ದುರ್ಗಾ ದೇವಿ ದುರ್ಗೋತ್ಸವಕ್ಕೆ ವಿದ್ಯುಕ್ತ ಚಾಲನೆ

suddionenews
1 Min Read

ಸುದ್ದಿಒನ್, ಚಿತ್ರದುರ್ಗ, (ಅ.07) : ನಗರದ ಸ್ಟೇಡಿಯಂ‌ ರಸ್ತೆಯ ಬನ್ನಿ ಮಹಾಕಾಳಮ್ಮ ದೇವಸ್ಥಾನದ ಆವರಣದಲ್ಲಿ ದಸರಾ ನವರಾತ್ರಿ ಪ್ರಯುಕ್ತ  ಶ್ರೀ ದುರ್ಗಾದೇವಿ ದುರ್ಗೋತ್ಸವಕ್ಕೆ ಗುರುವಾರ ವಿದ್ಯುಕ್ತ ಚಾಲನೆ ದೊರೆಯಿತು.

ಹಿಂದೂ ಗರ್ಜನೆ ಸೇನಾ ಸಂಸ್ಥಾನದಿಂದ ದೇವಿಯನ್ನು ಪ್ರತಿಷ್ಠಾಪಿಸಲಾಗಿದೆ. ಗುರುವಾರ ಮುಂಜಾನೆ ಬ್ರಾಹ್ಮೀ ಮುಹೂರ್ತದಲ್ಲಿ ಗೋಪೂಜೆ, ಗಣಪತಿ ಪೂಜೆ, ಪುಣ್ಯಾಹಃವಾಚನ, ದುರ್ಗಾ ಮೃತಿಕಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ, ಪಂಚಾಮೃತ ಅಭಿಷೇಕ, ಅಲಂಕಾರ, ಮಹಾಪೂಜೆ, ಕುಂಕುಮಾರ್ಚನೆ, ಶ್ರೀ ದುರ್ಗಾ ಸಪ್ತಶತೀ ಪಾರಾಯಣ, ಶ್ರೀ ಲಲಿತಾ ಸಹಸ್ರನಾಮ ನೆರವೇರಿದವು.

ಅ.16 ರವರೆಗೆ ನಿತ್ಯ ಬೆಳಗ್ಗೆ ಮತ್ತು ಸಂಜೆ ಪೂಜೆ ನಡೆಯಲಿವೆ. 8 ರಂದು ಶ್ರೀಕಾಂತ್ ಅವರಿಂದ ಶ್ರೀ ಮಹಾಲಕ್ಷ್ಮಿ ಪೂಜೆ, 9 ರಂದು ಸೌಂದರ್ಯ ಲಹರಿ ,10 ರಂದು ಗುರುರಾಜ್ ಅವರಿಂದ ಕೊಳಲು ವಾದನ, 11 ಕ್ಕೆ ವೀರಜಾ, ಭಾರ್ಗವಿ ಅವರಿಂದ ಶ್ರೀ ದೇವಿ ಸ್ತೋತ್ರ, 12 ರ ಬೆಳಗ್ಗೆ ಶ್ರೀ ಸರಸ್ವತಿ ಪೂಜೆ ಹಾಗೂ ಅಕ್ಷರಾಭ್ಯಾಸ ಸಂಜೆ ಭಗವದ್ಗೀತೆ ಪಾರಾಯಣ.

13 ರಂದು ಬೆಳಗ್ಗೆ ದುರ್ಗಾಷ್ಟಮಿ ಪ್ರಯಕ್ತ ಗಣ ಹೋಮ, ನವಗ್ರಹ ಹೋಮ, ಧನ್ವಂತರಿ ಹೋಮ, ಸುದರ್ಶನ ಹೋಮ, ನರಸಿಂಹ ಹೋಮ, ಲಕ್ಷ್ಮೀ ನಾರಾಯಣ ಹೋಮ, ಮೃತ್ಯುಂಜಯ ಹೋಮ, ಲಲಿತ ಹೋಮ ಹಾಗೂ ದುರ್ಗಾ ಹೋಮ ನಡೆಯಲಿದೆ. ಸಂಜೆ ನವದುರ್ಗೆಯರ ವಿಶೇಷ ವೇಷಭೂಷಣ ನಡೆಯುತ್ತದೆ.
14 ರಂದು ಆಯುಧ ಪೂಜೆ ಪ್ರಯುಕ್ತ ಆಯುಧ ಹಾಗೂ ವಾಹನ ಪೂಜೆ ಸಂಜೆ ಶ್ರೀ ದೇವಿಯ ಭಕ್ತಿ ಗೀತೆಗಳ ಗಾಯನ ಏರ್ಪಡಿಸಲಾಗಿದೆ.
15 ರಂದು ದೇವಿಯ ಬನ್ನಿಮುಡಿ ಉತ್ಸವ ಹಾಗೂ ಸಂಜೆ ಶ್ರೀಕಾಂತ್ ಅವರಿಂದ ಶ್ರೀ ಅಷ್ಟಲಕ್ಷ್ಮೀ ಪೂಜೆ ಹಾಗೂ 16 ರಂದು ಬೆಳಗ್ಗೆ ಶ್ರೀ ದೇವಿಯ ಗ್ರಾಮ ಪ್ರದಕ್ಷಿಣೆ ಹಾಗೂ ಶ್ರೀ ದೇವಿಯ ವಿಸರ್ಜನೆ ನಡೆಯಲಿದೆ  ಎಂದು ಸಮಿತಿ ತಿಳಿಸಿದೆ.

Share This Article
Leave a Comment

Leave a Reply

Your email address will not be published. Required fields are marked *