Connect with us

Hi, what are you looking for?

ಪ್ರಮುಖ ಸುದ್ದಿ

ದಿವ್ಯಾ ಸುರೇಶ್ ನಿಂದ ನಿನಗೆ ಏನು ಉಪಯೋಗವಾಗುತ್ತಿಲ್ಲ : ಲ್ಯಾಗ್ ಮಂಜುಗೆ ರಾಜೀವ್ ಕಿವಿ ಮಾತು….!

ಬಿಗ್ ಬಾಸ್ ಮನೆಯಲ್ಲಿ ದಿವ್ಯಾ ಸುರೇಶ್ ಹಾಗೂ ಲ್ಯಾಗ್ ಮಂಜು ಆರಂಭ ದಿನದಿಂದ ಹೆಚ್ಚು ಕ್ಲೋಸ್ ಆಗಿರುವ ವಿಚಾರ ಮನೆ ಮಂದಿಗೆಲ್ಲಾ ಗೊತ್ತೇ ಇದೆ. ಫ್ರೆಂಡ್ಸ್ ಅಂತಿದ್ದವರು ಮೈಕ್ ಬದಲಾಯಿಸಿಕೊಂಡು ಮದುವೆ ಅಂತೆಲ್ಲಾ ತಮಾಷೆ ಮಾಡಿಕೊಂಡು ಓಡಾಡುತ್ತಿರುವ ಜೋಡಿ ಇದು. ಒಳ್ಳೆ ಸ್ನೇಹಿತರಾಗಿದ್ರೂ ಕೆಲವೊಂದು ವಿಚಾರಕ್ಕಾಗಿ ಮಂಜು ಹಾಗೂ ದಿವ್ಯಾ ಸುರೇಶ್ ನಡುವೆ ಸಾಕಷ್ಟು ಭಾರೀ ಜಗಳ ನಡೆದಿವೆ. ಆ ಬಳಿಕ ಇವರಿಬ್ಬರು ಒಂದಾಗಿಯೇ ಇದ್ದಾರೆ. ಆದ್ರೆ ಮೊನ್ನೆ ದಿವ್ಯಾ ಸುರೇಶ್ ಮಂಜುಗೆ ನೇರವಾಗಿಯೇ ದ್ರೋಹ ಬಗೆದಿದ್ದಾರೆ. ದಿವ್ಯಾ ಆ ರೀತಿ ಮಾಡಿದ್ದು ಸರಿಯಲ್ಲ ಎಂದು ರಾಜೀವ್ ಮಂಜುಗೆ ಕಿವಿ ಮಾತು ಹೇಳಿದ್ದಾರೆ.

ಕಳೆದ ವಾರ ನಡೆದ ಹಾಸ್ಟೆಲ್ ಟಾಸ್ಕ್ ನಲ್ಲಿ ಹುಡುಗರು ಕೊಟ್ಟ ಪ್ರೇಮ ಪತ್ರಗಳನ್ನು ಹುಡುಗಿಯರಿಗೆ ಸೇಫ್ ಆಗಿ ಕಾಪಾಡಿಕೊಳ್ಳಬೇಕು. ಆ ಪತ್ರಗಳನ್ನು ಹಾಸ್ಟೆಲ್ ವಾರ್ಡನ್ ಆದ ಪ್ರಶಾಂತ್ ಹಾಗೂ ನಿಧಿ ಹುಡುವ ಕೆಲಸ ಮಾಡಬೇಕು. ಆದ್ರೆ ನಿಧಿ ಸುಬ್ಬಯ ದಿವ್ಯಾ ಸುರೇಶ್ ಅವರೊಂದಿಗೆ ಗೇಮ್ ಪ್ಲ್ಯಾನ್ ಮಾಡಿಕೊಂಡಿದ್ದರು. ಬೇರೆಯವರ ಪತ್ರಗಳು ಎಲ್ಲಿವೆ ಎಂದು ಹೇಳಿದರೆ ನಿನ್ನ ಪತ್ರ ಮುಟ್ಟುವುದಿಲ್ಲವೆಂದು ಹೇಳಿದ್ದರು. ನಿಧಿ ಹೇಳಿದ್ದ ಆ ಪ್ಲ್ಯಾನ್ ನ್ನು ದಿವ್ಯಾ ಸುರೇಶ್ ಮಂಜು ಬಳಿ ಚರ್ಚೆ ನಡೆಸಿ ಒಪ್ಪಿಗೆ ಪಡೆದುಕೊಂಡಿದ್ದರು. ಈ ಒಪ್ಪಂದ ಮನೆಯವರ ಮುಂದೆ ಬಯಲಾಗುತ್ತಿದ್ದು, ಮಂಜು, ದಿವ್ಯಾ ಸುರೇಶ್ ಹಾಗೂ ನಿಧಿ ಸುಬ್ಬಯ್ಯ ಮೇಲೆ ಉಳಿದ ಸದಸ್ಯರು ಕೋಪ ಮಾಡಿಕೊಂಡಿದ್ದರು.

ನಿನ್ನೆ ಈ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. ತಾವು ಮಾಡಿದ ತಪ್ಪನ್ನು ಒಪ್ಪಿಕೊಂಡು ಮಂಜು ಮನೆಯವರ ಮುಂದೆ ಕ್ಷಮೆ ಕೇಳಿದ್ದಾರೆ. ಆ ಬಳಿಕ ರಾಜೀವ್ ಮಂಜುಗೆ ಒಂದಷ್ಟು ಸಲಹೆ ನೀಡಿದ್ದಾರೆ. ನಿನ್ನೆ ಗಾರ್ಡನ್ ಏರಿಯಾದಲ್ಲಿ ರಾಜೀವ್ ಹಾಗೂ ಮಂಜು ಕುಳಿತುಕೊಂಡಿದ್ದರು. ಈ ವೇಳೆ ರಾಜೀವ್, ಇಷ್ಟರಲ್ಲಿ ಒಂದಂತೂ ನಿಜ ಮಂಜ, ದಿವ್ಯಾ ಸುರೇಶ್ ನಿಂದ ನಿನಗೆ ಏನೂ ಉಪಯೋಗವಾಗುತ್ತಿಲ್ಲ. ನನಗೇನು ತಂದಿಕ್ಕಬೇಕು ಅಂತಾ ಇಲ್ಲ. ಹೇಳಬೇಕು ಆಟದ ವಿಷ್ಯ ಹೇಳುತ್ತೇನೆ. ಆ ಹುಡ್ಗಿ ಮೇಲೆ ನನಗೆ ಬೇರೆ ರೀತಿ ಕೆಟ್ಟ ಭಾವನೆ ಇಲ್ಲ ಎಂದಿದ್ದಾರೆ. ಅದಕ್ಕೆ ಮಂಜು , ಹಂಡ್ರೆಡ್ ಪರ್ಸೆಂಟ್ ನಿಜ ಅಣ್ಣ. ಇಲ್ಲಿ ಭಾವನೆ, ಫ್ರೆಂಡ್ ಶಿಪ್ ಹೊರಗಡೆ ಎಂದಿದ್ದಾರೆ.

ಬಳಿಕ ರಾಜೀವ್, ನಿಜವಾಗಲೂ ದಿವ್ಯಾ ಸುರೇಶ್ ಆ ರೀತಿ ಇದ್ದಿದ್ದರೆ, ನನಗೆ ಬಂದಿರುವ ಡಿಸಿಷನ್ ಆಡುತ್ತಿದ್ದೇನೆ ಅಂತಾ ಹೇಳಬಹುದಿತ್ತು. ನಿನ್ನ ಹೆಸರು ಬಂದಾಗ ನಿನ್ನ ಹತ್ರ ಡಿಸ್ಕಷನ್ ಮಾಡಿದ್ದೇನೆ ಎಂದು ಹೇಳಿದ್ದೇ ತಪ್ಪು ಎಂದಿದ್ದಾರೆ. ಆಗ ಶುಭಾ ಪೂಂಜಾ ಎಂಟ್ರಿಯಾಗುತ್ತಾರೆ. ನಂತರ ಮಂಜು, ನಾನು ಎಲ್ಲರ ಮುಂದೆ ಹೇಳುವುದು ದೊಡ್ಡ ವಿಚಾರವಾಗಿರಲಿಲ್ಲ. ಹೇಳೋದಿಕ್ಕಿಂತ ಮುಂಚೆ ಇಲ್ಲಿ ನಾನು ಅವಳೊಂದಿಗೆ ಚರ್ಚೆ ಮಾಡಿದ್ದು ದೊಡ್ಡ ತಪ್ಪು. ನೀನು ಅವತ್ತು ಬಂದು ಮಾತಾಡಿಸಿ ಏನಾಯ್ತು ನಮ್ಮ ಜೊತೆ ಸೇರುತ್ತಿಲ್ಲ ಎಂದು ಕೇಳಿದ್ಯಾಲ್ಲ ಅವತ್ತು ನಡೆದ ಘಟನೆ ಎಂದು ಶುಭಾ ಪೂಂಜಾಗೆ ಮಂಜು ಹೇಳಿದ್ದಾರೆ.

ಆಗ ಶುಭಾ, ನಾವು ಅದನ್ನೇ ಮಾತಾಡಿಕೊಂಡಿದ್ದು. ಮೇ ಬೀ ನೀನು ಅವತ್ತು ಬೇಡ ಅಂದಿದ್ದರೆ ಎಂದು ಶುಭಾ ಹೇಳುತ್ತಿದ್ದಂತೆ ಮಂಜು, ನಾನು ಮುಂಚೆ ನ್ಯಾಯವಾಗಿ ಆಡಿದ್ದೇನೆ. ನಿಧಿ ಹೀಗೆ ಕೇಳುತ್ತಾಳೆ ಏನು ಮಾಡಲಿ ಎಂದಾಗ ನಾನು ಸರಿ ಅಲ್ಲ ಅನಿಸುತ್ತಿದೆ ಎಂದೆ. ಆದ್ರೆ ದಿವ್ಯಾ ಸುರೇಶ್ ಅದು ಇದು ಅಂದಾಗ ನಾನು ಇನ್ಲ್ಯೂಯನ್ಸ್ ಆಗಿದ್ದುಂಟು. ಆ ಕ್ಷಣಕ್ಕೆ ಹೌದು ಮಾಡು ಅಂದು ಹೇಳಿದಷ್ಟೇ. ಅದರಲ್ಲಿ ನನ್ನದು ಅಪಾರ ಕೊಡುಗೆ ಏನು ಇಲ್ಲ ಎಂದಿದ್ದಾರೆ.

Click to comment

Leave a Reply

Your email address will not be published. Required fields are marked *

You May Also Like

ಪ್ರಮುಖ ಸುದ್ದಿ

ಕೊಡಗು: ಸದ್ಯ ಲಾಕ್ಡೌನ್ ನಿಂದಾಗಿ ಅದೆಷ್ಟೋ ಜನ ತುತ್ತು ಅನ್ನಕ್ಕೂ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇಂಥವರ ಸಹಾಯಕ್ಕಾಗಿ ಅದೆಷ್ಟೋ ಜನ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಈ ಮಧ್ಯೆ ಅಲ್ಲೊಬ್ಬ ಯುವಕ ತನ್ನ...

ಪ್ರಮುಖ ಸುದ್ದಿ

ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ರಿಲೀಸ್ ಮಾಡಿದ್ದು, ಕಳೆದ 24 ಗಂಟರಯಲ್ಲಿ ರಾಜ್ಯದಲ್ಲಿ 5041ಹೊಸ ಪ್ರಕರಣ ಪತ್ತೆಯಾಗಿದ್ದಾರೆ. ಕೊರೊನಾ ಕಂಟ್ರೊಲ್ ಗೆ ಮಾಡಿದ್ದ ಲಾಕ್ಡೌನ್ ವರ್ಕ್ಔಟ್ ಆಗಿದೆ. 48428 ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್,...

ಪ್ರಮುಖ ಸುದ್ದಿ

ಬೆಂಗಳೂರು : ಸಂಚಾರಿ ವಿಜಯ್ ಅವರು ನಟನೆಯಲ್ಲಿ ಅದ್ಭುತ ನಟ ಅನ್ನೋದು ಎಲ್ಲರಿಗೂ ಗೊತ್ತು. ತನ್ನ ನಟನೆಯಿಂದಲೇ ಎಲ್ಲರ ಗಮನ ಸೆಳೆದ ನಟ. ತಾನೊಬ್ಬ ನಟ ಎಂಬ ಹಮ್ಮಿಗಿಂತ ತಾನೊಬ್ಬ ಕಲಾವಿದ ಎಂಬಂತೆ...

ಪ್ರಮುಖ ಸುದ್ದಿ

ಸುದ್ದಿಒನ್, ಬೆಂಗಳೂರು, (ಜೂ.15) : ದ್ವಿತೀಯ ಪಿಯು ಪುನರಾವರ್ತಿತ ವಿದ್ಯಾರ್ಥಿಗಳನ್ನು ತೇರ್ಗಡೆಗೊಳಿಸುವ ಕುರಿತು ಪರಿಶೀಲಿಸಿ ನಿರ್ಧಾರ ತಿಳಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ. ಪರೀಕ್ಷೆ ನಡೆಸದೆ ದ್ವಿತೀಯ ಪಿಯು ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸುವ ರಾಜ್ಯ...

ಪ್ರಮುಖ ಸುದ್ದಿ

ಬೆಂಗಳೂರು: ಮೊದಲ ಹಂತದ ಅನ್ಲಾಕ್ ಶುರುವಾಗಿದ್ದು, ಬಿಬಿಎಂಪಿ ಆಟೋ ಚಾಲಕರಿಗೆ ಹೊಸ ರೂಲ್ಸ್ ತಂದಿದೆ. ಈ ರೂಲ್ಸ್ ಪ್ರಕಾರ ಆಟೋ ಡ್ರೈವರ್ ಗಳು ವ್ಯಾಕ್ಸಿನ್ ಹಾಕಿಸಿಕೊಳ್ಳದೆ ಇದ್ರೆ ಆಟೋ ಚಾಲನೆ ಮಾಡುವ ಹಾಗಿಲ್ಲ...

ಪ್ರಮುಖ ಸುದ್ದಿ

ಚಿಕ್ಕಮಗಳೂರು: ಬೈಕ್ ಅಪಘಾತದಿಂದ ತೀವ್ರ ಗಾಯಗೊಂಡಿದ್ದ ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ನಿನ್ನೆ ನಿಧನರಾಗಿದ್ದರು. ಇಂದು ರವಿಂದ್ರ ಕಲಾಕ್ಷೇತ್ರದಲ್ಲಿ ಅವರ ಅಂತಿಮ ದರ್ಶನಕ್ಕೂ ವ್ಯವಸ್ಥೆ ಮಾಡಲಾಗಿತ್ತು. ಇಂಡಸ್ಟ್ರಿಯಲ್ಲಿ ಎಲ್ಲರೊಟ್ಟಿಗೂ ಬೆರೆಯುತ್ತಿದ್ದ ನಟ....

ಪ್ರಮುಖ ಸುದ್ದಿ

ಇತರರು ತನಗೆ ಸ್ವಲ್ಪ ಕಷ್ಟ ಕೊಟ್ಟರೂ ಕ್ಷಮಾ ಗುಣವು ದೀರ್ಘಾಯಸ್ಸನ್ನು ಕೊಡುತ್ತದೆ. ಇದು ಹೇಗೆ ಸಾಧ್ಯ ಎಂದು ಅಂದುಕೊಳ್ಳುತ್ತಿರುವಿರಾ? ಈ ಮಾತಿಗೆ ಕೆಲವರು ವಿರೋಧವನ್ನು ವ್ಯಕ್ತಪಡಿಸುವವರೂ ಇರುವರು. ಯಾಕೆಂದರೆ ಅಂಥವರ ಪ್ರಕಾರವಾಗಿ ಇತರರ...

ದಿನ ಭವಿಷ್ಯ

ಮಂಗಳವಾರ ರಾಶಿ ಭವಿಷ್ಯ-ಜೂನ್-15,2021 ಮಿಥುನ ಸಂಕ್ರಾಂತಿ ಸೂರ್ಯೋದಯ: 05:52 AM, ಸೂರ್ಯಸ್ತ: 06:45 PM ಸ್ವಸ್ತಿ ಶ್ರೀ ಮನೃಪ ಶಾಲಿವಾಹನ ಶಕೆ1943, ಸಂವತ್2077, ಪ್ಲವ ನಾಮ ಸಂವತ್ಸರ ಜ್ಯೇಷ್ಠ ಮಾಸ,ಉತ್ತರಾಯಣ, ವಸಂತ ಋತು,...

ಪ್ರಮುಖ ಸುದ್ದಿ

ಬೆಂಗಳೂರು: ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ರಿಲೀಸ್ ಮಾಡಿದ್ದು, ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 6835 ಹೊಸ ಪ್ರಕರಣ ಪತ್ತೆಯಾಗಿದೆ. 31828 ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್, 117914 RTPCR ಟೆಸ್ಟ್ ಸೇರಿದಂತೆ ಒಟ್ಟು,...

error: Content is protected !!