ಬೆಂಗಳೂರು: ಬಿಜೆಪಿಯಲ್ಲಿ ಯಾರೂ ಊಹಿಸಲಾರದಂತ ನಡೆ ಶುರುವಾಗಿದೆ. ಹೈಕಮಾಂಡ್ ನಿಂದ ಟಿಕೆಟ್ ಹಂಚಿಕೆ ಸ್ಟಾಟರ್ಜಿ ಉಪಯೋಗಿಸಿದ್ದಾರೆ. ಹೊಸ ಮುಖಗಳ ಪರಿಚಯ ಮಾಡಿಕೊಡಲು ಹೊರಟಿದ್ದಾರೆ. ಹೀಗಾಗಿ ಹಳೆ ತಲೆಗಳೆಲ್ಲಾ ರಾಜೀನಾಮೆ ನೀಡಲು ಸಾಲುಗಟ್ಟಿ ನಿಂತಿದ್ದಾರೆ.
ಬಿಜೆಪಿಯಿಂದ ಇನ್ನು 12 ಕ್ಷೇತ್ರಗಳ ಪಟ್ಟಿ ಬಿಡುಗಡೆಯಾಗಬೇಕಿದೆ. ಈಗಾಗಲೇ ಮೊದಲ ಪಟ್ಟಿಯಲ್ಲಿ 189 ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಲಾಗಿದೆ. ಎರಡನೇ ಪಟ್ಟಿಯಲ್ಲಿ 23 ಅಭ್ಯರ್ಥಿಗಳ ಘೋಷಣೆ ಮಾಡಲಾಗಿದೆ. ಇನ್ನುಳಿ ಹನ್ನೆರಡು ಕ್ಷೇತ್ರಗಳತ್ತ ಎಲ್ಲರ ಚಿತ್ತ ನೆಟ್ಟಿದೆ.
ಮೂಲಗಳ ಪ್ರಕಾರ ಈ ಬಾರಿ ಗೋವಿಂದರಾಜನಗರಕ್ಕೆ ಮಾಜಿ ಮೇಯರ್ ಶಾಂತಕುಮಾರಿಗೆ ಟಿಕೆಟ್ ನೀಡುವ ನಿರೀಕ್ಷೆ ಇದೆ. ವಿ ಸೋಮಣ್ಣ ಅವರು ಗೋವಿಂದರಾಜನಗರದ ಆಕಾಂಕ್ಷಿಯಾಗಿದ್ದರು. ಆದರೆ ಅವರಿಗೆ ವರುಣಾ ಹಾಗೂ ಚಾಮರಾಜನಗರ ಕ್ಷೇತ್ರದ ಟಿಕೆಟ್ ನೀಡಲಾಗಿದ್ದು, ಗೋವಿಂದರಾಜನಗರ ಬೇರೆಯವರಿಗೆ ನೀಡಲಿದ್ದಾರೆ. ಮಹಾದೇವಪುರದಲ್ಲಿ ಅರವಿಂದ ಲಿಂಬಾವಳಿ ಬದಲಿಗೆ ಹೊಸ ಮುಖಕ್ಕೆ ಮಣೆ ಹಾಕಲಿದ್ದಾರೆ. ನಾಗಠಾಣಾದಲ್ಲಿ ಗೋಪಾಲ ಕಾರಜೋಳ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ. ಕೊಪ್ಪಳದಲ್ಲಿ ಸಿ ವಿ ಚಂದ್ರಶೇಖರ ಹಾಗೂ ಸಂಸದ ಸಂಗಣ್ಣ ಕರಡಿ ಅವರ ನಡುವೆ ಫೈಟ್ ಇರುವ ಕಾರಣ ಬಿಜೆಪಿ ಯೋಚಿಸುತ್ತಿದೆ.





GIPHY App Key not set. Please check settings