ಹೊಸದುರ್ಗ ತಾಲೂಕಿನ 36916 ಹೆಕ್ಟೇರ್ ಪ್ರದೇಶಕ್ಕೆ ಹನಿ ನೀರಾವರಿ; 85 ಕೆರೆಗಳಿಗೆ ನೀರುಣಿಸುವ ಬೃಹತ್ ಯೋಜನೆಗೆ ಮುಖ್ಯಮಂತ್ರಿ ಚಾಲನೆ

suddionenews
1 Min Read

ಚಿತ್ರದುರ್ಗ,( ಜೂನ್.02) : ಹೊಸದುರ್ಗ ತಾಲೂಕಿನ ಜನರ ಬಹುದಿನಗಳ ಕನಸಾಗಿದ್ದ ನೀರಾವರಿ ಯೋಜನೆಗಳು ನನಸಾಗುತ್ತಿವೆ. ಭದ್ರಾ ಮೇಲ್ಡಂಡೆ ಯೋಜನೆ ಕಾಮಗಾರಿಗಳಿಗೆ ವೇಗ ಸಿಗುತ್ತಿದೆ.

ಜೂನ್ 04 ರಂದು ಮುಖ್ಯಮಂತ್ರಿ ಬಸವರಾಜ ಎಸ್ ಬೊಮ್ಮಾಯಿ ಹೊಸದುರ್ಗ ತಾಲೂಕಿನ ಕಸಬಾ, ಮಾಡದಕೆರೆ ಮತ್ತು ಶ್ರೀರಾಂಪುರ ಹೋಬಳಿಯ 116 ಗ್ರಾಮಗಳ 36916 ಹೆಕ್ಟೇರ್ ಕೃಷಿ ಭೂಮಿಯ ಖರೀಫ್ ಬೆಳೆಗಳಿಗೆ ಡ್ರಿಪ್ ಮೂಲಕ ಹನಿ ನೀರಾವರಿ ಒದಗಿಸುವ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಇದರೊಂದಿಗೆ ತಾಲೂಕಿನ 85 ಕೆರೆಗಳ ಸಾಮಥ್ರ್ಯದ ಶೇ.50 ನೀರು ತುಂಬುವ ಯೋಜನೆಗೆ ಚಾಲನೆ ನೀಡಲಿದ್ದಾರೆ.

ಹೊಸದುರ್ಗ ತಾಲೂಕಿನ ಇಂಡಿದೇವರಹಟ್ಟಿ ಗ್ರಾಮದ ಬಳಿ ಜೂನ್ 4 ರಂದು ಮಧ್ಯಾಹ್ನ 2 ಗಂಟೆಗೆ ವಿಶ್ವೇಶ್ವರಯ್ಯ ಜಲನಿಗಮ ನಿಯಮಿತದಿಂದ ಭೂಮಿಪೂಜೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಪ್ರಮುಖ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿ ಹಸ್ತಾಂತರಿಸುವ ಆಧಾರದ ಮೇಲೆ, ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳಾದ  ಎನ್.ಸಿ.ಸಿ, ಜೈನ್ ಇರಿಗೇಷನ್ ಹಾಗೂ ಓಶಿಯನ್ ಕನ್ಸ್‍ಸ್ಟ್ರಕಷನ್ ಇಂಡಿಯಾ ಪ್ರೈವ್ಹೇಟ್ ಲಿಮಿಟೆಡ್ ಕಂಪನಿಗಳಿಗೆ ಗುತ್ತಿಗೆ ನೀಡಲಾಗಿದೆ.

ವಾಣಿ ವಿಲಾಸ ಸಾರದ ಹಿನ್ನೀರಿನಲ್ಲಿ ಬೃಹತ್ ಸೇತುವೆ ನಿರ್ಮಾಣ: ಹೊಸದುರ್ಗ ತಾಲ್ಲೂಕಿನ ವಾಣಿ ವಿಲಾಸ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ ವಿಶ್ವೇಶ್ವರಯ್ಯ ಜಲ ನಿಮಗದಿಂದ ಬೃಹತ್ ಸೇತುವೆ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ.

ಜಲಾಶಯದ ಹಿನ್ನೀರಿನ ಎಡಭಾಗದ ಮಾಡದಕೆರೆ, ಬಲಭಾಗದ ಮತ್ತೋಡು ಮತ್ತು ಶ್ರೀರಾಂಪುರ ಹೋಬಳಿ ಜನರು ಸುಗಮವಾಗಿ ಸಂಚರಿಸಲು ಅನುಕೂಲವಾಗುವಂತೆ ಬೇವಿಹಳ್ಳಿ ಗ್ರಾಮದಿಂದ ಹುಣಸೇಕಟ್ಟೆ ಗ್ರಾಮದವರೆಗೆ 4684 ಮೀಟರ್ ರಸ್ತೆ ಹಾಗೂ 1140 ಮೀ ಉದ್ದದ ಸೇತುವೆಯನ್ನು ನಿರ್ಮಿಸಲಾಗುತ್ತಿದೆ. 136 .50ಕೋಟಿ ರೂಪಾಯಿಗಳ ವೆಚ್ಚದ ಕಾಮಗಾರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಚಾಲನೆ ನೀಡುವರು.

ಕಳೆದ 100 ವರ್ಷಗಳಿಂದ ಬವಣೆಗೆ ಒಳಗಾಗಿದ್ದ, ಈ ಭಾಗದ 50 ಸಾವಿರ ಜನರ ದೈನಂದಿನ ಓಡಾಟದ ಸಮಸ್ಯೆಗೆ ಮುಕ್ತಿ ಸಿಗಲಿದೆ.

Share This Article
Leave a Comment

Leave a Reply

Your email address will not be published. Required fields are marked *