Connect with us

Hi, what are you looking for?

ಪ್ರಮುಖ ಸುದ್ದಿ

ಜಾನುವಾರುಗಳಿಗೆ ಗಳಲೆ ರೋಗ.. ಸೂಕ್ತ ಚಿಕಿತ್ಸೆ ಹಾಗೂ ಮುಂಜಾಗ್ರತ ಕ್ರಮ ಹೇಗೆ…? ಇಲ್ಲಿದೆ ಮಾಹಿತಿ ನೋಡಿ…!

ಗ್ರಾಮೀಣ ಆರ್ಥಿಕಾಭಿವೃದ್ಧಿಯಲ್ಲಿ ಜಾನುವಾರುಗಳು ಅತೀ ಹೆಚ್ಚಿನ ಪ್ರಾಮುಖ್ಯತೆ ವಹಿಸುತ್ತವೆ. ಹೀಗಾಗಿ ಜಾನುವಾರು ಸಂಪತ್ತಿಗೆ ಅವುಗಳ ಆರೋಗ್ಯ ರಕ್ಷಣೆ ನೀಡುವ ಕಾರ್ಯವನ್ನು ಮಾಡಬೇಕು. ಅದರಲ್ಲೂ ಬರುವ ಅನೇಕ ರೋಗಗಳಲ್ಲಿ ಈ ಗಳಲೆ ರೋಗ ರೋಗವು ಒಂದು. ಗಳಲೆರೋಗವು ಹರಡುವ ವಿಧಾನ,ರೋಗದ ಲಕ್ಷಣ,ಚಿಕಿತ್ಸೆ ಮತ್ತು ರೋಗ ಬರದಂತೆ ಮುಂಜಾಗ್ರತಾ ಕ್ರಮಗಳ ಕುರಿತಾಗಿ ನಾವಿಂದು ತಿಳಿದುಕೊಳ್ಳೋಣ.

ಈ ಗಳಲೆರೋಗವು “ಪಾಸ್ಟುರೆಲ್ಲಾ ಮಲ್ಟೋಸೀಡಾ” ಎಂಬ ಬ್ಯಾಕ್ಟ್ರೀರಿಯದಿಂದ ಬರುತ್ತದೆ. ಈ ರೋಗವು ಮುಖ್ಯವಾಗಿ ಹಸು, ಎಮ್ಮೆ, ಕುರಿ, ಮತ್ತು ಮೇಕೆಗಳಲ್ಲಿ ಹಾಗೂ ಕಾಡುಪ್ರಾಣಿಗಳಾದ ಆನೆ, ಜಿಂಕೆ, ಕಡವೆ,ಕಾಡು ಕೋಣ ಮುಂತಾದ ಪ್ರಾಣಿಗಳಲ್ಲಿ ಕಂಡುಬರುತ್ತದೆ.

ಗಳಲೆರೋಗವು ಹರಡುವ ವಿಧಾನ :
ಈ ರೋಗವು ಹೆಚ್ಚಾಗಿ ಮಳೆಗಾಲದ ಪ್ರಾರಂಭದ ದಿನಗಳಲ್ಲಿ ಕಾಣಿಸಿಕೊಳ್ಳುತ್ತದೆ. ರೋಗಾಣುಗಳು ಆಹಾರ ಮತ್ತು ನೀರಿನ ಮುಖಾಂತರ ಪ್ರಾಣಿಯ ದೇಹವನ್ನು ಪ್ರವೇಶಿಸುತ್ತದೆ. ಈ ರೋಗವು ರೋಗಗ್ರಸ್ಥ ಒಂದು ಪ್ರಾಣಿಯಿಂದ ಮತ್ತೊಂದು ಪ್ರಾಣಿಗೆ ಹರಡುತ್ತ ಸಾಗುತ್ತದೆ. ಈ ರೋಗಾಣುವು ಪ್ರಾಣಿಗಳ ದೇಹದಲ್ಲಿ ಶೈತ್ಯಾವಸ್ಥೆಯಲ್ಲಿ ಇರುವುದರಿಂದ ವಾತಾವರಣದ ವೈಪರಿತ್ಯ, ದೂರದ ಪ್ರಯಾಣದ ಆಯಾಸದಿಂದ ರೋಗ ಉಂಟುಮಾಡುತ್ತದೆ.
ಗಳಲೆರೋಗದ ಲಕ್ಷಣಗಳು :
ರೋಗಗ್ರಸ್ಥ ರಾಸುವು ಸ್ವಲ್ಪ ಸಮಯದಲ್ಲಿಯೇ ಅಸ್ವಸ್ಥಗೊಂಡು, ಜ್ವರ ಕಾಣಿಸಿಕೊಳ್ಳುತ್ತದೆ. ಅಲ್ಲದೇ ಈ ಬಾದೆಯಿಂದ ಮಂಕಾಗಿ ಮೇವು ಬಿಡುತ್ತದೆ. ಮೂಗಿನ ಹೊಳ್ಳೆಗಳು ಹಿಗ್ಗಿಕೊಂಡು ಪುಪ್ಪುಸದಿಂದ ಒಳಧ್ವನಿಯಲ್ಲಿ ಗುರುಗುಟ್ಟುವ ಸಪ್ಪಳ ಬರುತ್ತದೆ. ಈ ಲಕ್ಷಣಗಳು ಸುಮಾರು 10 -15 ಗಂಟೆಗಳವರೆಗೆ ಸಾಗಿ ಮುಂದೆ ಜೊಲ್ಲು ಸುರಿಯತೊಡಗಿ ಗಂಟಲು ಊದಿಕೊಲ್ಲುತ್ತದೆ. ಅಲ್ಲದೇ ಮೂಗಿನಿಂದ ಅಂಟಿನಂತಹ ದ್ರವವು ಸೋರಲು ಆರಂಭಿಸುತ್ತದೆ. ಕ್ರಮೇಣವಾಗಿ ಸಿಂಬಳವು ರಕ್ತಮಿಶ್ರಿತವಾಗಿರುತ್ತವೆ. ಈ ರೀತಿಯಾಗಿ ಜಾನುವಾರುಗಳು ಬಳಲುತ್ತವೆ. ಚಿಕಿತ್ಸೆ ಕೊಡಿಸದ ರೋಗಪೀಡಿತ ರಾಸುಗಳಲ್ಲಿ ಹೆಚ್ಚಿನವು 24 ಗಂಟೆಗಳಲ್ಲಿ ಸಾಯುತ್ತವೆ.
ಗಳಲೆರೋಗಕ್ಕೆ ಚಿಕಿತ್ಸೆ :
ರೋಗಲಕ್ಷಣಗಳು ಕಾಣಿಸಿದ ಕೂಡಲೇ ತಜ್ಞರಿಂದ ಚಿಕಿತ್ಸೆಕೊಡಿಸಬೇಕು. ಸಾಮಾನ್ಯವಾಗಿ ಮೂರರಿಂದ ಐದು ದಿನಗಳವರೆಗೆ ಚಿಕಿತ್ಸೆಕೊಡಿಸುವುದು ಹೆಚ್ಚಿನ ಫಲವನ್ನು ನೀಡುತ್ತದೆ. ರೋಗಗ್ರಸ್ಥ ರಾಸುಗಳನ್ನು ಕಡ್ಡಾಯವಾಗಿ ಬೇರ್ಪಡಿಸಿ, ಬೇರೆಡೆಗೆ ಆರೈಕೆ ಮಾಡಬೇಕು. ದೂರಪ್ರಯಾನ ಮಾಡಿಸಬಾರದು. ಶೀತ ಮತ್ತು ದುಳಿನಿಂದ ಕೂಡಿದ ವಾತಾವರಣದಿಂದ ದೂರವಿಡಬೇಕು. ಮತ್ತು ಅವುಗಳಿಗೆ ಹೆಚ್ಚು ಆಯಾಸವಾಗದಂತೆ ನೋಡಿಕೊಳ್ಳಬೇಕು.

ಮುಂಜಾಗ್ರತಾ ಕ್ರಮಗಳು :
ಈ ರೋಗದಿಂದ ದೂರವಿಡಲು ಏಕೈಕ ಪ್ರತಿಬಂಧಕ ಕ್ರಮವೆಂದರೆ ಆರೋಗ್ಯವಂತ ಎಲ್ಲಾ ರಾಸುಗಳಿಗೆ ಪ್ರತಿ ಆರುತಿಂಗಳಿಗೊಮ್ಮೆ ಗಂಟಲುಬೇನೆ ರೋಗದ ನಿರೋಧಕ ಲಸಿಕೆಯನ್ನು ಹಾಕಿಸಬೇಕು.

Click to comment

Leave a Reply

Your email address will not be published. Required fields are marked *

You May Also Like

ಪ್ರಮುಖ ಸುದ್ದಿ

ಕೊಡಗು: ಸದ್ಯ ಲಾಕ್ಡೌನ್ ನಿಂದಾಗಿ ಅದೆಷ್ಟೋ ಜನ ತುತ್ತು ಅನ್ನಕ್ಕೂ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇಂಥವರ ಸಹಾಯಕ್ಕಾಗಿ ಅದೆಷ್ಟೋ ಜನ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಈ ಮಧ್ಯೆ ಅಲ್ಲೊಬ್ಬ ಯುವಕ ತನ್ನ...

ಪ್ರಮುಖ ಸುದ್ದಿ

ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ರಿಲೀಸ್ ಮಾಡಿದ್ದು, ಕಳೆದ 24 ಗಂಟರಯಲ್ಲಿ ರಾಜ್ಯದಲ್ಲಿ 5041ಹೊಸ ಪ್ರಕರಣ ಪತ್ತೆಯಾಗಿದ್ದಾರೆ. ಕೊರೊನಾ ಕಂಟ್ರೊಲ್ ಗೆ ಮಾಡಿದ್ದ ಲಾಕ್ಡೌನ್ ವರ್ಕ್ಔಟ್ ಆಗಿದೆ. 48428 ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್,...

ಪ್ರಮುಖ ಸುದ್ದಿ

ಬೆಂಗಳೂರು : ಸಂಚಾರಿ ವಿಜಯ್ ಅವರು ನಟನೆಯಲ್ಲಿ ಅದ್ಭುತ ನಟ ಅನ್ನೋದು ಎಲ್ಲರಿಗೂ ಗೊತ್ತು. ತನ್ನ ನಟನೆಯಿಂದಲೇ ಎಲ್ಲರ ಗಮನ ಸೆಳೆದ ನಟ. ತಾನೊಬ್ಬ ನಟ ಎಂಬ ಹಮ್ಮಿಗಿಂತ ತಾನೊಬ್ಬ ಕಲಾವಿದ ಎಂಬಂತೆ...

ಪ್ರಮುಖ ಸುದ್ದಿ

ಸುದ್ದಿಒನ್, ಬೆಂಗಳೂರು, (ಜೂ.15) : ದ್ವಿತೀಯ ಪಿಯು ಪುನರಾವರ್ತಿತ ವಿದ್ಯಾರ್ಥಿಗಳನ್ನು ತೇರ್ಗಡೆಗೊಳಿಸುವ ಕುರಿತು ಪರಿಶೀಲಿಸಿ ನಿರ್ಧಾರ ತಿಳಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ. ಪರೀಕ್ಷೆ ನಡೆಸದೆ ದ್ವಿತೀಯ ಪಿಯು ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸುವ ರಾಜ್ಯ...

ಪ್ರಮುಖ ಸುದ್ದಿ

ಬೆಂಗಳೂರು: ಮೊದಲ ಹಂತದ ಅನ್ಲಾಕ್ ಶುರುವಾಗಿದ್ದು, ಬಿಬಿಎಂಪಿ ಆಟೋ ಚಾಲಕರಿಗೆ ಹೊಸ ರೂಲ್ಸ್ ತಂದಿದೆ. ಈ ರೂಲ್ಸ್ ಪ್ರಕಾರ ಆಟೋ ಡ್ರೈವರ್ ಗಳು ವ್ಯಾಕ್ಸಿನ್ ಹಾಕಿಸಿಕೊಳ್ಳದೆ ಇದ್ರೆ ಆಟೋ ಚಾಲನೆ ಮಾಡುವ ಹಾಗಿಲ್ಲ...

ಪ್ರಮುಖ ಸುದ್ದಿ

ಚಿಕ್ಕಮಗಳೂರು: ಬೈಕ್ ಅಪಘಾತದಿಂದ ತೀವ್ರ ಗಾಯಗೊಂಡಿದ್ದ ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ನಿನ್ನೆ ನಿಧನರಾಗಿದ್ದರು. ಇಂದು ರವಿಂದ್ರ ಕಲಾಕ್ಷೇತ್ರದಲ್ಲಿ ಅವರ ಅಂತಿಮ ದರ್ಶನಕ್ಕೂ ವ್ಯವಸ್ಥೆ ಮಾಡಲಾಗಿತ್ತು. ಇಂಡಸ್ಟ್ರಿಯಲ್ಲಿ ಎಲ್ಲರೊಟ್ಟಿಗೂ ಬೆರೆಯುತ್ತಿದ್ದ ನಟ....

ಪ್ರಮುಖ ಸುದ್ದಿ

ಇತರರು ತನಗೆ ಸ್ವಲ್ಪ ಕಷ್ಟ ಕೊಟ್ಟರೂ ಕ್ಷಮಾ ಗುಣವು ದೀರ್ಘಾಯಸ್ಸನ್ನು ಕೊಡುತ್ತದೆ. ಇದು ಹೇಗೆ ಸಾಧ್ಯ ಎಂದು ಅಂದುಕೊಳ್ಳುತ್ತಿರುವಿರಾ? ಈ ಮಾತಿಗೆ ಕೆಲವರು ವಿರೋಧವನ್ನು ವ್ಯಕ್ತಪಡಿಸುವವರೂ ಇರುವರು. ಯಾಕೆಂದರೆ ಅಂಥವರ ಪ್ರಕಾರವಾಗಿ ಇತರರ...

ದಿನ ಭವಿಷ್ಯ

ಮಂಗಳವಾರ ರಾಶಿ ಭವಿಷ್ಯ-ಜೂನ್-15,2021 ಮಿಥುನ ಸಂಕ್ರಾಂತಿ ಸೂರ್ಯೋದಯ: 05:52 AM, ಸೂರ್ಯಸ್ತ: 06:45 PM ಸ್ವಸ್ತಿ ಶ್ರೀ ಮನೃಪ ಶಾಲಿವಾಹನ ಶಕೆ1943, ಸಂವತ್2077, ಪ್ಲವ ನಾಮ ಸಂವತ್ಸರ ಜ್ಯೇಷ್ಠ ಮಾಸ,ಉತ್ತರಾಯಣ, ವಸಂತ ಋತು,...

ಪ್ರಮುಖ ಸುದ್ದಿ

ಬೆಂಗಳೂರು: ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ರಿಲೀಸ್ ಮಾಡಿದ್ದು, ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 6835 ಹೊಸ ಪ್ರಕರಣ ಪತ್ತೆಯಾಗಿದೆ. 31828 ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್, 117914 RTPCR ಟೆಸ್ಟ್ ಸೇರಿದಂತೆ ಒಟ್ಟು,...

error: Content is protected !!