in ,

2ನೇ ಡೋಸ್ ಯಾವಾಗ ಬರಬೇಕೆಂದು ಕೇಳಿದಾಗಲೇ ಆತನಿಗೆ ತಿಳಿದಿದ್ದು ಕೋವಿಡ್ ಲಸಿಕೆ ಅಲ್ಲ ಅದು ರೇಬಿಸ್ ಅಂತ..!

suddione whatsapp group join

ಮುಂಬೈ: ಸಾಕಷ್ಟು ಘಟನೆಗಳು ವರದಿಯಾಗುತ್ತಿವೆ. ಎಷ್ಟೋ ಕಡೆ ಕೊರೊನಾ ಲಸಿಕೆ ಬದಲಿಗೆ ಬೇರೆ ಇನ್ಯಾವುದೋ ಲಸಿಕೆ ಹಾಕಿದ್ದು. ಇದೀಗ ಮತ್ತೊಮ್ಮೆ ವೈದ್ಯಕೀಯ ಸಿಬ್ಬಂದಿಗಳ ನಿರ್ಲಕ್ಷ್ಯ ಕಂಡು ಬಂದಿದ್ದು, ಕೋವಿಡ್ ಲಸಿಕೆ ಬದಲಿಗೆ ರೇಬಿಸ್ ಲಸಿಕೆ ಹಾಕಿ ಕಳುಹಿಸಿದ್ದಾರೆ.

ಮಹಾರಾಷ್ಟ್ರದ ಥಾಣೆಯಲ್ಲಿ ಈ ಘಟನೆ ನಡೆದಿದ್ದು, ಲಸಿಕೆ ವಿಚಾರದಲ್ಲಿ ಯಡವಟ್ಟು ಮಾಡಿದ ಇಬ್ಬರನ್ನು ಆಡಳಿತ ಮಂಡಳಿ ವಜಾ ಮಾಡಿದೆ. ವ್ಯಕ್ತಿಯೊಬ್ಬ ರೇಬೀಸ್ ಲಸಿಕೆ ಹಾಕಿಸಿಕೊಂಡು ಕಂಗಾಲಾಗಿದ್ದಾನೆ.

ಆಸ್ಪತ್ರೆಗೆ ಬಂದ ವ್ಯಕ್ತಿ ರೇಬಿಸ್ ಲಸಿಕೆ ಹಾಕುವ ಕ್ಯೂನಲ್ಲಿ ನಿಂತಿದ್ದಾನೆ. ಅದು ಆತನಿಗೂ ತಿಳಿದಿಲ್ಲ. ಲಸಿಕೆ ಹಾಕುವ ಸಿಬ್ಬಂದಿ ಕೇಳುವ ಅಥವಾ ಹೇಳುವ ಧರ್ಮವದು. ಆದ್ರೆ ಬಂದವರಿಗೆ ಚುಚ್ಚಿದ್ರೆ ಸಾಕು ಅನ್ನೋ ಮನಸ್ಥಿತಿ ಇದ್ದಾಗ ಹೀಗೆಲ್ಲಾ ಆಗುತ್ತೆ. ಆತನಿಗೆ ರೇಬಿಸ್ ಲಸಿಕೆಯನ್ನೇ ಹಾಕಿದ್ದಾರೆ.

ಆ ಬಳಿಕ ಆ ವ್ಯಕ್ತಿ ಎರಡನೇ ಡೋಸ್ ಗೆ ಯಾವಾಗ ಬರಬೇಕು ಎಂದು ಕೇಳಿದ್ದಾನೆ. ಆಗಲೂ ಸಿಬ್ಬಂದಿ ನಿರ್ಲಕ್ಷ್ಯದ ಉತ್ತರವನ್ನೇ ಕೊಟ್ಟಿದ್ದಾರೆ. ಆ ವ್ಯಕ್ತಿಗೆ ರೇಬಿಸ್ ಹಾಕಿರೋದು ಅಂತ ಹೇಳಿದ್ದಾರೆ. ಲಸಿಕೆ ಹಾಕಿಸಿಕೊಂಡ ರಾಜ್ ಕುಮಾರ್ ಎಂಬಾತ ಆಸ್ಪತ್ರೆ ಆಡಳಿತ ಮಂಡಳಿಗೆ ದೂರು ನೀಡಿದ್ದಾನೆ. ಬಳಿಮ ಇಂಜೆಕ್ಷನ್ ಕೊಟ್ಟ ಸಿಬ್ಬಂದಿಯನ್ನ ಅಮಾನತು ಮಾಡಿದ್ದಾರೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಬಿಜೆಪಿಯವರು ತಾಲಿಬಾನಿಗಳಾಗಿದ್ದರೆ, ಸಿದ್ದರಾಮಯ್ಯ ಕಾರಿನಲ್ಲಿ ಓಡಾಡ್ತಾ ಇದ್ರಾ..? : ಸದಾನಂದಗೌಡ ಪ್ರಶ್ನೆ

ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಸಜ್ಜಾಗಿ; ಮಂಜುನಾಥ್ ಕರೆ