ಚಿತ್ರದುರ್ಗ, (ಡಿ.14) : ಕ್ಷಯ ರೋಗವೆಂದರೆ ಭಯ ಬೇಡ ಜಾಗೃತಿ ಇರಲಿ. ಶೀಘ್ರ ಪತ್ತೆ ತ್ವರಿತ ಚಿಕಿತ್ಸೆಯಿಂದ ಕ್ಷಯ ನಾಶ ಮಾಡಬಹುದು ಎಂದು ಜಿಲ್ಲಾ ಕ್ಷಯ ರೋಗ ನಿರ್ಮೂಲನಾಧಿಕಾರಿ ಡಾ. ಸುಧಾ ತಿಳಿಸಿದರು.
ತಾಲ್ಲೂಕಿನ ಗುಡ್ಡದರಂಗವ್ವನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕ್ಷಯರೋಗ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಇಬ್ಬರು ಕ್ಷಯ ರೋಗಿಗಳನ್ನು ದತ್ತು ಪಡೆದು ಪೌಷ್ಟಿಕಾಹಾರ ಕಿಟ್ ವಿತರಣೆ ಮತ್ತು ಆರೋಗ್ಯ ಜಾಗೃತಿ ಮೂಡಿಸಿದರು. ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಯವರು ತಲಾ ಒಂದರಂತೆ 7 ಕ್ಷಯ ರೋಗಿಯನ್ನು ದತ್ತು ಪಡೆದರು.
ಎರಡು ವಾರಕ್ಕಿಂತ ಹೆಚ್ಚು ಕೆಮ್ಮು, ರಾತ್ರಿ ವೇಳೆ ಜ್ವರ, ಬೆವರುವುದು ಕಫದಲ್ಲಿ ರಕ್ತ ತೂಕ ಇಳಿಕೆ, ಹಸಿವು ಆಗದಿರುವುದು, ಕಂಡು ಬಂದಲ್ಲಿ ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ಕಫ ಪರೀಕ್ಷೆಮಾಡಿಸಿಕೊಳ್ಳಿ. ಕಫ ಪರೀಕ್ಷೆ ಮಾಡಿಸುವುದರಿಂದ ಕ್ಷಯ ಬ್ಯಾಕ್ಟೀರಿಯಾ ನಮ್ಮ ದೇಹ ಸೇರಿರುವುದು ಪತ್ತೆಯಾಗುತ್ತದೆ
ಆಗ ಕ್ಷಯ ಮಾತ್ರೆಗಳನ್ನು ತೂಕಕ್ಕೆ ಮತ್ತು ವಯಸ್ಸಿಗೆ ಅನುಗುಣವಾಗಿ ಸಂಪೂರ್ಣ ಮಾತ್ರೆಗಳನ್ನು ಸೇವಿಸುವುದರಿಂದ ಕ್ಷಯ ನಾಶ ಮಾಡಬಹುದು ಎಂದು ತಿಳಿಸಿದರು.
ಯಾವುದೇ ಕಾರಣಕ್ಕೂ ಮಧ್ಯದಲ್ಲಿ ಮಾತ್ರೆಗಳನ್ನು ಬಿಡಬಾರದು. ಈ ಕ್ಷಯ ರೋಗವು ಗಾಳಿಯಿಂದ ಹರಡುವಂತಹ ರೋಗವಾಗಿದ್ದು ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಸಾಂಕ್ರಾಮಿಕ ರೋಗವಾಗಿದ್ದು, ರೋಗನಿರೋಧಕ ಶಕ್ತಿ ಕಡಿಮೆ ಇರುವ ವ್ಯಕ್ತಿಗಳಿಗೆ ಬೇಗನೆ ಹರಡಬಹುದು.
ಹರಡದಂತೆ ರೋಗಿಯೋ ಕಫ ಪರೀಕ್ಷೆ ಮಾಡಿಸಿ ತಕ್ಷಣವೇ ಚಿಕಿತ್ಸೆ ಪಡೆಯಬೇಕು ಚಿಕಿತ್ಸೆ ಪಡೆಯುತ್ತಿರುವಾಗ ತಂಬಾಕು ಮದ್ಯಪಾನ ಗುಟ್ಕಾ ಈ ತರಹದ ವ್ಯಸನಗಳಿಂದ ದೂರವಿರಬೇಕು ಜೊತೆಯಲ್ಲಿ ಪೌಷ್ಟಿಕ ಆಹಾರ ಸೇವನೆಯಿಂದ ಆರೋಗ್ಯದಲ್ಲಿ ಹೆಚ್ಚಿನ ಚೇತರಿಕೆ ಉಂಟಾಗುತ್ತದೆ ಎಂದು ತಿಳಿಸಿದರು.
ಸಮುದಾಯದಲ್ಲಿ ಪ್ರತಿಯೊಬ್ಬರಿಗೂ ಇದರ ಬಗ್ಗೆ ಅರಿವು ಮತ್ತು ಜಾಗೃತಿ ಇರ ಬೇಕು ಎಂದು ತಿಳಿಸಿದರು ತಿಳಿಸಿದರು.
ಕೆಮ್ಮುವಾಗ, ಸೀನುವಾಗ ಕರವಸ್ತ್ರದಿಂದ ಬಾಯಿ ಮೂಗನ್ನು ಅಡ್ಡ ಹಿಡಿಯುವುದು ಎಲ್ಲಿ ಬೇಕಾದಲ್ಲಿ ಉಗಳಬಾರದು ಎಂದು ತಿಳಿಸಿದರು.
ಡಾ. ಗೀತಾಂಜಲಿ ವೈದ್ಯಾಧಿಕಾರಿಗಳು ಮಾತನಾಡುತ್ತಾ 2025 ರ ವೇಳೆಗೆ ಕ್ಷಯ ಮುಕ್ತ ಭಾರತ ಮಾಡಲು ಎಲ್ಲರೂ ಸಹಕರಿಸಬೇಕು ಎಂದು ತಿಳಿಸಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಲಾದ ಮೂಗಪ್ಪ ರವರು ಮಾತನಾಡುತ್ತ ನಮ್ಮ ಹೋರಾಟ ರೋಗಿಯ ವಿರುದ್ಧ ಅಲ್ಲಾ ರೋಗದ ವಿರುದ್ಧ ಕಫದ ಬ್ಯಾಕ್ಟೀರಿಯ ನಾಶ ಮಾಡುವಲ್ಲಿ ಎಲ್ಲರೂ ಕೈ ಜೋಡಿಸೋಣ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಜಾನಕಿ. ಬಿ. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಮಾರುತಿ ಪ್ರಸಾದ್, ಮಹೇಂದ್ರ, ಮಾರುತಿ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಪ್ರಶಾಂತ್, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳಾದ ಶಿಲ್ಪ, ದ್ರಾಕ್ಷಾಯಿಣಿ, ಮಂಜುಳಾ, ನಾಗರತ್ನಮ್ಮ. ಸಮುದಾಯ ಆರೋಗ್ಯ ಅಧಿಕಾರಿಗಳಾದ ಶಬಾನಾ, ಸಲ್ಮಾ, ಜಯಲತಾ ಔಷಧಿ ವಿತರಣಾಧಿಕಾರಿಗಳಾದ ವಿಜಯಲಕ್ಷ್ಮಿ ಶುಶ್ರೂಷಣಾಧಿಕಾರಿಗಳಾದ ಅಶ್ವಿನಿ.
ಪ್ರಯೋಗಶಾಲಾ ತಂತ್ರಜ್ಞಾಧಿಕಾರಿಗಳಾದ ಚೇತನ, ಹಾಗೂ ಆಶಾ ಕಾರ್ಯಕರ್ತರು, ಫಲಾನುಭವಿಗಳು ಇತರರು ಹಾಜರಿದ್ದರು.