in

ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಳ್ಳುವ ಮೂಲಕ ಶಾಲೆಗಳ ಉದ್ದಾರಕ್ಕಾಗಿ ಶ್ರಮಿಸಬೇಕು : ಬಿ.ಟಿ. ಅಪರೂಪ

suddione whatsapp group join

ಚಿತ್ರದುರ್ಗ, (ಜ.26) : ಶಾಲೆಯ ಮಕ್ಕಳು ವಿಧ್ಯಾಭ್ಯಾಸದ ಕಡೆ ಗಮನ ಕೊಟ್ಟು ಶಿಕ್ಷಕರು, ಮತ್ತು ಪೋಷಕರ ಮಾತುಗಳನ್ನು ಕೇಳಿಕೊಂಡು ಭಾರತದ ಉತ್ತಮ ಪ್ರಜೆಗಳಾಗಬೇಕೆಂದು ಸರ್ಕಾರಿ ಶಾಲೆಗಳಲ್ಲಿ ಓದಿದ ಎಷ್ಟೋ ಮಹನೀಯರು ಭಾರತದ ಪ್ರಖ್ಯಾತ ನಾಯಕರಾಗಿದ್ದಾರೆಂದು ಬಿ.ಟಿ. ಅಪರೂಪ ಹೇಳಿದರು.

ಅವರು ತಾಲ್ಲೂಕಿನ ಭೀಮಸಮುದ್ರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ಮಾಜಿ ವಿಧಾನ ಪರಿಷತ್ ಸದಸ್ಯರಾಗಿದ್ದ  ದಿವಂಗತ ಬಿ.ಟಿ.ಚನ್ನಬಸಪ್ಪನವರ ಕುಟುಂಬದವರ ವತಿಯಿಂದ ಉಚಿತ  ಸಮವಸ್ತ್ರ ಹಾಗೂ ಈಶ್ವರ ಪೌಂಡೇಷನ್ ವತಿಯಿಂದ ಬಿಸಿಯೂಟದ ಪರಿಕರಗಳನ್ನು ಗಣರಾಜ್ಯೋತ್ಸವದ ಅಂಗವಾಗಿ ಕೊಡುಗೆಯಾಗಿ ನೀಡಿ ಮಾತನಾಡಿದರು.

ಅದೇ ರೀತಿಯಾಗಿ ಪೋಷಕರು ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಳ್ಳುವುದರ ಮೂಲಕ ಶಾಲೆಗಳ ಉದ್ದಾರಕ್ಕಾಗಿ ಶ್ರಮಿಸಬೇಕೆಂದು ಕರೆನೀಡಿದರು.

ಅಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷರಾದ ಬಿ.ಇ. ಜಗದೀಶ್ ಮಾತನಾಡಿ ಸರ್ಕಾರಿ ಶಾಲೆಗಳು ಇಂದು ಉತ್ತಮ ಶಾಲೆಗಳಾಗಿ ರೂಪುಗೊಳ್ಳುತ್ತಿದ್ದು, ಪೋಷಕರು ಸರ್ಕಾರಿ ಶಾಲೆಗಳ ಕಡೆ ಅಸಡ್ಡೆ ಮಾಡದೆ ಇಲ್ಲಿ ಓದುತ್ತಿರುವ ಬಡಮಕ್ಕಳಿಗೆ ಉತ್ತಮ ಶಿಕ್ಷಣ ಪಡೆಯಲು ನೆರವು ನೀಡಬೆಕೆಂದೂ ನಮ್ಮ ತಂದೆಯವರಾದ ಈಶ್ವರಪ್ಪನವರು ಸರ್ಕಾರಿ ಶಾಲೆಯಲ್ಲಿಯೇ ಓದಿ ಡಾಕ್ಟರ್ ಆದರೆಂದು ತಿಳಿಸಿದರು ಅದೇ ರೀತಿಯಾಗಿ ಈಶ್ವರ ಪೌಂಡೇಷನ್ ವತಿಯಿಂದ ಶಾಲೆಗಳಿಗೆ ನೆರವು ನೀಡುವುದಾಗಿ ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ತಿಪ್ಪೇಸ್ವಾಮಿಯವರು ಮಾತನಾಡುತ್ತಾ ಇಂದು ಸರ್ಕಾರಿ ಶಾಲೆಗಳು ಉನ್ನತ ಮಟ್ಟಕ್ಕೆ ಹೋಗುತ್ತಿದ್ದು, ಸರ್ಕಾರಗಳು ಶಾಲೆಗಳಿಗಾಗಿ ವಿಶೇಷ ಅನುದಾನಗಳನ್ನು ನೀಡುತ್ತಿದ್ದು, ಮಕ್ಕಳಿಗೆ, ಸಮವಸ್ತ್ರ, ಬಿಸಿಯೂಟ ಶೂ ಮುಂತಾದ ಸೌಲಭ್ಯಗಳನ್ನು ನೀಡುತ್ತಿದ್ದು ಮಕ್ಕಳ ಕೌಶಲ್ಯ ಅಭಿವೃದ್ದಿಗಾಗಿ ಇಲಾಖೆಯವರು ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಂಡು ಮಕ್ಕಳ ಸರ್ವಾಂಗೀಣ ಪ್ರಗತಿಗಾಗಿ ಶ್ರಮಿಸುತ್ತಿರುವುದಾಗಿ ತಿಳಿಸಿದರು.

ಶಾಲೆಯ ಮುಖ್ಯ ಶಿಕ್ಷಕಿಯಾದ ಪಾರ್ವತಿ ಬಾಯಿಯವರು ಮಾತನಾಡುತ್ತಾ ಭೀಮಸಮುದ್ರದ ಗ್ರಾಮಸ್ಥರು ಉದಾರವಾದ ಗುಣದವರಾಗಿದ್ದು ನಮ್ಮ ಶಾಲೆಯ ಪ್ರಗತಿಗಾಗಿ ದಾನ ನೀಡಿದ್ದು, ಸಂತಸ ತಂದಿದೆ ಎಂದು ತಿಳಿಸಿದರು ಶಿಕ್ಷಕ/ಶಿಕ್ಷಕಿಯರು ಇಲ್ಲಿ ಉತ್ತಮವಾಗಿ ಕಾರ್ಯವನ್ನು ಮಾಡುತ್ತಾ ಪ್ರಗತಿಯತ್ತ ಸಾಗುತ್ತಿದೆ ಎಂದು ತಿಳಿಸಿದರು.

ನಿವೃತ್ತ ಮುಖ್ಯ ಶಿಕ್ಷಕರಾದ ಶ್ರೀ ಬಿ.ಕೆ. ಕಲ್ಲಪ್ಪನವರು ಮಾತನಾಡುತ್ತಾ ಶಿಕ್ಷಕ/ ಶಿಕ್ಷಕಿಯರು ಮಕ್ಕಳಿಗಾಗಿ ತಮ್ಮ ಎಲ್ಲಾ ವೈಯಕ್ತಿಕ ಕೆಲಸಗಳನ್ನು ಬದಿಗೊತ್ತಿ ಮಕ್ಕಳ ಶೈಕ್ಷಣಿಕ ಅಭಿವೃದ್ದಿಯತ್ತ ಗಮನ ಹರಿಸಿದರೆ ಮಾತ್ರ ಯಾವುದೇ ಶಾಲೆಗಳು ಪ್ರಗತಿಯಾಗುವುದಾಗಿ ತಿಳಿಸಿದರು.

ಸರ್ಕಾರಿ ಶಾಲೆಗಳು ಪ್ರಗತಿಯಾದರೆ ದೇಶದ ಪ್ರಗತಿಯಾಗುವುದು ಇಂದು ಕ್ಷೇತ್ರ ಸಮನ್ವಯಾಧಿಕಾರಿಗಳಾದ ಸಂಪತ್ ಕುಮಾರ್ ವರು ತಿಳಿಸಿದರು.
ಈ ಸಂದರ್ಭದಲ್ಲಿ ಕುಮಾರಿ ಬಿ.ಟಿ. ಅಪರೂಪ, ಬಿ.ಇ. ಜಗದೀಶ್ ರವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಮ್.ಸಿ ಆದ್ಯಕ್ಷರಾದ ಸಂತೋಷ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ  ಸಿ.ಆರ್.ಪಿ. ದೃವಕುಮಾರ್. ಇ.ಸಿ.ಒ. ಅಂಜಿನಪ್ಪ, ಉಪನ್ಯಾಸಕರಾದ ಡಾ. ಗುರುನಾಥ್ ಮಾಜಿ ತಾಲ್ಲೂಕು ಪಂಚಾಯ್ತಿ ಸದಸ್ಯರಾದ ಚಂದ್ರಾನಾಯ್ಕ್ ಗ್ರಾಮಸ್ಥರಾದ ನಿಜಲಿಂಗಪ್ಪ,  ನಿವೃತ್ತ ಶಿಕ್ಷಕರಾದ ಕೃಷ್ಣಮೂರ್ತಿ, ಧನಂಜಯಪ್ಪ ಶಿಕ್ಷಕರು, ಊರಿನ ಗ್ರಾಮಸ್ಥರು, ಮಕ್ಕಳು ಉಪಸ್ಥಿತರಿದ್ದರು.

What do you think?

Written by suddionenews

Leave a Reply

Your email address will not be published.

GIPHY App Key not set. Please check settings

ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಟಾರ್ಗೆಟ್ ಮಾಡಿ ರಮೇಶ್ ಜಾರಕೊಹೊಳಿ, ಸುಧಾಕರ್ ಗೆ ಸುಪಾರಿ ಕೊಟ್ಟರಾ..?

ಪ್ರಧಾನಿ‌ ಮೋದಿ ಹುಟ್ಟುಹಬ್ಬಕ್ಕೆ ತಂದಿದ್ದ ನಮೀಬಿಯ ಚೀತಾಗೆ ಕಿಡ್ನಿ ಸಮಸ್ಯೆ..!