ಅಬ್ಬಬ್ಬಾ.. ಜಗ್ಗೇಶ್ ಕಿರುತೆರೆಯಲ್ಲಿ ತೆಗೆದುಕೊಳ್ಳುವ ಸಂಭಾವನೆ ಎಷ್ಟು ಕೋಟಿ ಗೊತ್ತಾ ..!

1 Min Read

 

ನವರಸ ನಾಯಕ ಜಗ್ಗೇಶ್ ಅಭಿನಯದ ತೋತಾಪುರಿ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ತೆರೆಮೇಲೆ ರಾರಾಜಿಸಲಿದೆ. ಇಂದು ಮಾಧ್ಯಮದವರ ಮುಂದೆ ಬಂದ ತಂಡ, ಸಿನಿಮಾ ಬಗೆಗಿನ ಒಂದಷ್ಟು ಮಾಹಿತಿಗಳನ್ನು ಹಂಚಿಕೊಂಡಿದೆ. ಅದು ಜೊತೆಗೆ ಒಂದಷ್ಟು ಕುತೂಹಲಕಾರಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ನಟ ಜಗ್ಗೇಶ್ ಸಿನಿಮಾದಲ್ಲಿ ಮಿಂಚಿದವರು. ಅಲ್ಲಿ ಒಳ್ಳೆ ಸಂಭಾವನೆ ಇದ್ದೆ ಇರುತ್ತದೆ. ಆದರೆ ಇತ್ತಿಚೆಗೆ ಕಿರುತೆರಯಲ್ಲೂ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಸಿನಿಮಾದಲ್ಲಿ ಅಷ್ಟು ದೊಡ್ಡ ಸ್ಟಾರ್, ಕಿರುತೆರೆಗೆ ಬಂದರೆ ಸಂಭಾವನೆ ಹೇಗಿರುತ್ತೆ ಎಂಬ ಕುತೂಹಲ ಸಾಮಾನ್ಯವಾಗಿ ಎಲ್ಲರಿಗೂ ಇದ್ದೆ ಇರುತ್ತೆ. ಅದಕ್ಕೆ ಬ್ರೇಕ್ ಹಾಕಿರುವ ಜಗ್ಗೇಶ್ ಸಂಭಾವನೆಯ ಗುಟ್ಟನ್ನು ರಟ್ಟು ಮಾಡಿದ್ದಾರೆ.

ನನಗೆ ಸಿನಿಮಾದಲ್ಲಿ ಎರಡು ಕೋಟಿ ಸಂಭಾವನೆ ಸಿಗುತ್ತೆ. ಆದರೆ ಕಿರುತೆರೆಯಲ್ಲಿ ಮೂರು ಕೋಟಿ ಬರುತ್ತೆ. ಬದುಕುವುದಕ್ಕೆ ಸಾಕಲ್ಲವೇ ಎಂದಿದ್ದಾರೆ. ನನಗಿರೋದು ಒಬ್ಬರೆ ಹೆಂಡ್ತಿ, ಎರಡು ಮಕ್ಕಳು. ನನ್ನ ಮಕ್ಕಳು ನನ್ನ ಹೆಸರನ್ನು ಎಲ್ಲಿಯೂ ಬಳಸಿಕೊಳ್ಳುವುದಿಲ್ಲ. ನಾನೂ ಕೂಡ ಯಾರ ತಂಟೆಗೂ ಹೋಗುವುದಿಲ್ಲ. ಹಾಗಾಗಿ ನಮ್ಮದು ಸುಖಿ ಕುಟುಂಬ. ದೇವರನ್ನು ನಂಬಿಕೊಂಡು ಬದುಕಿದ್ದೇನೆ. ನಮಗೆಲ್ಲ ಭಗವಂತ ಆನಂದದ ಜೀವನ ಕೊಟ್ಟಿದ್ದಾನೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *