ಅಕ್ಟೋಬರ್ 17 ರಂದು ಜಿಲ್ಲಾ ಮಟ್ಟದ ಷೆಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ

suddionenews
2 Min Read

ಸುದ್ದಿಒನ್, ಚಿತ್ರದುರ್ಗ, (ಅ.16) : ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕ ಪತ್ರ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ ಚಿತ್ರದುರ್ಗ ಇವರ ಸಂಯುಕ್ತಾಶ್ರಯದಲ್ಲಿ ಚಿತ್ರದುರ್ಗ ಜಿಲ್ಲಾ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಷೆಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಗಳು ಒನಕೆ ಓಬವ್ವ ಓಳಾಂಗಣ ಕ್ರೀಡಾಂಗಣದಲ್ಲಿ ಅಕ್ಟೋದಬರ್ 17 ರಂದು ಬೆಳಿಗ್ಗೆ: 8.30 ಕ್ಕೆ ನಡೆಯಲಿವೆ.

ಪಂದ್ಯಾವಳಿಗಳ ಮತ್ತು ಬಹುಮಾನದ ವಿವರ ಈ ಕೆಳಗಿನಂತಿದೆ.

ಪುರುಷರ ಸಿಂಗಲ್ಸ್ ಮತ್ತು ಡಬಲ್ಸ್ , ಮಹಿಳೆಯರ ಸಿಂಗಲ್ಸ್ ಮತ್ತು ಡಬಲ್ಸ್
-:ಬಹುಮಾನ:-

ಪುರುಷರು ಸಿಂಗಲ್ಸ್
ಪ್ರಥಮ ಸ್ಥಾನ          : ರೂ.2000/- (ನಗದು ಮತ್ತು ಪಾರಿತೋಷಕ)
ದ್ವಿತೀಯ ಸ್ಥಾನ         : ರೂ.1000/- (ನಗದು ಮತ್ತು ಪಾರಿತೋಷಕ)
ಸೆಮಿಪೈನಲ್ ಸೋತವರಿಗೆ : ರೂ.500/-   (ನಗದು & ಪಾರಿತೋಷಕ)

ಪುರುಷರು ಡಬಲ್ಸ್
ಪ್ರಥಮ ಸ್ಥಾನ         : ರೂ.4000/- (ನಗದು ಮತ್ತು ಪಾರಿತೋಷಕ)
ದ್ವಿತೀಯ ಸ್ಥಾನ        : ರೂ.2000/- (ನಗದು ಮತ್ತು ಪಾರಿತೋಷಕ)
ಸೆಮಿಪೈನಲ್ ಸೋತವರಿಗೆ : ರೂ.500/- (ನಗದು ಮತ್ತು ಪಾರಿತೋಷಕ)

ಮಹಿಳೆಯರು ಸಿಂಗಲ್ಸ್
ಪ್ರಥಮ ಸ್ಥಾನ   : ರೂ.1500/- (ನಗದು ಮತ್ತು ಪಾರಿತೋಷಕ)
ದ್ವಿತೀಯ ಸ್ಥಾನ  : ರೂ.1000/-(ನಗದು ಮತ್ತು ಪಾರಿತೋಷಕ)
ಸೆಮಿಪೈನಲ್ ಸೋತವರಿಗೆ : ರೂ.500/- (ನಗದು & ಪಾರಿತೋಷಕ)
ಮಹಿಳೆಯರು ಡಬಲ್ಸ್
ಪ್ರಥಮ ಸ್ಥಾನ   : ರೂ.2000/- (ನಗದು ಮತ್ತು ಪಾರಿತೋಷಕ)
ದ್ವಿತೀಯ ಸ್ಥಾನ  : ರೂ.1000/- (ನಗದು ಮತ್ತು ಪಾರಿತೋಷಕ)
ಸೆಮಿಪೈನಲ್ ಸೋತವರಿಗೆ : ರೂ.500/- (ನಗದು ಮತ್ತು ಪಾರಿತೋಷಕ)

-:ಪ್ರವೇಶ ಶುಲ್ಕ:
ಪುರುಷರ ಸಿಂಗಲ್ಸ್ : ರೂ.200/-
ಡಬಲ್ಸ್ ರೂ:400/-

ಮಹಿಳೆಯರ ಸಿಂಗಲ್ಸ್ : ರೂ.100/-
ಡಬಲ್ಸ್  : ರೂ.200/-

ಪಂದ್ಯಾವಳಿಯಲ್ಲಿ ಸಂಗ್ರಹವಾಗುವ ಪ್ರವೇಶ ಶುಲ್ಕವನ್ನು ಸರ್ಕಾರಿ ನೌಕರರ ಸಮುದಾಯ ಭವನದ ನಿರ್ಮಾಣಕ್ಕೆ ದೇಣಿಗೆ ನೀಡಲಾಗುವುದು.

ಷರತ್ತುಗಳು:
1. 350 ಷೆಟಲ್ ಕಾಕ್ ನಲ್ಲಿ ಪಂದ್ಯಗಳನ್ನು ನಡೆಸಲಾಗುವುದು.
2. ಕೆ.ಜಿ.ಐ.ಡಿ ಸಂಖ್ಯೆ ಇರುವಂತಹ ರಾಜ್ಯ ಸರ್ಕಾರಿ ನೌಕರರಿಗೆ ಈ ಪಂದ್ಯಾವಳಿಯಲ್ಲಿ ಭಾಗವಹಿಸಲು ಅವಕಾಶ ಇರುತ್ತದೆ.
3. ಪಂದ್ಯಗಳು ನಕೌಟ್ ಮಾದರಿಯಲ್ಲಿ ನಡೆಯುತ್ತವೆ.
4. ಪಂದ್ಯಾವಳಿಯಲ್ಲಿ ಸಮವಸ್ತ್ರ ಮತ್ತು ಶೂ ಕಡ್ಡಾಯ.
5. ನೌಕರರು ಗುರುತಿನ ಚೀಟಿಯನ್ನು ಕಡ್ಡಾಯವಾಗಿ ತರತಕ್ಕದ್ದು.
6. ಅಂಪೈರ್‌ಗಳ ತೀರ್ಮಾನವೇ ಅಂತಿಮ ತೀರ್ಮಾನ.

ಪಂದ್ಯಾವಳಿಯಲ್ಲಿ ಭಾಗವಹಿಸಲು ಆಗಮಿಸುತ್ತಿರುವ ಕ್ರೀಡಾಪಟುಗಳಿಗೆ ಆತ್ಮೀಯ ಸ್ವಾಗತ.
(ಕ್ರೀಡಾಪಟುಗಳಿಗೆ ಮಧ್ಯಾನ್ಹದ ಲಘು ಉಪಹಾರದ ವ್ಯವಸ್ಥೆ ಮಾಡಲಾಗಿದೆ.)

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಕೆ.ಮಂಜುನಾಥ
9448533817

ಕೆ.ನಾಗರಾಜ
9353626026

ನಿಯಾಜ್ ಅಹಮದ್
7760907153

ಶ್ರೀನಿವಾಸ್
9164875903

ಗುರುಮೂರ್ತಿ
9481038141

ಸೋಮಶೇಖರ್
9844063612

ತಿಮ್ಮಣ್ಣ ವಡಕಲ್
9449373827

ಅವರನ್ನು ಸಂಪರ್ಕಿಸಲು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ. ಮಂಜುನಾಥ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *