ ಕರಾವಳಿ ಪ್ರದೇಶಗಳ ತಣ್ಣನೆಯ, ಸಿಹಿ ನೀರನ್ನು ಇದು ಹೆÇರತಳ್ಳುತ್ತದೆ. ಸಮುದ್ರದ ಬೆಚ್ಚಗಿನ ನೀರು ಆ ಪ್ರದೇಶವನ್ನು ಆಕ್ರಮಿಸಿಕೊಳ್ಳುತ್ತದೆ.

ಬೆಚ್ಚಗಿನ ಸಮುದ್ರ ನೀರಿನ ಪ್ರವಾಹ, ಮೀನುಗಾರಿಕೆ ಪ್ರದೇಶಗಳಲ್ಲಿರುವ ಟ್ಯೂನ ಮತ್ತು ಅಂಕೋನಿ ಮೊದಲಾದ ಅನೇಕ ರೀತಿಯ ಮೀನುಗಳ ಸಾವಿಗೆ ಕಾರಣವಾಗುತ್ತದೆ. ಮೀನುಗಳ ಮುಖ್ಯ ಆಹಾರವಾಗಿರುವ ಪ್ಲಾಂಕ್ಟೋನ್‌ಗಳು ತಣ್ಣಗಿನ ಪ್ರದೇಶಗಳಿಗೆ ಹೋಗುವುದರಿಂದ ಮೀನುಗಳು, ಅಪರೂಪದ ಸಸ್ಯಗಳೂ ಸಾಯುತ್ತವೆ.

ಜಾಗತಿಕ ವಾತಾವರಣದ ಮಟ್ಟದಲ್ಲಿ ಎಲ್ ನೈನೋಗೆ ಮಹತ್ತ್ವದ ಸ್ಥಾನವಿದೆ. ಇದು ವಾತಾವರಣದ ಒತ್ತಡದ ಎರಡು ಕೇಂದ್ರಗಳಿಗೆ ಸಂಬಂಧಿಸಿದೆ. ದಕ್ಷಿಣ ಪೆಸಿಫಿಕ್‌ನ ಪೂರ್ವದಲ್ಲಿರುವ ಈಸ್ಟರ್ ಐಲ್ಯಾಂಡ್ ಹಾಗೂ ಪಶ್ಚಿಮದಲ್ಲಿ ಉತ್ತರ ಆಸ್ಟ್ರೇಲಿಯದಲ್ಲಿ ಈ ಕೇಂದ್ರಗಳಿವೆ. ಸಮುದ್ರ ಅಲೆಗಳ ಬದಲಾವಣೆ ಆ ಪ್ರದೇಶದ ಇಡೀ ವಾತಾವರಣವನ್ನು ಕದಡುತ್ತದೆ. ಅತಿ ಹೆಚ್ಚು ವಾತಾವರಣ ಒತ್ತಡದಿಂದಾಗಿ ಪೂರ್ವದಲ್ಲಿ ಬಿಸಿ ಹಾಗೂ ಒಣ ಹವೆ ಇದ್ದರೆ, ಪಶ್ಚಿಮದಲ್ಲಿ ಮರಗಟ್ಟಿಸುವ ಹಿಮಗಾಳಿ ಇರುತ್ತದೆ.

ಪೂರ್ವಾಬಿಮುಖವಾಗಿ ಬೀಸುವ ಗಾಳಿ, ದಕ್ಷಿಣ ಅಮೆರಿಕ ಕರಾವಳಿಯ ನೀರನ್ನು ತನ್ನೊಂದಿಗೆ ಕೊಂಡೊಯ್ಯುತ್ತದೆ. ನಿಧಾನವಾಗಿ ಗಾಳಿ ಕಡಿಮೆಯಾಗುತ್ತಿದ್ದಂತೆ ಬಿಸಿ ಗಾಳಿ ಎಲ್-ನೈನೊ-ಪೆರುವಿಗೆ ವಾಪಸ್ಸಾಗುತ್ತದೆ.

ವಿಶ್ವದಾದ್ಯಂತ ಎಲ್ ನೈನೊ ವ್ಯಾಪಕ ದುರಂತಕ್ಕೆ ಕಾರಣವಾಗುತ್ತಿದೆ. ಇದರಿಂದ ಆಫ್ರಿಕ ಹಾಗೂ ಇಂಡೋನೇಷಿಯದಲ್ಲಿ ಭೀಕರ ಕ್ಷಾಮ ಕಂಡುಬAದು ಸಾವಿರಾರು ಮಂದಿ ಸಾಯುತ್ತಾರೆ. ಗಾಲಾಪಗೋಸ್ ದ್ವೀಪದಲ್ಲಿ ಬೆಂಕಿ ಕಾಣಿಸಿಕೊಳ್ಳುವುದೂ ಇದೆ. ಆಸ್ಟ್ರೇಲಿಯದಲ್ಲೂ ಕ್ಷಾಮ ಕಂಡು ಬರುತ್ತದೆ.

ಕ್ಯಾಲಿಪೊರ್ನಿಯ ಹಾಗೂ ದಕ್ಷಿಣ ಅಮೆರಿಕದಲ್ಲಿ ಚಂಡಮಾರುತದಿಂದಾಗಿ ಮನೆ, ಕಟ್ಟಡ, ಸೇತುವೆಗಳು ಕುಸಿಯುತ್ತವೆ. ದವಸ ಧಾನ್ಯಗಳು ನಾಶವಾಗುತ್ತವೆ. ಸಮುದ್ರ ಬಿಸಿಯಾಗುವುದರಿಂದ ಪೆರುವಿನಲ್ಲೂ ಕೃಷಿ ಹಾಗೂ ಕಾಡುಪ್ರಾಣಿಗಳು ನಾಶವಾಗುತ್ತವೆ. ಇದರಿಂದಾಗಿ ೧೯೯೧ರಲ್ಲಿ ಜಪಾನಿನಲ್ಲಿ ತೂಫಾನುಗಳು ಉಂಟಾಗಿದ್ದವು. ರಾಕಿ ಪರ್ವತಗಳಲ್ಲೂ ದಾಖಲೆಯ ಹಿಮಮಳೆಯಾಗಿತ್ತು.

ಎಲ್ ನೈನೋ ಸುಮಾರು 18 ತಿಂಗಳವರೆಗೂ ಮುಂದುವರಿಯುತ್ತದೆ. ಕೆಲವು ಬಾರಿ ನಿರೀಕ್ಷೆಗೂ ಮೀರಿ ಭೂಮಿಯಲ್ಲಿ ನೈಸರ್ಗಿಕ ದುರಂತಗಳಿಗೆ ಕಾರಣವಾಗುತ್ತದೆ. ಉದಾಹರಣೆ ೧೯೯೧ರಲ್ಲಿ ಉಂಟಾದ ಎಲ್ ನೈನೊದ ಪರಿಣಾಮ ೧೯೯೩ರವರೆಗೆ ಮುಂದುವರಿದಿತ್ತು. ಹಾಗೆಯೇ ೧೯೩೯ರಲ್ಲಿ ಆರಂಭವಾದ ಎಲ್ ನೈನೊ ೧೯೪೧ಕ್ಕೆ ಕೊನೆಗೊಂಡಿತ್ತು. ಆಗ ಉಂಟಾದ ಬಂಗಾಳದ ಭೀಕರ ಕ್ಷಾಮಕ್ಕೆ ಇದೇ ಕಾರಣ.

ವಿಜ್ಞಾನಿಗಳು ಮೊದಲು ಎಲ್ ನೈನೊ ಒಂದು ಸಾಮಾನ್ಯವಾದ ಘಟನೆ, ಮುನ್ನೆಚ್ಚರಿಕೆ ವಹಿಸಿದರೆ ಅದು ಯಾವಾಗ ಉಂಟಾಗಬಹುದು ಎನ್ನುವುದನ್ನು ಪತ್ತೆ ಹಚ್ಚಬಹುದು ಎಂದು ಭಾವಿಸಿದ್ದರು. ಆದರೆ ಈ ಅದು ಸುಳ್ಳಾಗಿದೆ. ಇದರ ಮೂಲ ಕಾರಣ ಇನ್ನು ಪತ್ತೆಯಾಗಿಲ್ಲ. ಅದಕ್ಕಾಗಿ ಸಂಶೋಧನೆಗಳು ಮುಂದುವರಿಯುತ್ತಲೇ ಇದೆ.

ಜೆ. ಪರಶುರಾಮ
ನಿವೃತ್ತ ಹಿರಿಯ ಭೂವಿಜ್ಞಾನಿ
ಗೌರವಾಧ್ಯಕ್ಷರು, ವಿ.ಕೆ.ಎಸ್., ಚಿತ್ರದುರ್ಗ
ಸದಸ್ಯರು, ಬೆಂಗಳೂರು ಸೌತ್ ಸೆಂಟರ್ (ರಿ.)

Click to comment

Leave a Reply

Your email address will not be published. Required fields are marked *

Latest

ದಿನ ಭವಿಷ್ಯ

ಬುಧವಾರ ರಾಶಿ ಭವಿಷ್ಯ-ಆಗಸ್ಟ್-4,2021 ಕಾಮಿಕಾ ಏಕಾದಶಿ ಸೂರ್ಯೋದಯ: 06:04 AM, ಸೂರ್ಯಸ್ತ: 06:44 PM ಸ್ವಸ್ತಿ ಶ್ರೀ ಮನೃಪ ಶಾಲಿವಾಹನ ಶಕೆ1943, ಸಂವತ್2077, ಪ್ಲವ ನಾಮ ಸಂವತ್ಸರ ಆಷಾಢ ಮಾಸ, ದಕ್ಷಿಣಾಯಣ, ಗ್ರೀಷ್ಮ...

ಚಿತ್ರದುರ್ಗ

upper bhadra meeting in DS Hally, chitradurga ಡಿಎಸ್ ಹಳ್ಳಿಯಲ್ಲಿ ಭದ್ರಾ ಮೇಲ್ದಂಡೆ ಸಭೆ; ಗ್ರಾಮಸ್ಥರು ಭಾಗಿ ಸುದ್ದಿಒನ್, ಚಿತ್ರದುರ್ಗ, (ಆ.03) : ತಾಲೂಕಿನ ದೊಡ್ಡಸಿದ್ದವ್ವನಹಳ್ಳಿ ಗ್ರಾಮದ ಜ್ಞಾನಪೂರ್ಣ ಶಾಲೆ ಆವರಣದಲ್ಲಿ...

ಚಿತ್ರದುರ್ಗ

ಸುದ್ದಿಒನ್, ಚಿತ್ರದುರ್ಗ, (ಆ.03) : ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಎಸ್ ಜೆ ಎಮ್ ಸಿ ಬಿ ಎಸ್ ಇ ರೆಸಿಡೆನ್ಷಿಯಲ್ ಶಾಲೆಯು 2020-21 ನೇ ಸಾಲಿನ ಸಿ ಬಿ ಎಸ್ ಇ...

ಪ್ರಮುಖ ಸುದ್ದಿ

ಬೆಂಗಳೂರು: ಸಚಿವ ಸಂಪುಟ ರಚನೆ ಬಗ್ಗೆ ಚರ್ಚೆ ನಡೆಸೋದಕ್ಕಾಗಿಯೇ ಸಿಎಂ ಮೂರು ದಿನದಿಂದ ದೆಹಲಿಯಲ್ಲಿದ್ದಾರೆ. ಈಗಾಗಲೇ ಹೈಕಮಾಂಡ್ ಜೊತೆ ಈ ಬಗ್ಗೆ ಮಾತುಕತೆ ನಡೆದಿದೆ ಎನ್ನಲಾಗಿದೆ. ಅಷ್ಟೇ ಅಲ್ಲ ಸಂಪುಟದಲ್ಲಿ ಯಾರೆಲ್ಲಾ ಇರ್ಬೇಕು...

ಪ್ರಮುಖ ಸುದ್ದಿ

ಮುಂಬೈ: ಶಿಲ್ಲಾ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಎಷ್ಟು ಆ್ಯಕ್ಟೀವ್ ಆಗಿದ್ರೋ ಮಗ ವಿಹಾನ್ ಕುಂದ್ರಾ ಕೂಡ ಅಷ್ಟೇ ಆ್ಯಕ್ಟೀವ್ ಆಗಿದ್ದ. ಸದಾ ಸೋಷಿಯಲ್ ಮೀಡಿಯಾದಲ್ಲಿ ಒಂದಿಲ್ಲೊಂದು ಪೋಸ್ಟ್ ಹಾಕ್ತಾ ಇದ್ದ. ಆದ್ರೆ ರಾಜ್...

ಪ್ರಮುಖ ಸುದ್ದಿ

ರಾಜಸ್ಥಾನ : ಹಿಂದಿನ ಕಾಲದಿಂದಲೂ ಪಾರಿವಾಳ ಸಂದೇಶ ರವಾನಿಸುವ, ಬೇಹುಗಾರಿಕೆಯಲ್ಲೂ ತನ್ನ ಚಾಣಾಕ್ಯತನ ತೋರಿದೆ. ತಂತ್ರಜ್ಞಾನ ಮುಂದುವರೆದ ಕಾಲದಲ್ಲೂ ಪಾಕಿಸ್ತಾನದಿಂದ ಪತ್ರವೊಂದನ್ನ ಹೊತ್ತು ತಂದಿದೆ ಪಾರಿವಾಳ. ಹೌದು, ಈ ಘಟನೆ ನಡೆದಿರೋದು ರಾಜಸ್ಥಾನದ...

You May Also Like

ಚಿತ್ರದುರ್ಗ

ಚಿತ್ರದುರ್ಗ, (ಜು.31): ಕೋಟೆನಾಡಿನಲ್ಲಿ ಮತ್ತೆ ಸರಗಳ್ಳತ ಹಾವಳಿ ಶುರುವಾಗಿದೆ. ಬೆಳಗಿ ಹೊತ್ತು ವಾಯು ವಿಹಾರಕ್ಕೆ ಬರುವ ಮಹಿಳೆಯರನ್ನು ಟಾರ್ಗೆಟ್ ಮಾಡುವ ಕಳ್ಳರು ಬೈಕ್ ನಲ್ಲಿ ಬಂದು ಸರ ಕಿತ್ತುಕೊಂಡು ಪರಾರಿಯಾಗುತ್ತಿದ್ದಾರೆ. ಶನಿವಾರ ಬೆಳಗ್ಗೆ...

ಪ್ರಮುಖ ಸುದ್ದಿ

ಅಭಿಮಾನಿಗಳು ತಮ್ಮ ಅಭಿಮಾನವನ್ನ ಒಂದೊಂದು ಬಾರಿ ಒಂದೊಂದು ರೀತಿಯಲ್ಲಿ ಅಭಿಮಾನ ತೋರಿಸ್ತಾರೆ. ಅದರಲ್ಲೂ ಅಭಿಮಾನಿಗಳು ತಮ್ಮ ನೆಚ್ಚಿನ ನಟ ನಟಿಯರ ಫೋಟೋಗಳಿಗೆ ಹಾರ ಹಾಕಿ, ಅಭಿಷೇಕ‌ ಮಾಡಿ ಎಂಜಾಯ್ ಮಾಡ್ತಾರೆ. ಇನ್ನು ಒಂದೆಜ್ಜೆ...

ಆರೋಗ್ಯ

ರಾಗಿ ತಿಂದೋನಿಗೆ ರೋಗವಿಲ್ಲ ಅನ್ನೋ ಮಾತು ಕೇಳಿರ್ತೀರಿ. ಆದ್ರೆ ಈ ಮಾತು ಯಾಕೆ ಹೇಳ್ತಾರೆ ಅಂತ ಗೊತ್ತಾಗ್ಬೇಕಂದ್ರೆ ರಾಗಿಯಿಂದ ಆರೋಗ್ಯಕ್ಕೆ ಅದೆಷ್ಟೆಲ್ಲ ಲಾಭಗಳಿವೆ ಎಂದು ತಿಳ್ಕೋಬೇಕು. ರಾಗಿಯಲ್ಲಿ ಸಾಕಷ್ಟು ಕ್ಯಾಲ್ಶಿಯಂ ಇದೆ. ಆಸ್ಟಿಯೋಪೋರೋಸಿಸ್...

ಆರೋಗ್ಯ

ಅರಳಿ ಮರ ಸಾಮಾನ್ಯವಾಗಿ ಎಲ್ಲೆಡೆ ಇರುತ್ತೆ. ಅದಕ್ಕೆ ನಗರ, ಗ್ರಾಮೀಣ ಅಂತೆಲ್ಲಾ ಏನಿಲ್ಲ. ನಗರ ಪ್ರದೇಶದಲ್ಲೂ ದೇವಾಲಯದ ಮುಂದೆ ಅರಳಿಮರವನ್ನ ಕಾಣಬಹುದು. ಈ ಅರಳಿ‌ಮರದ ಎಲೆಗಳಿಂದ ಸಾಕಷ್ಟು ಲಾಭಗಳಿವೆ. ಅದು ಅಷ್ಟಾಗಿ ಯಾರಿಗೂ...

Copyright © 2021 Suddione. Kannada online news portal

error: Content is protected !!