ಇ-ಶ್ರಮ ಕಾರ್ಡ್‍ದಾರರು ಆಧಾರ್‌ ನೊಂದಿಗೆ ಮೊಬೈಲ್ ಸಂಖ್ಯೆ ಜೋಡಣೆಗೆ ಕಾಲಾವಕಾಶ

suddionenews
1 Min Read

ಚಿತ್ರದುರ್ಗ, (ಫೆಬ್ರವರಿ.28) :ಕಾರ್ಮಿಕ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವಿವಿಧ ಸೌಲಭ್ಯಗಳ ಸಹಿತ, ಇ-ಶ್ರಮ ಕಾರ್ಡ್‍ದಾರರು ಕಾರ್ಡ್‍ನ ಸೌಲಭ್ಯವನ್ನು ಪಡೆದುಕೊಳ್ಳಲು ಮೊಬೈಲ್ ಸಂಖ್ಯೆಯನ್ನು ಆಧಾರ್‍ನೊಂದಿಗೆ ಜೋಡಣೆ ಮಾಡಬೇಕಾಗಿರುತ್ತದೆ.

ಈ ಹಿನ್ನೆಲೆಯಲ್ಲಿ “Aadhar Mobile number updating Camps”  India Post Payments Bank  (ಅಂಚೆ ಇಲಾಖೆ) ವತಿಯಿಂದ ಕೈಗೊಳ್ಳಲಾಗಿದೆ.
ಚಿತ್ರದುರ್ಗ ಜಿಲ್ಲೆಯ ಇ-ಶ್ರಮ ನೋಂದಣಿದಾರರು ಹಾಗೂ ಕಟ್ಟಡ ಕಾರ್ಮಿಕರು  ತಮ್ಮ ವ್ಯಾಪ್ತಿಯ ಕಾರ್ಮಿಕ ನಿರೀಕ್ಷಕರ ಕಚೇರಿಯಲ್ಲಿ ಮಾರ್ಚ್ 02 ರಿಂದ ಮಾರ್ಚ್ 15ರವರಗೆ ಬೆಳಿಗ್ಗೆ 10 ರಿಂದ 12.30 ರವರೆಗೆ ಕಾಲಾವಕಾಶವಿದ್ದು, ತಮ್ಮ ಆಧಾರ್ ಮತ್ತು ಮೊಬೈಲ್‍ನೊಂದಿಗೆ ತಮಗೆ ಸಂಬಂಧಿಸಿದ ವ್ಯಾಪ್ತಿಯ ಕಾರ್ಮಿಕ ನಿರೀಕ್ಷಕರ ಕಚೇರಿಯಲ್ಲಿ Aadhar Mobile number updating ಮಾಡಿಸಿಕೊಳ್ಳಬೇಕು ಎಂದು ಕಾರ್ಮಿಕ ಅಧಿಕಾರಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *