ಚಿತ್ರದುರ್ಗ: ಆತ ಒಳ್ಳೆಯ ಕೆಲಸದಲ್ಲಿದ್ದ.. ಮುದ್ದಾದ ಹೆಂಡತಿ.. ಸುಖವಾದ ಸಂಸಾರ.. ಆದರೆ ಅವರ ಬಾಳಲ್ಲಿ ಬಂದ ಮತ್ತೊಬ್ಬ ಮಹಿಳೆಯಿಂದ ಸಂಸಾರ ಒಡೆದು ಹೋಯ್ತು. ಹೆಂಡತಿಗೆ ಡಿವೋರ್ಸ್ ನೀಡಿ, ಯುವತಿಯ ಪ್ರೇಮ ಬಲೆಗೆ ಬಿದ್ದು, ಲಕ್ಷ ಲಕ್ಷ ಕಳೆದುಕೊಂಡ.. ಈಗ ಆತ್ಮಹತ್ಯೆಗೆ ಯತ್ನಿಸಿ, ಆಸ್ಪತ್ರೆಯಲ್ಲಿದ್ದಾರೆ. ಇಂಥ ಸ್ಥಿತಿಗೆ ಬಂದಿರೋದು ಚಿತ್ರದುರ್ಗ ತಾಲೂಕಿನ ಹಿರೇಗುಂಟನೂರು ಗ್ರಾಮ ಪಂಚಾಯತಿ ಸದಸ್ಯ ಮಂಜುನಾಥ್.
ಮಂಜುನಾಥ್ ಗೆ 2016ರಲ್ಲಿ ಸೌಮ್ಯ ಎಂಬ ಮಹಿಳೆಯ ಪರಿಚಯವಾಗಿತ್ತು. ಆ ಪರಿಚಯ ಪ್ರೀತಿಯ ಕಡೆಗೆ ತಿರುಗಿತ್ತು. ಆಕೆಯೂ ತನ್ನ ಗಂಡನನ್ನ ಬಿಟ್ಟು ಬಂದಳು. ಇತ್ತ ಮಂಜುನಾಥ್ ಕೂಡ ಮೋಸದ ಪ್ರೀತಿಯನ್ನು ನಂಬಿ, ಕೈಹಿಡಿದ ಹೆಂಡತಿಗೆ ಡಿವೋರ್ಸ್ ಕೊಟ್ಟು ಬಂದರು. ಕಳೆದ ನಾಲ್ಕೈದು ವರ್ಷಗಳಿಂದ ಇಬ್ಬರು ಜೊತೆಗೆ ಇದ್ದರಂತೆ. ಆದರೆ ಕಳೆದ ಮೂರ್ನಾಲ್ಕು ವರ್ಷದಿಂದ ಆಕೆಯ ನಡವಳಿಕೆಯಲ್ಲಿ ಬದಲಾವಣೆಯಾಗಿತ್ತಂತೆ. ಮೂರು ಫೋನ್ ಗಳನ್ನ ಬೇರೆ ಬಳಸುತ್ತಿದ್ದಳಂತೆ. ಅದಕ್ಕೆ ವಿರೋಧಿಸಿದಾಗ ಮಂಜುನಾಥ್ ಮೇಲೆ ಜಗಳ ಮಾಡೋದಕ್ಕೆ ಶುರು ಮಾಡಿದ್ದಾಳೆ.
ಕಳೆದ 7 ವರ್ಷಗಳಿಂದ ಬಾಡಿಗೆ ಮನೆಯಲ್ಲಿ ವಾಸವಿದ್ದಳು. ನಾಲ್ಕೈದು ವರ್ಷಗಳ ಜೊತೆ ಚೆನ್ನಾಗಿ ಇದ್ದೇವು. ಮೂರು ವರ್ಷಗಳಿಂದ ಆಕ್ಟಿವಿಟೀಸ್ ಬದಲಾವಣೆ ಆಗಿದ್ದವು. ನಾನು ಅದನ್ನು ವಿರೋಧಿಸಿದೆ. ನಾಲ್ಕೈದು ಬಾರಿ ಚಾಪೆಕಾಗದ ಬರೆಸಿಕೊಂಡಳು. ಸುಮಾರು 30 ರಿಂದ 35 ಲಕ್ಷ ಹಣ ಕಿತ್ತುಕೊಂಡಳು. ಮನೆ ಬಾಡಿಗೆ, ಅಡ್ವಾನ್ಸ್ ನಾನೇ ಕೊಟ್ಟಿನಿ. ಇದೀಗ ರಿಸೆಂಟ್ ಆಗಿ ಹೊಸ ಬಾಡಿಗೆ ಮನೆ ಮಾಡಿಕೊಂಡಿದ್ದಾಹೆ. ಬೆಂಗಳೂರಿನಲ್ಲಿ ಒಡಾಸಿದಳು. ನಂಬರ್ 14ರಂದು 4ಲಕ್ಷ 17 ಸಾವಿರ ಹಣವನ್ನು ಅವರ ಮನೆಗೆ ತಗೊಂಡು ಇಟ್ಟಿದ್ದೇನು. ನವೆಂಬರ್ 26ರಂದು ಹೊಸಪೇಟೆ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದಳು. ನವೆಂಬರ್ 24ರಂದು ನನಗೂ ನಿನಗೂ ಸಂಬಂಧ ಇಲ್ಲವೆಂದು ಒಂದು ವಿಡಿಯೋ ಮಾಡಿಸಿಕೊಡು ಎಂದಳು. ಆ ವಿಡಿಯೋ ಇಟ್ಕೊಂಡು ನಿನ್ನ ಹಣವನ್ನು ವಾಪಸ್ ಕೊಡುವುದಾಗಿ ಹೇಳಿದಳು. ಇದೀಗ ಮಂಜುನಾಥ್ ಹಣವನ್ನು ವಾಪಸ್ ಕೊಡುವಂತೆ ಕೇಳಿದಾಗ ಹಲ್ಲೆ ಪ್ರಕರಣ ದಾಖಲಿಸುವುದಾಗಿ ತಿಳಿಸಿದ್ದಾಳೆ. ಮರ್ಯಾದೆಗೆ ಅಂಜಿಕೊಂಡು ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ, ಆಸ್ಪತ್ರೆ ಸೇರಿ, ನನಗೆ ಆಕೆಯಿಂದ ಮುಕ್ತಿ ಕೊಡಿ ಅಂತಾ ಮಂಜುನಾಥ್ ಮನವಿ ಮಾಡಿದ್ದಾರೆ.
ಸುದ್ದಿಒನ್, ಹೊಸದುರ್ಗ, ಫೆಬ್ರವರಿ. 03 : ತಾಲ್ಲೂಕಿನ ಬಾಗೂರು ಸಮೀಪದ ಕುಂದೂರು ಗೊಲ್ಲರಹಟ್ಟಿಯ ಗೋವರ್ಧನಗಿರಿ ಜಗದಾಂಬ ಮಹಾಸಂಸ್ಥಾನ ಮಠದಲ್ಲಿ…
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 03 : ನಗರದ ಕೆಳಗೋಟೆ ಚಿನ್ನಪ್ಪ ಲೇಔಟ್ ನಿವಾಸಿ, ಚಿತ್ರದುರ್ಗ ಜಿಲ್ಲಾ ರೆಡ್ಡಿ ಜನ ಸಂಘದ…
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ ಫೆ. 03…
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ ಫೆ. 03…
ಚಿತ್ರದುರ್ಗ, ಸುದ್ದಿಒನ್, ಫೆ.3: ಚಿತ್ರದುರ್ಗ ಜಿಲ್ಲೆಯಲ್ಲಿ ಕಣ್ಣನ್ ಎಂದೇ ಚಿರಪಚಿತರಾಗಿರುವ ಕೆ.ಎಂ.ಮುತ್ತುಸ್ವಾಮಿ ಜನ್ಮದಿನವನ್ನು ದಿಢೀರ್ ಆಗಿ ಆಚರಿಸಿ ಸಂಭ್ರಮಿಸಿದರು. ಜಿಲ್ಲಾ…
ಗದಗ: ಕಳೆದ ಕೆಲವು ದಿನಗಳಿಂದಾನೂ ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿ ನಡುವೆ ಎಲ್ಲವೂ ಸರಿ ಇಲ್ಲ. ಒಬ್ಬರಿಗೊಬ್ಬರು ಮಾತಿನ…