in ,

ಚಳ್ಳಕೆರೆಯಲ್ಲಿ ಹಿಂದೂ ಮಹಾಗಣಪತಿ ವಿಸರ್ಜನೆ ಕಾರ್ಯಕ್ರಮಕ್ಕೆ ಚಾಲನೆ

suddione whatsapp group join

ಸುದ್ದಿಒನ್, ಚಳ್ಳಕೆರೆ, (ಸೆ.16) :  ನಗರದ ಬಿಇಓ ಕಚೇರಿ ಆವರಣದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದ್ದ ಹಿಂದೂ ಮಹಾಗಣಪತಿ ವಿಸರ್ಜನೆ ಕಾರ್ಯಕ್ರಮಕ್ಕೆ ಇಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಮದಾಸ್ ಚಾಲನೆ ನೀಡಿದರು.

ನಗರದ ಬಿಇಓ ಕಚೇರಿ ಆವರಣದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ವತಿಯಿಂದ  6 ದಿನಗಳ ಕಾಲ ಪ್ರತಿಷ್ಠಾಪನೆ ಮಾಡಿ ಪ್ರತಿದಿನ ವಿಶೇಷ ಪೂಜೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಇಂದು ಆರನೇ ದಿನದಲ್ಲಿ ಹಿಂದೂ ಮಹಾಗಣಪತಿಯ ವಿಸರ್ಜನೆ ಕಾರ್ಯಕ್ರಮ ಚಾಲನೆ ದೊರೆಯಿತು.

ಈ ವೇಳೆ ಹಿಂದೂ ಮಹಾಗಣಪತಿಯನ್ನು ವಿವಿಧ ಬಣ್ಣ-ಬಣ್ಣ ಪುಷ್ಪಗಳಿಂದ ಅಲಂಕರಸಿಕೊಂಡು ಟ್ರಾಕ್ಟರ್‌ನಲ್ಲಿ ಪ್ರತಿಷ್ಠಾಪಿಸಿಕೊಂಡು, ಡೋಲ್ ಬಾರಿಸುವ ಮೂಲಕ ನಗರದ ನೆಹರು ಸರ್ಕಲ್ ಮೂಲಕ ನಗರದ ಪ್ರಮುಖ ರಸ್ತೆಗಳಲ್ಲಿ ಸರಳವಾಗಿ ಮೂರ್ತಿಯನ್ನು ಮೆರವಣಿಗೆ ನಡೆಸಲಾಯಿತು. ಇನ್ನು ಮೆರವಣಿಗೆ ಮುಗಿದ ನಂತರ ಸಂಜೆ ವಿಸರ್ಜನೆಯಾಗಲಿದೆ.

ಈ ವೇಳೆ ತಹಶೀಲ್ದಾರ್ ಎನ್. ರಘಮೂರ್ತಿ, ವಿಶ್ವಹಿಂದೂ ಪರಿಷತ್ ತಾಲ್ಲೂಕು ಅಧ್ಯಕ್ಷ ಡಾ. ಮಂಜುನಾಥ್, ರಾಜ್ಯ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ, ದೊರೆನಾಗರಾಜ್ ಸೇರಿದಂತೆ ಮುಂತಾದವರು ಇದ್ದರು.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಇಷ್ಟು ದಿನ ಡ್ರಗ್ಸ್ ಸಿಕ್ತಾ ಇತ್ತು..ಇದೀಗ ಡ್ರಗ್ಸ್ ಫ್ಯಾಕ್ಟರಿಯೇ ಪತ್ತೆ..!

ಸೆ.18 ಮತ್ತು 19ರಂದು ಎಸ್‌ಡಿಎ ಪರೀಕ್ಷೆ : ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ