Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

21 ಲಕ್ಷ ವಿಕಲಚೇತನ ಪಲಾನುಭವಿಗಳಿಗೆ 1,361 ಕೋಟಿ ರೂಪಾಯಿಗಳ ಸಾಧನ ಸಲಕರಣೆ ವಿತರಣೆ: ಕೇಂದ್ರ ರಾಜ್ಯ ಖಾತೆ ಸಚಿವ ಎ.ನಾರಾಯಣಸ್ವಾಮಿ

Facebook
Twitter
Telegram
WhatsApp

ಚಿತ್ರದುರ್ಗ.(ಏ.06): ಕಳೆದ ಏಳು ವರ್ಷಗಳಿಂದ ಕೇಂದ್ರ ಸರ್ಕಾರದಿಂದ ದೇಶಾದ್ಯಂತ 11,973 ಶಿಬಿರಗಳನ್ನು ಆಯೋಜಿಸಿ, 21 ಲಕ್ಷ ವಿಕಲಚೇತನ ಫಲಾನುಭವಿಗಳಿಗೆ 1,361 ಕೋಟಿ ರೂಪಾಯಿ ವೆಚ್ಚದ ಅಂತರಾಷ್ಟ್ರೀಯ ಗುಣಮಟ್ಟದ ಸಾಧನ ಹಾಗೂ ಸಲಕರಣೆಗಳನ್ನು ನೀಡಲಾಗಿದೆ. ರಾಜ್ಯದಲ್ಲಿ 41 ಸಾವಿರ ವಿಕಲಚೇತನರು ಯೋಜನೆಯ ಫಲಾನುಭವಿಗಳಾಗಿದ್ದಾರೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಖಾತೆ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.

ನಗರದ ಶ್ರೀ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ವಿಕಲಚೇತನ ವ್ಯಕ್ತಿಗಳ ಸಬಲೀಕರಣ ಇಲಾಖೆ, ಆರ್ಟಿಫಿಶಿಯಲ್ ಲಿಂಬ್ಸ್ ಮ್ಯಾನಿಫ್ಯಾಕ್ಚರಿಂಗ್ ಕಾರ್ಪೋರೇಷನ್ ಆಫ್ ಇಂಡಿಯಾ ಇವರ ಸಂಯಕ್ತಾಶ್ರಯದಲ್ಲಿ ಆಯೋಜಿಸಲಾದ ಹಿರಿಯ ನಾಗರಿಕರು ಹಾಗೂ ವಿಕಲಚೇತನರಿಗೆ ಉಚಿತ ಸಾಧನ ಸಲಕರಣೆಗಳ ಸಮರ್ಪಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸರ್ಕಾರದಿಂದ ಕಿವುಡ ಮಕ್ಕಳಿಗೆ 6 ಲಕ್ಷ ವೆಚ್ಚದಲ್ಲಿ ಉಚಿತವಾಗಿ ಶಸ್ತ್ರಚಿಕಿತ್ಸೆ ನೀಡಲಾಗುತ್ತಿದೆ. ಗರ್ಭಾವಸ್ಥೆಯ ಸಂದರ್ಭದಲ್ಲಿ ಉತ್ತಮ ಆರೈಕೆ ಮಾಡಿದರೆ ಮಕ್ಕಳಲ್ಲಿ ವಿಕಲಚೇತನ ದೋಷಗಳು ಕಾಣಿಸಿಕೊಳ್ಳುವುದಿಲ್ಲ ಎಂದರು.

ಜಿಲ್ಲೆಯಲ್ಲಿ ದಿವ್ಯಾಂಗರು, ಹಿರಿಯ ನಾಗರಿಕರಿಗೆ ದಿನ ನಿತ್ಯ ಜೀವನಕ್ಕೆ ಸಹಾಯಕಾರಿಯಾದ ವಸ್ತುಗಳನ್ನು ನೀಡಲು ಗಣತಿ ಮಾಡಲು ಅಧಿಕಾರಿಗಳು ಸೂಚನೆ ನೀಡಿದ್ದೆ. ಅದರಂತೆ ಗಣತಿ ಕಾರ್ಯ ಪೂರ್ಣಗೊಂಡು ಅಲಿಂಕೋ ಸಂಸ್ಥೆಯಿಂದ ಅಗತ್ಯ ಸಲಕರಣೆಗಳನ್ನು ವಿತರಣೆ ಮಾಡಲಾಗುತ್ತಿದೆ. ಕಾರ್ಯಕ್ರಮದ ಯಶಸ್ವಿ ಅನುಷ್ಠಾನಕ್ಕೆ ಸಹಕಾರ ಹಾಗೂ ಮಾರ್ಗದರ್ಶಿ ನೀಡಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಶ್ರಮಿಸಿದ್ದಾರೆ ಅವರಿಗೆ ಧನ್ಯವಾದಗಳನ್ನು ತಿಳಿಸಿದರು.

ನೂತನ ಶಿಕ್ಷಣ ನೀತಿ ಅನುಸಾರ ಶಾಲೆಗಳಲ್ಲಿ ತಾಂತ್ರಿಕ ಶಿಕ್ಷಣಕ್ಕೆ ಒತ್ತು ನೀಡಿಲಾಗಿದೆ. ವಿಕಲಚೇತನರಿಗೂ ಉದ್ಯೋಗ ತರಬೇತಿ ನೀಡಲಾಗುವುದು. ದಿವ್ಯಾಂಗರಿಗೆ ಸ್ಪೂರ್ತಿ ತುಂಬವ ಕೆಲಸ ಮಾಡಬೇಕು. ಜಿಲ್ಲೆಯ ಎಲ್ಲಾ ವಿಕಲಚೇತನರಿಗೆ ಕೇಂದ್ರ ಸರ್ಕಾರದ ಅನುದಾನದಡಿ ವಾಹನಗಳನ್ನು ನೀಡಲಾಗುವುದು.

ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಮಾಜದಲ್ಲಿ ನಿರ್ಲಕ್ಷಕ್ಕೆ ಒಳಗಾದವರ ಒಳಿತಿಗೆ ಶ್ರಮಿಸುತ್ತಿದೆ. ನರೇಂದ್ರ ಮೋದಿಯವರು ಇಂದು ಜಾಗತಿಕ ನಾಯಕರಾಗಿ ಹೊರ ಹೊಮ್ಮಿದ್ದಾರೆ. ಅಂತರಾಷ್ಟ್ರೀಯಮಟ್ಟದಲ್ಲಿನ ಯುದ್ಧ ಭೀತಿಯನ್ನು ತಡೆಯುವ ಹಾಗೂ ಶಾಂತಿ ಸ್ಥಾಪಿಸಲು ಅವರ ಪಾತ್ರ ಪ್ರಮುಖವಾಗಿದೆ. ಜಮ್ಮು ಕಾಶ್ಮೀರ ರಾಜ್ಯ ಇಂದು ಸಮಗ್ರ ದೇಶದ ಭಾಗವಾಗಿ ಬದಲಾಗಿದೆ. ಸರ್ಕಾರದ ಯೋಜನೆಗಳನ್ನು ಅನುಷ್ಠಾನ ಮಾಡಲಾಗುತ್ತಿದೆ. ಅಲ್ಲಿಯ ವಿಕಲಚೇತನರಿಗೆ ಸಾಧನ ಸಲಕರಣೆಗಳನ್ನು ಸಹ ವಿತರಿಸಲಾಗಿದೆ ಎಂದರು.

ಅಂಧ ಮಕ್ಕಳಿಗೆ ಸ್ಮಾರ್ಟ್ ಫೋನ್‍ಗಳನ್ನು ನೀಡಲಾಗುತ್ತಿದೆ. ಇದು ಬಹಳ ಉಪಯೋಗಿಯಾಗಿದೆ. ಮಕ್ಕಳು ಮೊಬೈಲ್‍ಗಳಲ್ಲಿ ಆಡಿಯೋ ಪುಸ್ತಕಗಳನ್ನು ಕೇಳಲು ಅವಕಾಶವಿದೆ. ಇದರಿಂದ ಅವರ ಕಲಿಕೆ ಪರಿಣಾಮಕಾರಿಯಾಗಲಿದೆ. ವಿಕಲಚೇತನರಿಗೆ ಇರುವ ಅಡ್ಡಿ ಹಾಗೂ ತೊಂದರೆಗಳನ್ನು ಚಿಂತಿಸಿ ಅಗತ್ಯ ಸಲಕರಣೆಗಳನ್ನು ನೀಡುವ ಕಾರ್ಯ ಮಾಡಲಾಗುತ್ತಿದೆ. ದೇಶದ ಎಲ್ಲಾ ಜಿಲ್ಲೆಗಳಲ್ಲಿ ಉಚಿತ ಸಾಧನ ಸಲಕರಣೆಗಳ ಸಮರ್ಪಣಾ ಕಾರ್ಯಕ್ರಮ ಆಯೋಜನೆ ಮಾಡಲಾಗುವುದು ಎಂದರು.

ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ಪ್ರಧಾನಿ ಮಂತ್ರಿ ನರೇಂದ್ರ ಮೋದಿಯವರು ಅಂಗವಿಕಲರು ಎಂಬ ಪದ ಬಳಕೆಯನ್ನು ನಿಷೇಧಿಸಿ, ದಿವ್ಯಾಂಗರು ಎಂಬ ಪದ ಬಳಕೆಗೆ ಒತ್ತು ನೀಡಿದರು. ಇದರ ಅರ್ಥ ಅವರು ದೇವರ ಸ್ಪರ್ಷಕ್ಕೆ ಒಳಗಾದವರು ಎಂದರ್ಥ. ವಿಕಲಚೇತನರಿಗೆ ದೇಹದ ಅಂಗಗಳನ್ನು ಕಳೆದುಕೊಂಡರು ವಿಶೇಷ ಸಾಧನೆ ಮಾಡುವ ಚೈತನ್ಯವಿರುತ್ತದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ದಿವ್ಯಾಂಗರ ಅಭಿವೃದ್ಧಿಗೆ ಹಲವು ಯೋಜನೆ ತರಲಾಗಿದೆ. ಇವುಗಳ ಸದ್ಬಳಕೆ ಮಾಡಿಕೊಳ್ಳಬೇಕು. ದಿವ್ಯಾಂಗರ ಖಾತೆಗೆ ನೇರವಾಗಿ ಮಾಶಾಸನ ಜಮೆ ಮಾಡಲಾಗುತ್ತದೆ. ಹಿಂದೆ ಅಂಗವಿಕಲರಿಗೆ ಎಸ್.ಟಿ.ಡಿ. ಬೂತ್ ನಡೆಸಲು ಅನುದಾನ ನೀಡಲಾಗುತ್ತಿತ್ತು. ಆದರೆ ಇಂದು ಅವುಗಳನ್ನು ನಡೆಸಲು ಆಗುವುದಿಲ್ಲ. ಬೇರೆ ಉದ್ಯೋಗ ಕೈಗೊಳ್ಳಲು ಆರ್ಥಿಕ ಸಹಾಯವನ್ನು ಸರ್ಕಾರ ನೀಡಲಿದೆ ಎಂದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಿ.ಟಿ ಸುರೇಶ್ ಮಾತನಾಡಿ, ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದೆ. ರಾಜ್ಯ ಮಟ್ಟದಲ್ಲಿ ನಡೆದ ಅತಿದೊಡ್ಡ ಕಾರ್ಯಕ್ರಮವಾಗಿದೆ. ಜಿಲ್ಲೆಯ ಎಲ್ಲಾ ವಿಕಲಚೇತನರಿಗೆ ಸೌಲಭ್ಯಗಳನ್ನು ವಿತರಿಸಿಲಾಗಿದೆ. ಸಚಿವರು ಸದಾ ಕಲಾ ದೀನ ದಲಿತ ಅಭಿವೃದ್ಧಿ ಬದ್ಧರಾಗಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನದ ಬಗೆಗಿನ ಸಚಿವರ ಕಾಳಜಿ ಅನನ್ಯವಾದದು ಎಂದರು.

ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ವಿಶೇಷ ಅಡಿಪ್ ಮತ್ತು ರಾಷ್ಟ್ರೀಯ ವಯೋಶ್ರೀ ಯೋಜನೆಯಡಿ, ಒಟ್ಟು ಎರೆಡು ಕೋಟಿ ವೆಚ್ಚದಲ್ಲಿ, 94 ಬ್ಯಾಟರಿಚಾಲಿತ ಹಾಗೂ 148 ಕೈಚಾಲಿತ ಸೈಕಲ್ಸ್ , 312 ಗಾಲಿಕುರ್ಚಿಗಳು , 145 ಸಿ.ಪಿ.ಚೇರ್ , 350 ಕಂಕುಳ ಊರುಗೋಲು , 331 ವಾಕಿಂಗ್ ಸ್ಟಿಕ್ಸ್ , 60 ರೋಲೇಟರ್ಸ್, 33 ಸ್ಮಾರ್ಟ್ ಕೇನ್ , 5 ಸ್ಮಾರ್ಟ್ ಫೋನ್ , 6 ಡೈಸಿ ಪ್ಲೇಯರ್ಸ್, ಅಂಧ ಮಕ್ಕಳಿಗೆ 73 ಬ್ರೈಲ್ಕಿಟ್ಸ್ , 864 ಶ್ರವಣಸಾಧನ , 189 ಬುದ್ದಿಮಾಂಧ್ಯ ಮಕ್ಕಳಿಗೆ ಒSIಇಆ ಕಿಟ್ಸ್ , 74 ಟ್ರೈಪ್ಯಾಡ್ , 64 ಎಲ್.ಎಸ್.ಬೆಲ್ಟ್ , 5 ಸರ್ವೈಕಲ್ ಕಾಲರ್ , 172 ನೀ ಬ್ರೆಸ್ , 26 ಸ್ಪೈನಲ್ ಸಪೋರ್ಟ್ , 47 ವಾಕರ್ , 300 ಕನ್ನಡಕಗಳು , 113 ದಂತಪಂಕ್ತಿಗಳು , 207 ಕೃತಕ ಕಾಲುಗಳು ಹಾಗೂ ಕ್ಯಾಲಿಫರ್ಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು.

ಫಲಾನುಭವಿ ಫಯಾಜ್ ಮಾತನಾಡಿ, ವಿಕಲಚೇತನರು ಸಾಧನ ಸಲಕರಣೆಗಳನ್ನು ಜೈಪುರ ಹಾಗೂ ಮಹಾರಾಷ್ಟ್ರದಿಂದ ತರಿಸಿಕೊಳ್ಳಬೇಕಿತ್ತು. ಆದರೆ ಸಚಿವರ ಪ್ರಯತ್ನದಿಂದ ಎಲ್ಲರಿಗೂ ಸ್ಥಳದಲ್ಲಿಯೇ ಸಾಧನ ಸಲಕರಣೆಗಳು ಲಭಿಸಿವೆ. ರಾಜ್ಯ ಸರ್ಕಾರದ ವಿಕಲಚೇತನರ ಅಭಿವೃದ್ಧಿ ಇಲಾಖೆ 2016 ರಲ್ಲಿ ಉತ್ತಮ ಕಾರ್ಯಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದುಕೊಂಡಿತ್ತು. ಬಿ.ಆರ್.ಡಬ್ಯೂಗಳು ಗ್ರಾ.ಪಂ. ಮಟ್ಟದಲ್ಲಿ ಕೆಲಸ ನಿರ್ವಹಣೆ ಮಾಡಿ ಫಲಾನುಭವಿಗಳಿಗೆ ಸವಲತ್ತು ಪಡೆಯಲು ಅನುಮಾಡಿಕೊಡುತ್ತಿದ್ದಾರೆ. ರಾಜ್ಯದಲ್ಲಿ 5628 ಬಿ.ಆರ್.ಡಬ್ಲ್ಯೂ,176 ಎಂ.ಆರ್.ಡಬ್ಲ್ಯೂ ನೇಮಕಮಾಡಲಾಗಿದೆ. ಇವರ ಗೌರವಧನ ಹೆಚ್ಚಿಸಿ ಸೇವಾ ಭದ್ರತೆ ಒದಗಿಸುವಂತೆ ಸಚಿವರಲ್ಲಿ ಮನವಿ ಮಾಡಿದರು.

ಫಲಾನುಭವಿ ನರಸಿಂಹ ಮೂರ್ತಿ ಮಾತನಾಡಿ ಎರೆಡು ಕಾಲಿನ ನ್ಯೂನತೆ ಇರುವವರಿಗೆ ಬ್ಯಾಟರಿ ಚಾಲಿತ ಸೈಕಲ್ ವಿತರಣೆ ಮಾಡಿದ್ದಾರೆ. ಹಿರಿಯ ನಾಗರಿಕರಿಗೂ ಸಾಧನ ಸಲಕರಣೆಗಳನ್ನು ವಿತರಣೆ ಮಾಡುತ್ತಿರುವುದು ಸಂತಸ ತಂದಿದೆ ಎಂದರು.

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ತಿಪ್ಪಮ್ಮ, ಎಸ್.ಟಿ.ಆಯೋಗದ ಸದಸ್ಯ ಜಯಪಾಲಯ್ಯ, ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಜಿ.ಪಂ ಸಿಇಓ ಡಾ.ಕೆ.ನಂದಿನಿದೇವಿ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ, ಅಲಿಂಕೋ ಸಂಸ್ಥೆಯ ಹಿರಿಯ ವ್ಯವಸ್ಥಾಪಕ ಎ.ವಿ.ಅಶೋಕುಮಾರ್, ತಾ.ಪಂ.ಸದಸ್ಯರಾದ ಮಲ್ಲೇಶ್, ಮೋಹನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | ಕ್ರೂಸರ್ ವಾಹನ ಪಲ್ಟಿ  ಓರ್ವ ಸಾವು, 13 ಮಂದಿಗೆ ಗಾಯ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ಮಾರ್ಚ್. 28 : ತಾಲ್ಲೂಕಿನ ತಳಕು ಪೋಲೀಸ್ ಠಾಣೆ ವ್ಯಾಪ್ತಿಯ ರಾಷ್ಟೀಯ ಹೆದ್ದಾರಿ 150 ಎ

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕ್ವಾರಿ ಅಂಡ್ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್‍ಗೆ ಶಕ್ತಿ ತುಂಬಬೇಕಾಗಿದೆ : ಅಬ್ದುಲ್ ಮಾಜಿದ್

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,    ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 28  : ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಭೆ ನಡೆಸಿ ಹೊಸ ಅಸೋಸಿಯೇಷನ್‍ಗೆ ಶಕ್ತಿ ತುಂಬಬೇಕಾಗಿದೆ

ಪ್ರಹ್ಲಾದ್ ಜೋಶಿಗೆ ಬೆಂಬಲ ನೀಡಿದ ವಾಲ್ಮೀಕಿ ಸಮಾಜ

ಹುಬ್ಬಳ್ಳಿ: ಧಾರವಾಡದಲ್ಲಿ ಪ್ರಹ್ಲಾದ ಜೋಶಿ ಅವರ ಸ್ಪರ್ಧೆಗೆ ದಿಂಗಾಲೇಶ್ವರ ಶ್ರೀಗಳ ಬೆಂಬಲಿಗರು ವಿರೋಧ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ ಪ್ರಹ್ಲಾದ ಜೋಶಿ ಅವರ ಬೆಂಬಲಕ್ಕೆ ವಾಲ್ಮೀಕಿ ಸಮಾಜದ ಶ್ರೀಗಳು ನಿಂತಿದ್ದಾರೆ. ಇಂದು ಪ್ರಹ್ಲಾದ್ ಜೋಶಿ ಅವರ ಪರವಾಗಿ

error: Content is protected !!