ಎಲ್ಲರಿಗೂ ಗೊತ್ತಿರುವಂತೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಶಾಲೆಗಳನ್ನ ನಡೆಸುತ್ತಿದ್ದಾರೆ. ಆ ಶಾಲೆಯನ್ನ ಅವರ ಮಗಳು ಐಶ್ವರ್ಯಾ ಅವರು ಮುನ್ನಡೆಸುತ್ತಿದ್ದಾರೆ. ಐಶ್ಚರ್ಯಾ ಅವರು ಆಗಾಗ ಶಾಲೆಯ ವಿಡಿಯೋಗಳನ್ನ ಹಂಚಿಕೊಳ್ಳುತ್ತಾ ಇರುತ್ತಾರೆ. ಅದನ್ನ ನೋಡಿದರೇನೆ, ಶಾಲೆ ಎಷ್ಟು ರಿಚ್ ಆಗಿದೆ ಅನ್ನೋದು ಗೊತ್ತಾಗುತ್ತೆ. ಅಷ್ಟು ದೊಡ್ಡ ಶಾಲೆಯಲ್ಲಿ ಶುಲ್ಕ ಎಷ್ಟಿರಬಹುದು ಎಂಬ ಕುತೂಹಲವೂ ಇರುತ್ತೆ. ಸಾಮಾನ್ಯ ಜನರು ಆ ಶಾಲೆಯಲ್ಲಿ ಮಕ್ಕಳನ್ನ ಸೇರಿಸಬಹುದಾ ಎಂಬ ಪ್ರಶ್ನೆಯೂ ಕಾಡುತ್ತದೆ. ಡಿಕೆ ಶಿವಕುಮಾರ್ ಅವರ ಶಾಲೆಯಲ್ಲಿ ಫೀಸ್ ಎಷ್ಟಿದೆ ಎಂಬ ಮಾಹಿತಿಯನ್ನ ಇದೀಗ ನೀಡಿದ್ದಾರೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಶೆಟ್ಟಿಹಳ್ಳಿಯಲ್ಲಿ ಶಾಲಾ ಕಾರ್ಯಕ್ರಮ ಒಂದರಲ್ಲಿ ಇಂದು ಭಾಗವಹಿಸಿದ್ದರು. ಈ ವೇಳೆ ತಮ್ಮ ಶಾಲೆಯ ಶುಲ್ಕದ ಬಗ್ಗೆಯೂ ಮಾತಾಡಿದ್ದಾರೆ. ನಾನು ಸಹ ಬೆಂಗಳೂರಿನಲ್ಲಿ ಸ್ಕೂಲ್ ನಡೆಸುತ್ತಿದ್ದೇನೆ. ಅಲ್ಲೂ ಸಹ ಸಿಬಿಎಸ್ ಸಿಲಬಸ್ ಇದೆ. ಶಿಕ್ಷಣ ಸಂಸ್ಥೆಯಲ್ಲಿ ನನಗೆ 25 ವರ್ಷದ ಅನುಭವವಿದೆ. ನನಗೆ ಈಗ ಸಮಯ ಇಲ್ಲ ಅಂತ ಮಕ್ಕಳಿಗೆ ಜವಾಬ್ದಾರಿಯನ್ನ ವಹಿಸಿದ್ದೇನೆ.
ಎಲ್ಲರಿಗೂ ಕ್ವಾಲಿಟಿ ಎಜುಕೇಷನ್ ಕೊಡಬೇಕು. ನನ್ನ ಖಾಸಗಿ ಶಾಲೆಯಲ್ಲಿ ಸಿಬಿಎಸ್ ಸಿಲಬಸ್ ಗೆ ಒಂದು ಲಕ್ಷದ ಐವತ್ತು ಸಾವಿರ ಶುಲ್ಕವನ್ನ ನಿಗದಿ ಮಾಡಲಾಗಿದೆ. ಅದೇ ಮಂಡ್ಯದಲ್ಲಿ 40 ಸಾವಿರ ಇದೆ. ಗ್ರಾಮೀಣ ಭಾಗಕ್ಕೆ ನಾನೊಂದು ಸ್ಕೀಮ್ ಯೋಚನೆ ಮಾಡಿದ್ದೇನೆ. ಗ್ರಾಮೀಣ ಪ್ರದೇಶದಲ್ಲಿ ಎರಡು ಸಾವಿರ ಶಾಲೆಗಳು ಅಂದರೆ ಎರಡರಿಂದ ಮೂರು ಪಂಚಾಯ್ತಿ ವ್ಯಾಪ್ತಿಯಲ್ಲಿ ಇದೇ ಮಾದರಿಯ ಸ್ಕೂಲ್ ಗಳನ್ನ ನಿರ್ಮಾಣ ಮಾಡುವುದಾಗಿ ಹೇಳಿದ್ದಾರೆ.
ಸುದ್ದಿಒನ್, ಹಿರಿಯೂರು, ಮಾರ್ಚ್. 14 : ತಾಲ್ಲೂಕಿನ ಜವಗೊಂಡನಹಳ್ಳಿ ಬಳಿ ನಡೆದ ರಸ್ತೆ ಅಪಘಾತದಲ್ಲಿ ಉಪ ಸಭಾಪತಿ ರುದ್ರಪ್ಪ ಲಮಾಣಿಯವರು…
ಸುದ್ದಿಒನ್, ಜಗಳೂರು, ಮಾರ್ಚ್. 14 : ಶ್ರೀ ಶರಣ ಬಸವೇಶ್ವರ ದಾಸೋಹ ಮಠ, ದೊಣ್ಣೆಹಳ್ಳಿ, ಸರ್ಕಾರಿ ದಂತ ಕಾಲೇಜು…
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮಾರ್ಚ್.…
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮಾರ್ಚ್.…
ಚಿತ್ರದುರ್ಗ. ಮಾ.14: ಚಳ್ಳಕೆರೆ ತಾಲ್ಲೂಕು ನಾಯಕನಹಟ್ಟಿ ಶ್ರೀ ಗುರುತಿಪ್ಪೇರುದ್ರಸ್ವಾಮಿ ಜಾತ್ರೆಯ ದೊಡ್ಡ ರಥೋತ್ಸವ ಇದೇ ಮಾರ್ಚ್ 16 ರಂದು ಭಾನುವಾರ…
ಸುದ್ದಿಒನ್, ಚಿತ್ರದುರ್ಗ,ಮಾರ್ಚ್. 14: ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಡಲೆ, ಶೇಂಗಾ, ಸೂರ್ಯಕಾಂತಿ, ಮೆಕ್ಕೆಜೋಳ ಸೇರಿದಂತೆ ಇತರೆ ಉತ್ಪನ್ನಗಳ (ಸರಕು)…