in

ನಾಯಿಗಿರುವ ನಿಷ್ಠೆ ನರರಿಗಿಲ್ಲ :  ಡಾ.ಶ್ರೀ ಶಾಂತವೀರ ಮಹಾಸ್ವಾಮೀಜಿ

suddione whatsapp group join

ಬೆಂಗಳೂರು : ಕಲಿಯುಗದ ಮನುಷ್ಯನ ವರ್ತನೆ ಆಲೋಚನೆ ಅತ್ಯಂತ ಅಪಾಯಕಾರಿಯಾಗಿದೆ. ನಿಯತ್ತಿಲ್ಲದ  ನಿಯಂತ್ರಣವಿಲದ ನಿಲ್ಲುವುಗಳಿಂದ ನೀತಿ ಕೆಟ್ಟು ಕೇವಲ ಅಧಿಕಾರ ಹಣದ ಬೆನ್ನುಬಿದ್ದು ನೆಮ್ಮದಿಯಿಲ್ಲದ ಅತೃಪ್ತ ಮನುಷ್ಯನಾಗಿ ತನ್ನ ಸುತ್ತ ಮುತ್ತಲಿನ ಪರಿಸರ ಕೆಡಿಸಿ ತಾನು ಕೆಟ್ಟು ತನ್ನವರನ್ನು ದುಃಖದ ನದಿಗೆ ತಳ್ಳುತ್ತಿದ್ದಾನೆ ಎಂದು ಡಾ.ಶ್ರೀ ಶಾಂತವೀರ ಲಮಹಾಸ್ವಾಮೀಜಿ ಹೇಳಿದರು.

ನೆಲಮಂಗಲ ತಾಲ್ಲೂಕಿನ ತ್ಯಾಮಗೊಂಡ್ಲು ಗ್ರಾಮದಲ್ಲಿರುವ ಬ್ರಹ್ಮ ಚೈತನ್ಯ ಶೇಷಾವಧೂತರ ಆಶ್ರಮ ತಾತಪ್ಪನವರ ಗದ್ದುಗೆ ಮಠದಲ್ಲಿ ನಡೆದ 129ನೇ ಆರಾಧನೆ ಹಾಗೂ ಜಾತ್ರಾ ಮಹೋತ್ಸವದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಮಾತನಾಡಿದರು.

ಸಂಪತ್ತಿನಿಂದ ಸಂತೋಷ ಸಿಗುತ್ತದೆ ಆದರೆ ದಾನ ಧರ್ಮ ತ್ಯಾಗದಿಂದ ಸಂತೃಪ್ತಿ ಸಮಾಧಾನ ಪ್ರಾಪ್ತವಾಗುತ್ತದೆ ಆರಾಧನೆ ಜಾತ್ರೆಯಂತಹ ಧಾರ್ಮಿಕ ಸಮಾರಂಭಗಳ ಮೂಲಕ ಮಠಾಧೀಶರು ಶರಣ ಸಂತರು ಸಮಾದ ಸ್ವಸ್ಥ ಕಾಪಾಡುವ ಕಾಯಕವನ್ನು ನಿರಂತರವಾಗಿ ಮಾಡುತ್ತಿರುವುದರಿಂದ ಸಮಾಜದಲ್ಲಿ ಸಾಮರಸ್ಯ ಸೌಹಾರ್ದ ಮನೋಭಾವನೆಯಿಂದ ಜನರು ಬದುಕಿ ಸಂಸ್ಕಾರ ಸಂಸ್ಕೃತಿ ಪಡೆಯುತ್ತಿದ್ದಾರೆ ಆದರೆ ರಾಜರ ಕಾಲದಲ್ಲಿ ರಾಜರಿಗೆ ಮಾರ್ಗದರ್ಶನ ಪಡೆಯಲು ರಾಜಗುರುಗಳನ್ನು ಅವಲಂಬಿಸಿದ್ದರು ಇವತ್ತಿನ ರಾಜಕಾರಣಿಗಳು ಗುರುಗಳ ಮಾರ್ಗದರ್ಶನ ಪಡೆಯದಿರುವುದೆ ಸಮಾಜದಲ್ಲಿ ಗೊಂದಲ ಸಮಸ್ಯೆಗಳಿಗೆ ಕಾರಣವಾಗಿದೆ ಅಧಿಕಾರದ ದರ್ಪದ ಅಲೋಚನೆಯಿಂದ ಉತ್ತಮ ಚಿಂತನೆ ಹೊರಹೊಮ್ಮುವುದಿಲ್ಲ ಆದ್ಯಾತ್ಮೀಕ ಆದರ್ಶ ಚಿಂತನೆಯಿಂದ   ಉತ್ತಮ ಸಮಾಜ ಕಟ್ಟಲು ಸಾಧ್ಯ ಪ್ರಸ್ತುತ ಆನೇಕ ಸಮಸ್ಯೆಗಳಿಗೆ ಗುರುವಿನ ಆಶೀರ್ವಾದ ಆಶೀರ್ವಚನ ಮಾರ್ಗದರ್ಶನ ಅತ್ಯಗತ್ಯ ಎಂದರು.

ಸಮಾರಂಭದಲ್ಲಿ ಶೇಷಾವಧೂತರ ಆಶ್ರಮ ಟ್ರಸ್ಟಿನ ಪದಾಧಿಕಾರಿಗಳು ತ್ಯಾಮಗೊಂಡ್ಲು ಸುತ್ತ ಮುತ್ತಲಿನ ಗ್ರಾಮಗಳ ಭಕ್ತವೃಂದ ಭಾಗವಹಿಸಿದ್ದರು.

ಆರಾಧನಾ ಮಹೋತ್ಸವ ನಿಮಿತ್ತ ಬೆಳಿಗ್ಗೆಯಿಂದ ಭಜನೆ ಕೀರ್ತನೆ ಪ್ರಸಾದ ಅನ್ನ ಸಂತರ್ಪಣೆ  ಆಯೋಜಿಸಿದ್ದರು.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಬಿಜೆಪಿ ಆರೋಪಕ್ಕೆ ಪ್ರಿಯಾಂಕ ಗಾಂಧಿ ತಿರುಗೇಟು: 7 ವರ್ಷದಲ್ಲಿ ಬಿಜೆಪಿ ಏನು ಮಾಡಿದೆ..?

ರಸ್ತೆ ಮುಚ್ಚುವ ಬದಲು ಅಭಿವೃದ್ದಿ ಮಾಡಿ : ಬಿ.ಟಿ.ಜಗದೀಶ್