ಮಂಡ್ಯ: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ 14ನೇ ದಿನಕ್ಕೆ ಕಾಲಿಟ್ಟಿದೆ. ಉಕ್ರೇನ್ ಪರಿಸ್ಥಿತಿ ತೀರಾ ಕೆಟ್ಟ ಪರಿಸ್ಥಿತಿಯಲ್ಲಿದೆ. ತೈಲ ಘಟಕವನ್ನು ಸ್ಪೋಟಿಸಿದೆ. ಅಕ್ಷರಶಃ ಯುದ್ಧ ಭೂಮಿ ಸ್ಮಶಾನದಂತಾಗಿದೆ. ಅದೆಷ್ಟೋ ಮಕ್ಕಳು ಅನಾಥರಾಗಿದ್ದಾರೆ.

ವೈದ್ಯಕೀಯ ವಿದ್ಯಾಭ್ಯಾಸಕ್ಕೆಂದು ಉಕ್ರೇನ್ ಗೆ ತೆರಳಿದ್ದ ಭಾರತೀಯ ವಿದ್ಯಾರ್ಥಿಗಳಲ್ಲೂ ಆತಂಕವಿದೆ. ಸಾಧ್ಯವಾದಷ್ಟು ಶ್ರಮವಹಿಸಿ, ಭಾರತ ಸರ್ಕಾರ ವಿದ್ಯಾರ್ಥಿಗಳನ್ನ ಭಾರತಕ್ಕೆ ಕರೆ ತರುತ್ತಿದೆ. ಈ ಮಧ್ಯೆ ಹಲವರು ಭಾರತ ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ, ವ್ಯಂಗ್ಯವಾಡಿದ್ದಾರೆ, ಟ್ರೋಲ್ ಮಾಡಿದ್ದಾರೆ.

ಇದೀಗ ಇದೇ ವಿಚಾರವಾಗಿ ಸಂಸದೆ ಸುಮಲತಾ ಕೇಂದ್ರದ ಪರ ಬ್ಯಾಟ್ ಬೀಸಿದ್ದಾರೆ. ಮಂಡ್ಯದ ನಗರದಲ್ಲಿ ಮಾತನಾಡಿದ ಅವರು, ಅಲ್ಲಿನ ಪರಿಸ್ಥಿತಿ ಅರ್ಥ ಮಾಡಿಕೊಂಡು ಮಾತನಾಡಬೇಕು. ವಿದೇಶಾಂಗ ಕಾರ್ಯವೈಖರಿಯ ಬಗ್ಗೆ ಗೊತ್ತಿದೆ. ಪ್ರತಿ ವಿಷಯವನ್ನು ರಾಜಕೀಯ ಮಾಡಬಾರದು ಎಂದಿದ್ದಾರೆ.


