Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

RCB ಕಪ್ ಗೆಲ್ಲಲಿ ಅಂತ ಹೇಳ್ಬೇಡಿ : ಅನಿಲ್ ಕುಂಬ್ಳೆ

---Advertisement---

ಬೆಂಗಳೂರು; ಇಂದು ಗುಜರಾತ್ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ಆರ್ಸಿಬಿ ವರ್ಸಸ್ ಪಂಜಾಬ್ ಪಂದ್ಯಕ್ಕೆ ಅಖಾಡ ಸಿದ್ಧವಾಗಿದೆ. ಈ ನಡುವೆ ಆರ್ಸಿಬಿ ಅಭಿಮಾನಿಗಳು ಕಪ್ ನಮ್ದೆ ಅಂತಿದ್ದಾರೆ. ಇಷ್ಟು ವರ್ಷ ಕಾದಿದ್ದಕ್ಕೂ ಸಾರ್ಥಕ ಆಯ್ತು. ಈ ಸಲ ಎಲ್ಲಾ ಬೆಳವಣಿಗೆ ನೋಡಿದ್ರೆ ಕಪ್ ಖಂಡಿತ ನಮ್ಮದೆ ಆಗುತ್ತೆ ಎಂದೇ ನಿರೀಕ್ಷೆಯನ್ನ ಇಟ್ಟುಕೊಂಡಿದ್ದಾರೆ. ಅಷ್ಟೇ ಅಲ್ಲ ಕಪ್ ಗೆಲ್ಲಲಿ ಅಂತ ಬೆಳಗ್ಗೆಯಿಂದಾನೇ ಪೂಜೆ, ಪುನಸ್ಕಾರ, ಹೋಮ ಹವನವನ್ನ ಮಾಡಿದ್ದಾರೆ. ಇದರ ನಡುವೆ ಅನಿಲ್ ಕುಂಬ್ಳೆ ಕೂಡ ಆರ್ಸಿಬಿ ಬಗ್ಗೆ ಮಾತನಾಡಿದ್ದಾರೆ.

ನಾನು ಆರ್ಸಿಬಿನಲ್ಲೂ ಇದ್ದೆ, ಪಂಜಾಬ್ ನಲ್ಲೂ ಇದ್ದೆ. ಸಂತೋಷದ ಸುದ್ದಿ ಏನು ಅಂದ್ರೆ ಐಪಿಎಲ್ ವಿನ್ನರ್ ಇಬ್ಬರಲ್ಲಿ ಒಬ್ಬರಾಗ್ತಾರೆ. ಆದ್ರೆ ಆರ್ಸಿಬಿನೇ ವಿನ್ನರ್ ಆಗ್ಲಿ ಅಂತ ನನ್ನ ಆಸೆ. ಇವತ್ತು ಗೆಲ್ಲಲಿ ಅಂತ ಬಯಸುತ್ತೇನೆ. ಮನಸ್ಸಲ್ಲಿ ಅದೇ ಇದೆ. ಈಗಲೇ ಕಪ್ ನಮ್ದು ಅಂತ ಹೇಳ್ಬೇಡಿ. ಅದಾದ ಮೇಲೆ ಹೇಳೋಣಾ. ಇಬ್ಬರು ಚೆನ್ನಾಗಿ ಆಡ್ತಾ ಇದ್ದಾರೆ. ಎರಡು ಟೀಂ ಯಾವ್ದು ಬೆಸ್ಟ್ ಟೀಂ ಇದೆಯೋ ಅವರು ಫೈನಲ್ ಬಂದಿದ್ದಾರೆ. ಕಪ್ ಗೆಲ್ಲಲಿ ಎಂದೇ ಹಾರೈಸೋಣಾ ಎಂದಿದ್ದಾರೆ.

ಎಲ್ಲರಿಗೂ ಈ ಬಾರಿ ಆರ್ಸಿಬಿಯೇ ಕಪ್ ಗೆಲ್ಲಲಿ ಎಂದು ಹಾರೈಸುತ್ತಿದ್ದಾರೆ. ನಮ್ಮ ಆರ್ಸಿಬಿ ಟೀಂ ಕೂಡ ಸಿದ್ಧವಾಗಿದ್ದು, ಕಪ್ ಗೆಲ್ಲುವ ಎಲ್ಲಾ ಲಕ್ಷಣವು ಕಾಣಿಸ್ತಾ ಇದೆ. ಇನ್ನೇನು ಕೆಲವೇ ಹೊತ್ತಲ್ಲಿ ಆರ್ಸಿಬಿ ವರ್ಸಸ್ ಪಂಜಾಬ್ ಮ್ಯಾಚ್ ಶುರುವಾಗಲಿದೆ. ಎಲ್ಲರೂ ಟಿವಿ ಮುಂದೆ ಹಾಜರಾಗಿ ಎಂಜಾಯ್ ಮಾಡಲಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment