Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮುಂಗಾರು ಮಳೆ ಕೊರತೆಗೆ “ಎಲ್‌ ನಿನೊ” ಮಾರಕವೆ ?

---Advertisement---

ವಿಶೇಷ ಲೇಖನ :
ಜೆ. ಪರಶುರಾಮ
ನಿವೃತ್ತ ಹಿರಿಯ ಭೂವಿಜ್ಞಾನಿ,
ಸದಸ್ಯರು, ಬೆಂಗಳೂರು ಸೌತ್ ಸೆಂಟರ್ (ಒ.)
ಮೊಬೈಲ್ ಸಂಖ್ಯೆ : 94483 38821

ಸುದ್ದಿಒನ್, ಜೂನ್‌. 21 :
ಕರ್ನಾಟಕದಲ್ಲಿ ಪ್ರಸ್ತುತ ವರ್ಷ ಮುಂಗಾರು ಮಳೆಯ ಆರಂಭದಿಂದಲೇ ದುರ್ಬಲಗೊಂಡಿರುವುದಕ್ಕೆ ಮುಖ್ಯ ಕಾರಣ “ಎಲ್‌ ನಿನೋ” (EL Nino) ಪ್ರಭಾವ, ಇದರ ಜೊತೆಗೆ ಮಾರುತಗಳ ದಿಕ್ಕುಗಳಲ್ಲಿನ ಬದಲಾವಣೆ ಆಗು ಅರೇಬಿಯನ್‌ ಸಮುದ್ರದಲ್ಲಿ ಅಗತ್ಯವಾದ ತೇವಾಂಶ ಮತ್ತು ಮೊಡಗಳ ಕೊರತೆಯಿಂದಾಗಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗುತ್ತಿಲ್ಲ.

ಕರ್ನಾಟಕದಲ್ಲಿ ಮಳೆಯ ಕೊರತೆಯಾಗಲು ಮುಖ್ಯ ಕಾರಣಗಳೇನೆಂದರೆ ಪೆಸಿಪಿಕ್‌ ಮಹಾಸಾಗರದಲ್ಲಿ ತಾಪಮಾನ ಹೆಚ್ಚಳದಿಂದಾಗಿ ಉಂಟಾಗುವ ಎಲ್‌ ನಿನೊ ವಿದ್ಯಾಮಾನವು ಭಾರತದ ಮುಂಗಾರು ಮಾರತಗಳನ್ನು ದುರ್ಬಲಗೊಳಿಸುತ್ತದೆ. ಇದು ಮಳೆಯ ಮೊಡಗಳು ದಕ್ಷಿಣ ಭಾರತದ ಕಡೆಗೆ ಸರಿಯಲು ಅಡ್ಡಿಪಡಿಸುತ್ತದೆ. ಅರೇಬಿಯನ್‌ ಸಮುದ್ರದಿಂದ ಬೀಸುವ ತೇವಾಂಶ ಭರಿತ ಗಾಳಿಯ ವೇಗ ಮತ್ತು ತೀವ್ರತೆ ತಗ್ಗುವುದರಿಂದ ಕರ್ನಾಟಕದ ಪ್ರದೇಶದ ಮುಂಗಾರು ಮಾರುತಗಳ ಸ್ಥಗಿತಗೊಂಡಿವೆ. ಸಾಮಾನ್ಯವಾಗಿ ಹೆಚ್ಚು ಮಳೆ ಪಡೆಯುವ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಮೊಡಗಳು ಕಾಣಿಸದೆ ಮಳೆ ಕೊರತೆ ಉಂಟಾಗುತ್ತದೆ. ರಾಜ್ಯದಲ್ಲಿ ಒಟ್ಟಾರೆ ಶೇ. 21ರಷ್ಟು ಮಲೆ ದಾಖಲಾಗಿದೆ. ಭಾರತೀಯ ಹವಾಮಾನ ಇಲಾಖೆ (IMD) ರಾಜ್ಯದಲ್ಲಿ ಮಳೆ ಪ್ರಮಾಣವು ಸರಾಸರಿಗಿಂತ ಕಡಿಮೆಯಾಗಲಿದೆ ಎಂದು ಹೆಚ್ಚರಿಸಿದ್ದು, ಕಾವೇರಿ ಮತ್ತು ಇತರ ಜಲಾಶಯಗಳಲ್ಲಿ ನೀರಿನ ಮಟ್ಟ ತಗ್ಗಲು ಇದು ನೇರ ಕಾರಣವಾಗಿದೆ.

ರಾಜ್ಯದಲ್ಲಿ ಮಳೆ ವಿಳಂಬವಾಗಿರುವುದರಿಂದ ಮತ್ತು ಬಿತ್ತನೆ ಸಮಯದಲ್ಲಿ ನೀರಿನ ಕೊರತೆಯಾಗುವುದರಿಂದ ಬಿತ್ತನೆ ಕ್ಷೇತ್ರ ಕಡಿಮೆಯಾಗಿ ಕೃಷಿ ಉತ್ಪಾದನೆಗೆ ಭಾರಿ ನಷ್ಟವಾಗುತ್ತಿದೆ ಹಾಗೂ ರಾಜ್ಯದಲ್ಲಿನ ತಾಪಮಾನದಲ್ಲಿ ಹೆಚ್ಚು ಕಂಡುಬರುತ್ತಿದೆ. ಮಳೆಗಾಲದಲ್ಲಿ ಸಹ ಬಿಸಿಲಿನ ತಾಪ ಮತ್ತು ತೇವಾಂಶದ ಕೊರತೆಯಿಂದಾಗಿ ಜನರು ತೀವ್ರ ಹವಾಮಾನ ಒತ್ತಡವನ್ನು ಎದುರಿಸಬೇಕಾಗಿರುತ್ತದೆ. ಭವಿಷ್ಯದಲ್ಲಿ ಮಳೆಯ ಪ್ರಮಾಣ ಏರಿಳಿತಗಳಿಂದ ಕೂಡಿದ್ದು, ಒಟ್ಟಾರೆ ವಾರ್ಷಿಕ ಮಳೆ ಕಡಿಮೆಯಾಗುವ ಸಾಧ್ಯತೆಯಿದೆ.

ಭವಿಷ್ಯದಲ್ಲಿ ಮಳೆಯ ಪ್ರಮಾಣ ಏರಿಳಿತಗಳಿಂದ ಕೂಡಿದ್ದು, ಒಟ್ಟಾರೆ ವಾರ್ಷಿಕ ಮಳೆ ಕಡಿಮೆಯಾದರೂ ಕೆಲವೊಮ್ಮೆ ಅಲ್ಪಾವಧಿಯಲ್ಲಿ ಭಾರಿ ಪ್ರಮಾಣದ ಮಳೆಯಾಗುವ ಸಾಧ್ಯತೆಗಳಿವೆ. ಇದು ಪ್ರವಾಹ ಅಥವಾ ಬರಗಾಲಕ್ಕೆ ಕಾರಣವಾಗಬಹುದು.

 

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now