ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸದ್ಯಕ್ಕೆ ಮಾರ್ಟಿನ್ ಹಾಗೂ ಕೆಡಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಫ್ಯಾಮಿಲಿ ಜೊತೆಗೂ ಉತ್ತಮ ಸಮಯ ಕಳೆಯುತ್ತಾರೆ. ಧ್ರುವ ಸರ್ಜಾ ಹಾಗೂ ಪ್ರೇರಣಾ ದಂಪತಿಗೆ ಮುದ್ದಾದ ಮಗಳಿದ್ದು, ಆ ಪುಟ್ಟ ರಾಜಕುಮಾರಿಯ ದರ್ಶಕ್ಕಾಗಿಯೇ ಎಲ್ಲರೂ ಕಾಯುತ್ತಿದ್ದಾರೆ.
ಆದ್ರೆ ಇತ್ತಿಚೆಗೆ ಧ್ರುವ ಸರ್ಜಾ ಮಗಳ ಒಂದಷ್ಟು ಫೋಟೋಗಳನ್ನು ಹಂಚಿಕೊಂಡಿದ್ದರು. ಅದು ದೂರದಿಂದ ಮುಖ ತೋರಿಸಿದ ಫೋಟೋವಾಗಿತ್ತು. ಆಕ್ಷನ್ ಪ್ರಿನ್ಸ್ ನ ಮಗಳು ಹೇಗಿದ್ದಾಳೆ ಎಂಬ ಕುತೂಹಲ ಅಭಿಮಾನಿಗಳು ಸೇರಿದಂತೆ ಎಲ್ಲರಲ್ಲೂ ಸಹಜವಾಗಿಯೇ ಇತ್ತು. ಇವತ್ತು ಆ ಕುತೂಹಲಕ್ಕೆ ಬ್ರೇಕ್ ಬಿದ್ದಿದೆ.
ಧ್ರುವ ಸರ್ಜಾ ಸದ್ಯಕ್ಕೆ ತನ್ನ ಮಗಳ ಫೋಟೋಗಳನ್ನು ರಿವಿಲ್ ಮಾಡಿದ್ದಾರೆ. ಪ್ರೇರಣಾ ಜೊತೆಗಿರುವ, ತನ್ನ ಜೊತೆಗಿರುವ ಫೋಟೋಗಳ ಜೊತೆಗೆ ಹೊಸದಾಗಿ ಮಗಳಿಗಾಗಿಯೇ ಫೋಟೋಶೂಟ್ ಮಾಡಿಸಿರುವ ಫೋಟೋಗಳನ್ನು ಹಾಕಲಾಗಿದೆ. ರವಿಚಂದ್ರನ್ ಅವರ ದಯಮಾಡಿಮುಗಿಲಾಚೆ ಸ್ವಲ್ಪ ನೋಡಿ ಎಲ್ಲರು ಹಾಡಿಗೆ ಬ್ಯೂಟಿಫುಲ್ ಎನಿಸುವ ಫೋಟೋಗಳನ್ನು ಹಾಕಿ ಎಡಿಟ್ ಮಾಡಲಾಗಿದೆ. ಈ ವಿಡಿಯೋ ನೋಡಿದ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಸರ್ಜಾ ಕುಟುಂಬದ ಪುಟ್ಟ ರಾಜಕುಮಾರಿ ಎಂದೇ ಕೊಂಡಾಡುತ್ತಿದ್ದಾರೆ.
ಬೆಂಗಳೂರು: ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ಹೆಚ್ಚಾಗಿದೆ. ಇದರಿಂದ ಅದೆಷ್ಟೋ ಜನ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಸಾಲ ಕೊಟ್ಟ…
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 07 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೇಂಗಾ, ಕಡಲೆ, ಮೆಕ್ಕೆಜೋಳ ಸೇರಿದಂತೆ ಇತರೆ…
ಬೆಂಗಳೂರು: ನಟ ಡಾಲಿ ಧನಂಜಯ್ ಮದುವೆ ಸಂಭ್ರಮದಲ್ಲಿದ್ದಾರೆ. ಚಿತ್ರದುರ್ಗದ ಅಳಿಯ ಬೇರೆ ಆಗ್ತಾ ಇದ್ದಾರೆ. ಧನ್ಯತಾ ಮೂಲತಃ ಚಿತ್ರದುರ್ಗದವರು. ಆದರೆ…
ಬೆಂಗಳೂರು: ಇಂದು ಹೈಕೋರ್ಟ್ ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದು ಸಿಎಂ ಸಿದ್ದರಾಮಯ್ಯ ಅವರಿಗೆ ಬಿಗ್ ರಿಲೀಫ್ ನೀಡಿದೆ. ಈ…
ಈ ರಾಶಿಯವರಿಗೆ ಒಳ್ಳೆಯ ಉದ್ಯೋಗ ಅವಕಾಶಗಳು ಒದಗಿ ಬರಲಿವೆ, ಈ ರಾಶಿಯವರಿಗೆ ಉತ್ತಮ ಸಂಗಾತಿ ಸಿಗುವರು, ಶುಕ್ರವಾರದ ರಾಶಿ ಭವಿಷ್ಯ…
144 ವರ್ಷಗಳಿಗೊಮ್ಮೆ ಬರುವ ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದರೆ ಕರ್ಮ ಕಳೆಯುತ್ತದೆ ಎಂದು ನಂಬಲಾಗಿದೆ. ಹೀಗಾಗಿ ಕೋಟ್ಯಾಂತರ ಮಂದಿ…