ಇಂದು ಡಿಕೆಶಿ ದೆಲ್ಲಿಗೆ : ಸಿಎಂ ಮಾತಿಗೆ ಸೈಲೆಂಟ್ ಆಯ್ತಾ ಹೈಕಮಾಂಡ್..?

1 Min Read

ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ನಡೆಯುತ್ತಿರುವ ಕುರ್ಚಿ ಕದನ ಈಗ ಮತ್ತೊಂದು ಹಂತವನ್ನು ತಲುಪಿದೆ. ಅದು ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಯ ಬಳಿಕ. ಕಾಂಗ್ರೆಸ್ ಪಕ್ಷವನ್ನು ಎಲ್ಲರೂ ಸೇರಿ ಕಟ್ಟಿರೋದು. ನಾನು ಕಟ್ಟಿದ್ದೀನಿ ನಾನು ಕಟ್ಟಿದ್ದೀನಿ ಅಂತ ಅಲ್ಲ ಎಂಬ ಮಾತನ್ನ ಹೇಳಿದ್ದರು. ಈ ಮಾತಿನಿಂದ ಡಿಕೆ ಶಿವಕುಮಾರ್ ಆಸೆಗೆ ತಣ್ಣೀರು ಎರಚಿದಂತೆ ಆಗಿದೆ.

ಇದರ ಬೆನ್ನಲ್ಲೇ ಇಂದು ಡಿಕೆ ಶಿವಕುಮಾರ್ ದೆಹಲಿಗೆ ಹೊರಟಿದ್ದಾರೆ. ಹೈಕಮಾಂಡ್ ಅಂಗಳದಲ್ಲಿಯೇ ಕುರ್ಚಿ ಫೈಟ್ ಇತ್ಯರ್ಥವಾಗಲಿ ಎಂಬ ನಿರ್ಧಾರಕ್ಕೆ ಸಿಎಂ ಬಂದಿದ್ದಾರೆ. ಅದರಲ್ಲೂ ಸಿಎಂ ಸಿದ್ದರಾಮಯ್ಯ ಅವರು ಕೂಡ ಹೈಕಮಾಂಡ್ ತಮ್ಮ ಪರವಾಗಿಯೇ ಇದ್ದಾರೆ ಎಂಬ ಖುಷಿಯಲ್ಲಿರುವಂತೆ ಕಾಣಿಸುತ್ತಿದೆ. ಸಿದ್ದರಾಮಯ್ಯ ಅವರಾಗಲಿ, ಯತೀಂದ್ರ ಅವರಾಗಲಿ ನೀಡುತ್ತಿರುವ ಹೇಳಿಕೆಯಿಂದಾನೇ ಇದೆಲ್ಲಾ ಗೊತ್ತಾಗ್ತಾ ಇದೆ. ಹೀಗಾಗಿಯೇ ಹೈಕಮಾಂಡ್ ಹೇಳಿದ್ದೇ ಫೈನಲ್ ಅಂತಿರೋದ್ಯಾಕೆ ಎಂಬ ಪ್ರಶ್ನೆಗಳು ಸಹ ಮೂಡಿವೆ.

ಸಿದ್ದರಾಮಯ್ಯ ಅವರ ಗೇಮ್ ಪ್ಲ್ಯಾನ್ ಏನು ಎಂಬುದೇ ಎಲ್ಲರ ಪ್ರಶ್ನೆ. ಶಾಸಕರ ಬೆಂಬಲ, ಕ್ಲೀನ್ ಹ್ಯಾಂಡ್, ಅಹಿಂದ ನಾಯಕ ಎಂಬ ಶಕ್ತಿಯನ್ನೇ ಅಸ್ತ್ರವನ್ನಾ ಬಳಸಲು ಹೊರಟಿದ್ದಾರಾ ಸಿದ್ದರಾಮಯ್ಯ ಅವರು ಎಂಬ ಪ್ರಶ್ನೆಯೂ ಮೂಡುತ್ತಿದೆ. ಸಕಾರಣವಿಲ್ಲದ ಬದಲಾವಣೆಗೆ ಕೈ ಹಾಕಿದರೆ ಪಕ್ಷ ಹಾಗೂ ಸರ್ಕಾರದ ಮೇಲೆ ಪರಿಣಾಮ ಬೀರಲಿದೆ. ಭವಿಷ್ಯದಲ್ಲಿ ಪಕ್ಷಕ್ಕೆ ದೊಡ್ಡ ಡ್ಯಾಮೇಜ್ ಆಗಲಿದೆ. ಹೆಚ್ಚು ಶಾಸಕರ ಬೆಂಬಲ ನನ್ನ ಪರವಾಗಿದೆ. ಶಾಸಕರ ಅಭಿಪ್ರಾಯ ಮೀರಿ ನಿರ್ಧಾರ ಮಾಡಿದರೆ ಅದು ಪಕ್ಷಕ್ಕೆ ಸಮಸ್ಯೆಯಾಗಲಿದೆ. ಶಾಸಕರ ಅಭಿಪ್ರಾಯದಂತೆಯೇ ನಿರ್ಧಾರವಾಗಲಿ. ಅದಕ್ಕೆ ನನ್ನ ಒಪ್ಪಿಗೆಯೂ ಇದೆ ಎಂದು ಸಿದ್ದರಾಮಯ್ಯ ಅವರು ಹೈಕಮಾಂಡ್ ಮುಂದೆ ದಾಳ ಉರುಳಿಸಿದ್ದಾರೆ ಎನ್ನಲಾಗಿದೆ.

Share This Article