
ಬೆಂಗಳೂರು: ಸಿಡಿ ವಿಚಾರದಲ್ಲಿ ಡಿಕೆ ಶಿವಕುಮಾರ್ ಅವರ ಕೈವಾಡವಿದೆ. ಅದಕ್ಕೆ ಸಂಬಂಧಿಸಿದ ಸಾಕ್ಷ್ಯಾಧಾರಗಳೆಲ್ಲಾ ನನ್ನ ಜೊತೆಗೆ ಇದೆ ಎಂದು ಸುದ್ದಿಗೋಷ್ಠಿ ನಡೆಸಿ ರಮೇಶ್ ಜಾರಕಿಹೊಳಿ ಹರಿಹಾಯ್ದಿದ್ದರು. ಸುದ್ದಿಗೋಷ್ಠಿ ಬಳಿಕ ಡಿಕೆ ಶಿವಕುಮಾರ್ ಈ ಬಗ್ಗೆ ಏನು ಮಾತನಾಡಿರಲಿಲ್ಲ. ಆದರೆ ಇದೀಗ ಮೌನ ಮುರಿದಿದ್ದು, ಅವರಲ್ಲಿ ಏನೇನು ಆಸನಗಳಿವೆ, ಪಟ್ಟುಗಳಿವೆ ಎಂದು ತೋರಿಸಿಲಿ ಎಂದಿದ್ದಾರೆ.

ಮೊದಲು ಮಂತ್ರಿಯಾಗಿದ್ದರು. ಬಳಿಕ ರಾಜೀರಾಮೆ ನೀಡಿದ್ದರು. ಅದರಿಂದ ಈಗ ಹತಾಶೆಗೆ ಒಳಗಾಗಿದ್ದಾರೆ. ಮಾನಸಿಕವಾಗಿ ಅವರ ಆರೋಗ್ಯ ಸುಧಾರಣೆಯಾಗಿಲ್ಲ. ಅವರ ಮಾತುಗಳನ್ನು ಕೇಳಿದ್ರೆ ಅಯ್ಯೋ ಎನಿಸುತ್ತದೆ. ನಾನೇನನ್ನು ಕಮೆಂಟ್ ಮಾಡುವುದಿಲ್ಲ.
ಯಾರು..? ಯಾವ ತನಿಖೆಯನ್ನಾದರೂ ನಡೆಸಲಿ. ನಮ್ಮದೇನಿದ್ದರು ರಣರಂಗ. ಚುನಾವಣೆಯಲ್ಲಿ ಎದುರಿಸುತ್ತೇನೆ. ಇನ್ನು ವಿದೇಶದಲ್ಲಿ ಮನೆ, ಫ್ಲ್ಯಾಟ್ ಇರುವ ಬಗ್ಗೆ, ಅದರಲ್ಲಿ ಹತ್ತರಷ್ಟಾದರೂ ಬರಲಿ. ನಾನು ಖುಷಿ ಪಡುತ್ತೇನೆ ಎಂದಿದ್ದಾರೆ.
GIPHY App Key not set. Please check settings