ಚಿತ್ರದುರ್ಗ,(ಮೇ.01) : ನಗರದ ವೀರಶೈವ ಲಿಂಗಾಯತ ಸಮಾಜದವತಿಯಿಂದ ವಿಶ್ವಗುರು ಬಸವೇಶ್ವರರ ಜಯಂತಿಯ ಅಂಗವಾಗಿ ಬೈಕ್ ರ್ಯಾಲಿ ಮತ್ತು ಬಸವೇಶ್ವರ ಬಾವಚಿತ್ರ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ಅಧ್ಯಕ್ಷರಾದ ಎಲ್.ಬಿ ರಾಜಶೇಖರ್ ತಿಳಿಸಿದ್ದಾರೆ.
ಮೇ.2ರ ಮಧ್ಯಾಹ್ನ 4 ಗಂಟೆಗೆ ನಗರದ ನೀಲಕಂಠೇಶ್ವರ ದೇವಾಲಯದಿಂದ ಪ್ರಾರಂಭವಾಗುವ ಬೈಕ್ ರ್ಯಾಲಿಯು ಗಾಂಧಿ ಸರ್ಕಲ್, ಪ್ರವಾಸಿ ಮಂದಿರ, ಜಿಲ್ಲಾಧಿಕಾರಿಗಳನಿವಾಸ ಮುಂಭಾಗ ಬಸವೇಶ್ವರ ಸರ್ಕಲ್, ನ್ಯಾಯಾಲಯದ ರಸ್ತೆ, ಮದಕರಿ ವೃತ್ತ, ರಂಗಯ್ಯನ ಬಾಗಿಲು, ದೊಡ್ಡಪೇಟೆ, ಚಿಕ್ಕಪೇಟೆ, ಆನೆಬಾಗಿಲು ಬುರುಜನಹಟ್ಟಿ, ಸಂಗೊಳ್ಳಿ ರಾಯಣ್ಣ ವೃತ್ತ, ಕನಕ ಸರ್ಕಲ್ ಮಾರ್ಗವಾಗಿ ನೀಲಕಂಟೇಶ್ವರ ದೇವಾಲಯ ತಲುಪಲಿದೆ.
ಮೇ. 3 ರ ಮಧ್ಯಾಹ್ನ 4 ಗಂಟೆಯಿಂದ ನೀಲಕಂಠೇಶ್ವರ ದೇವಾಲಯದಿಂದ ಶ್ರೀ ಬಸವೇಶ್ವರ ಬಾವಚಿತ್ರದೊಂದಿಗೆ ಮೆರವಣಿಗೆ ನಡೆಯಲಿದ್ದು, ಇದರಲ್ಲಿ ಡಿಜೆ.ವೀರಗಾಸೆ, ಪೂರ್ಣಕುಂಭದೊಂದಿಗೆ ವಿವಿಧ ಜಾನಪದ ಕಲಾಮೇಳ ಭಾಗವಹಿಸಲಿವೆ ಎಂದು ತಿಳಿಸಿದ್ದಾರೆ.






GIPHY App Key not set. Please check settings