ಮಾಗಿದ ಪಪ್ಪಾಯ ತಿನ್ನುವುದರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತಾ..?

ಸಾಮಾನ್ಯವಾಗಿ ಸೀಸನ್ ನಲ್ಲಿ ಸಿಗುವ ಹಣ್ಣುಗಳನ್ನು ತಿಂದರೆ ದೇಹಕ್ಕೆ ತುಂಬಾ ಒಳ್ಳೆಯದು. ಪಪ್ಪಾಯ ಅಂತು ಎಲ್ಲಾ ಕಾಲಕ್ಕೂ ಸಿಗುತ್ತದೆ. ಹಲವರು ಪಪ್ಪಾಯ ಅಂದ್ರೆ ಮಾರು ದೂರ ಓಡುತ್ತಾರೆ. ಕೆಲವೊಂದಿಷ್ಟು ಮಂದಿ ಉಷ್ಣ ಅಂತ ತಿನ್ನೋದೆ ಇಲ್ಲ. ಆದರೆ ಈ ಪಪ್ಪಾಯ ತಿನ್ನೋದ್ರಿಂದ ಏನೆಲ್ಲಾ ಲಾಭವಿದೆ ಗೊತ್ತಾ. ಅದರಲ್ಲೂ ಮಾಗಿದ ಪಪ್ಪಾಯ ಹಲವು ಕಾಯಿಲೆಗಳಿಗೆ ರಾಮಬಾಣದಂತೆ. ಹಾಗಾದ್ರೆ ಮಾಗಿದ ಪಪ್ಪಾಯದಿಂದ ಏನೆಲ್ಲಾ ಲಾಭ ಇದೆ ಅನ್ನೋದನ್ನ ನೋಡೋಣಾ.

* ಸಾಕಷ್ಟು ಜನ ಜೀರ್ಣಶಕ್ತಿ ಸಮಸ್ಯೆಯಿಂದ ಬಳಲುತ್ತಾ ಇರುತ್ತಾರೆ. ಅಂಥವರು ಖಾಲಿ ಹೊಟ್ಟೆಯಲ್ಲಿ ಮಾಗಿದ ಪಪ್ಪಾಯ ತಿನ್ನುವುದರಿಂದ ಜೀರ್ಣಕ್ರಿಯೆಗೆ ಮುಕ್ತಿ‌ಸಿಗಲಿದೆ. ಪಪ್ಪಾಯದಲ್ಲಿ ಹೆಚ್ವಿನ ಪ್ರಮಾಣದಲ್ಲಿ ಫೈಬರ್ ಅಂಶ ಅಡಗಿದೆ. ಇದರಿಂದ ಬರೀ ಜೀರ್ಣಶಕ್ತಿ ಮಾತ್ರವಲ್ಲ ಮಲಬದ್ದತೆಯ ಸಮಸ್ಯೆಗೂ ಪರಿಹಾರ ಸಿಗಲಿದೆ. ಕರುಳಿನ ಸಮಸ್ಯೆ ಇದ್ದರು ಬಗೆಹರಿಯಲಿದೆ.

* ಮನುಷ್ಯನಿಗೆ ಬಹಳ ಮುಖ್ಯವಾಗಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿದ್ದರೆ ಯಾವುದೇ ಕಾಯಿಲೆಗಳು ಕುಗ್ಗಿಸುವುದಿಲ್ಲ. ಮಾಗಿದ ಪಪ್ಪಾಯದಲ್ಲಿ ವಿಟಮಿನ್ ಸಿ ಅತ್ಯುತ್ತಮವಾಗಿದೆ. ಇದು ರೊಇಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ವಿಟಮಿನ್ ಸಿ ಹೆಚ್ಚಾದಷ್ಟು ಜ್ವರ, ಕೆಮ್ಮು, ನೆಗಡಿಯಂತಹ ರೋಗದ ವಿರುದ್ಧ ಹೋರಾಡುವ ಶಕ್ಯಿ ಸಿಗಲಿದೆ.

* ಮಾಗಿದ ಪಪ್ಪಾಯ ತಿನ್ನುವುದರಿಂದ ಹೃದಯದ ಆರೋಗ್ಯಕ್ಕೂ ಉತ್ತಮವಾಗಿದೆ. ಈ ಹಣ್ಣಿನಲ್ಲಿ ಪೊಟ್ಯಾಸಿಯಮ್ ಸಮೃದ್ಧವಾಗಿದೆ, ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ಹೃದಯದ ಕಾರ್ಯವನ್ನು ನಿರ್ವಹಿಸಲು ಸಹಾಯ ಮಾಡುವ ಪ್ರಮುಖ ಖನಿಜವಾಗಿದೆ.

* ಚರ್ಮದ ಕಾಂತಿಯನ್ನು ಪಪ್ಪಾಯ ಹೆಚ್ವಿಸುತ್ತದೆ. ವಿಟಮಿನ್ ಸಿ, ವಿಟಮಿನ್ ಎ ಈ ಪಪ್ಪಾಯದಲ್ಲಿದೆ. ಇವೆಲ್ಲಾ ಸೌಂದರ್ಯವನ್ನು ಹೆಚ್ಚಿಸುವ ಗುಣವನ್ನು ಹೊಂದಿದೆ. ಹೀಗಾಗಿ ಪಪ್ಪಾಯವನ್ನು ಸೇವಿಸುವುದರಿಂದ ಸೌಂದರ್ಯವೂ ಹೆಚ್ಚಾಗಲಿದೆ. ನಮ್ಮ ಆರೋಗ್ಯಕ್ಕೆ ಇಷ್ಟೆಲ್ಲಾ ಪ್ರಯೋಜನವಿರುವ ಪಪ್ಪಾಯವನ್ನು ಪ್ರತಿದಿನ ಸೇವಿಸಿ.

suddionenews

Recent Posts

ದೇಶದ ಮೊದಲ ಹಿಂದೂ ಗ್ರಾಮಕ್ಕೆ ಶಂಕುಸ್ಥಾಪನೆ : ಈ ಗ್ರಾಮದ ವಿಶೇಷತೆ ಏನು ಗೊತ್ತಾ ?

  ಸುದ್ದಿಒನ್ ಮಧ್ಯಪ್ರದೇಶದ ಛತ್ತರ್‌ಪುರದಲ್ಲಿರುವ ಬಾಗೇಶ್ವರ ಧಾಮ ಪೀಠದ ಮುಖ್ಯಸ್ಥ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರು ಏಪ್ರಿಲ್ 2 ರಂದು…

2 hours ago

ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅಣ್ಣಾಮಲೈ ರಾಜೀನಾಮೆ ; ಕಾರಣವೇನು..?

ಅಣ್ಣಾಮಲೈ ಅಂದ್ರೆನೇ ಅದೆಷ್ಟೋ ಜನ ಗಢಗಢ ಅಂತ ನಡುಗುತ್ತಾ ಇದ್ದರು. ಕರ್ನಾಟಕದ ರಿಯಲ್ ಸಿಂಗಂ ಆಗಿ ಘರ್ಜಿಸಿದ್ದರು. ಆದರೆ ಬಿಜೆಪಿಗೆ…

3 hours ago

ಚಿನ್ನ – ಬೆಳ್ಳಿ ಬೆಲೆ ಭಾರತದಲ್ಲಿ ಮಾತ್ರವಲ್ಲ ಜಾಗತಿಕ ಮಟ್ಟದಲ್ಲಿ ಇಳಿಕೆ ; ಕಾರಣವೇನು..? ಅಕ್ಷಯ ತೃತೀಯ ತನಕವೂ ಇಳಿಯಲಿದೆಯಾ..?

  ಚಿನ್ನ ಬೆಳ್ಳಿ ದರ ಏರಿಕೆಯತ್ತಲೇ ಸಾಗುತ್ತಿತ್ತು. ಇಂದು ಮಹಿಳೆಯರ ಚಿನ್ನದ ಕನಸಿಗೆ ಬೇಸರವನ್ನೇ ತಂದಿತ್ತು. ಇದೀಗ ದಿಢೀರನೇ ಚಿನ್ನ…

5 hours ago

ಸೃಜನಶೀಲ ಯುವ ಬರಹಗಾರರಿಗೆ ಆರ್ಥಿಕ ನೆರವು ನೀಡಿ : ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳೆಗೆರೆ, ಚಳ್ಳಕೆರೆ, ಮೊ : 84314 13188 ಸುದ್ದಿಒನ್, ಚಳ್ಳಕೆರೆ, ಏಪ್ರಿಲ್. 04…

5 hours ago

ಚಿತ್ರದುರ್ಗ : ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರ ವಿರೋಧಿಸಿ ಮುಸ್ಲಿಂರ ಮೌನ ಪ್ರತಿಭಟನೆ

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 04 : ಸಂಸತ್ತಿನ ಉಭಯ ಸದನಗಳಲ್ಲಿ ವಕ್ಫ್ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿರುವುದನ್ನು ವಿರೋಧಿಸಿ ಇಲ್ಲಿನ ದರ್ಜಿ…

6 hours ago

ಬೇಸಿಗೆಯ ನಡುವೆ ಮಳೆಯ ಅಬ್ಬರ; ಇನ್ನು ಎಷ್ಟು ದಿನ ಮುಂದುವರೆಯಲಿದೆ..!

ಬೇಸಿಗೆ ಇನ್ನು ಮುಗಿದಿಲ್ಲ. ಆದರೆ ಆಗಲೇ ಮಳೆ ಶುರುವಾಗಿದೆ. ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ತಣ್ಣನೆಯ ಗಾಳಿ ಬೀಸಿದಂತಾಗಿದೆ. ಇನ್ನು ಮಳೆರಾಯ…

7 hours ago