ನವದೆಹಲಿ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸದ್ಯ ದೆಹಲಿ ತಲುಪಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಈ ಬಾರಿ ಅಧಿಕಾರದ ಗದ್ದುಗೆ ಏರಲಿದೆ. ಈ ಹಿನ್ನೆಲೆ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವೆ ಸಿಎಂ ಹುದ್ದೆಯ ಫೈಟ್ ಶುರಿವಾಗಿರುವ ಕಾರಣ ಇಬ್ಬರನ್ನು ಮನವೊಲಿಸಿ, ಒಬ್ಬರಿಗೆ ಸಿಎಂ ಹುದ್ದೆ ಕೊಡುವುದು, ಹೈಕಮಾಂಡ್ ಗೆ ದೊಡ್ಡ ತಲೆನೋವಾಗಿದೆ.

ಹೀಗಾಗಿ ದೆಹಲಿಗೆ ಕರೆಸಿ ಮಾತನಾಡುವ ಪ್ರಯತ್ನ ಮಾಡಲಾಗಿದೆ. ಡಿಕೆ ಶಿವಕುಮಾರ್ ಈ ಮುಂಚೆ ದೆಹಲಿಗೆ ಹೋಗಿರಲಿಲ್ಲ. ಆದರೆ ಇಂದು ದೆಹಲಿಗೆ ತಲುಪಿದ್ದಾರೆ. ದೆಹಲಿ ತಲುಪಿರುವ ಡಿಕೆ ಶಿವಕುಮಾರ್, ನೇರವಾಗಿ ರಾಹುಲ್ ಗಾಂಧಿ ಭೇಟಿ ಕೇಳಿದ್ದಾರೆ. ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿ, ನಂತರದಲ್ಲಿ ತೀರ್ಮಾನ ಕೈಗೊಳ್ಳಲಿದ್ದಾರೆ.

ಸೋನಿಯಾ ಗಾಂಧಿ ಅವರ ಭೇಟಿ ಡಿಕೆ ಶಿವಕುಮಾರ್ ಅವರಿಗೆ ಕಷ್ಟ ಸಾಧ್ಯವಾಗಿದೆ. ಯಾಕಂದ್ರೆ 20ರ ತನಕ ಸೋನಿಯಾ ಗಾಂಧಿ ಅವರು ದೆಹಲಿಗೆ ಬರುವುದಿಲ್ಲ. ಹೀಗಾಗಿ ಅವರ ಭೇಟಿಯೂ ಕಷ್ಟ ಸಾಧ್ಯ. ಸಿಎಂ ಹುದ್ದೆಯ ಜಂಜಾಟ ಸದ್ಯಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೆಗಲಿನ ಮೇಲೆ ಇದೆ.


