ಎದೆ ಮೇಲೂ ವಿಜಿನೆ..ಕೈ ಮೇಲೂ ವಿಜಿನೆ..ಹೇಗಿದೆ ಗೊತ್ತಾ ‘ಸಲಗ’ ಕ್ರೇಜ್..?

suddionenews
1 Min Read

ಒಂದು ಸಿನಿಮಾ ರಿಲೀಸ್ ಗೂ ಮೊದಲೇ ಸೌಂಡ್ ಮಾಡುತ್ತೆ ಅಂದ್ರೆ ಅದು ಸುಮ್ನೆ ಅಲ್ಲ..ಆ ಸಿನಿಮಾ ಹಿಂದಿನ ಪರಿಶ್ರಮವೂ ಅಷ್ಟೇ ಇರುತ್ತೆ..ಸದ್ಯಕ್ಕೆ ಗಾಂಧಿನಗರವನ್ನಷ್ಟೇ ಅಲ್ಲ ಇಡೀ ಸಿನಿಮಾ ಭಕ್ತಕುಲವೇ ಕಾತುರದ ಕಣ್ಗಳಿಂದ ನೋಡುವಂತೆ ಮಾಡಿರೋ ಸಿನಿಮಾ ಸಲಗ.

ಎಸ್..ದುನಿಯಾ ವಿಜಯ್ ಮೊದಲ ನಿರ್ದೇಶನದ ಸಿನಿಮಾ ಕ್ರೇಜ್ ಎಷ್ಟಿದೆ ಅನ್ನೋದನ್ನ ನಾವ್ ಹೇಳ್ಬೇಕಿಲ್ಲ..ಇಡೀ ಸೋಷಿಯಲ್ ಮೀಡಿಯಾದಲ್ಲೆಲ್ಲಾ ಆ ಕ್ರೇಜ್ ಕಣ್ಣಿಗೆ ರಾಚುವಂತೆ ಅದಾಗಲೇ ನಿಮ್ಗೂ ಬಿದ್ದಾಗಿದೆ ಅನ್ಸುತ್ತೆ. ಕರಿಚಿರತೆಗಾಗಿ ಕಾಯ್ತಿರೋ ಭಕ್ತಗಣ ಸಲಗ ಸಲಗ ಅಂತ ಗೀಳಿಡ್ತಾ ಇದ್ದಾರೆ.ನಾಡದೇವಿ ಮೆರವಣಿಗೆ ಹೊರಟಾಗ ಸಲಗ ಸೌಂಡ್ ಮಾಡ್ಲೇಬೇಕಲ್ಲ. ಎಸ್. ಅಂದೇ ಅಂದ್ರೆ ಅಕ್ಟೋಬರ್14 ರಂದೇ ಸಲಗ ಸಿನಿಮಾ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಪ್ರದರ್ಶನಕ್ಕೆ ಸಜ್ಜಾಗಿದೆ. ಈಗಾಗ್ಲೇ ಮೈನ್ ಥಿಯೇಟರ್ ಗಳಲ್ಲಿ ಕಟೌಟ್ ಎದ್ದು ನಿಂತಿದೆ.

ಜಿಲ್ಲೆಜಿಲ್ಲೆಗಳಲ್ಲೂ ಸಲಗ ಹವಾ ಜೋರಾಗಿದೆ. ದುನಿಯಾ ವಿಜಿ ಹುಡುಗ್ರು ಇನ್ನು ವಾರ ಇರುವಾಗ್ಲೇ ಹಬ್ಬ ಶುರು ಮಾಡವ್ರೆ. ಎಲ್ಲೆಲ್ಲೂ ಸಲಗನ ಸೌಂಡ್ ಕೇಳ್ತಾ ಇದೆ. ಅಭಿಮಾನಿಗಳು ಕೈ ಮೇಲೆ ಹಚ್ಚೆ ಹಾಕಿಸಿಕೊಂಡು ಅಭಿಮಾನ ಮೆರೀತಾ ಇದ್ದಾರೆ. ಅಷ್ಟೇ ಅಲ್ಲ ಪಕ್ಕಾ ಅಭಿಮಾನಿಯೊಬ್ಬ ಎದೆ ಮೇಲೆ ‘ಸಲಗ’ ಟ್ಯಾಟೂ ಹಾಕಿಸಿಕೊಂಡಿದ್ದಾನೆ. 10 ಕ್ಕೂ ಹೆಚ್ಚು ಅಭಿಮಾನಿಗಳು ಈ ರೀತಿ ಟ್ಯಾಟೂ ಹಾಕಿಸಿಕೊಂಡು ತಮ್ಮ ಅಭಿಮಾನವನ್ನ ತೋರಿದ್ದಾರೆ. ಸಲಗನ ಕ್ರೇಜ್ ಗಡಿದಾಟಿ ಹೋಗಿದೆ. ಗೋವಾದಲ್ಲೆಲ್ಲಾ ತಮ್ಮ ಅಭಿಮಾನ ತೋರಿಸುತ್ತಿದ್ದಾರೆ. ಇದು ಸಹಜವಾಗಿಯೇ ವಿಜಿಯನ್ನ ಭಾವುಕರನ್ನಾಗಿದೆ.

ಸಿನಿಮಾದ ಟ್ರೇಲರ್, ಸಾಂಗ್ಸ್ ಹೆಚ್ಚಿಸಿರೋ ಕೌತುಕಕ್ಕೆ ತೆರೆ ಬೀಳೊದಕ್ಕೆ ಇನ್ನೊಂದೆ ವಾರ ಬಾಕಿ ಇದೆ. ಅದಕ್ಕಾಗಿಯೇ ಗಂಧದ ಗುಡಿ ಕೂಡ ಕಾಯ್ತಾ ಕುಳಿತಿದೆ. ಇಡೀ ಭಕ್ತ ಗಣ ಲೆಕ್ಕಾ ಹಾಕ್ತಾ ಇದ್ದಾರೆ. ಸಿನಿಮಾಗೆ ಎ ಸರ್ಟಿಫಿಕೇಟ್ ಕೂಡ ಸಿಕ್ಕಿದೆ. ಇನ್ನೇನಿದ್ರು ಥಿಯೇಟರ್ ನಲ್ಲಿ ವಾದ್ಯ ಮೇಳದೊಂದಿಗೆ ಸಲಗನ ಆರ್ಭಟ ನೋಡೋದೊಂದೆ ಬಾಕಿ.

Share This Article
Leave a Comment

Leave a Reply

Your email address will not be published. Required fields are marked *