Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಮತದಾರರ ಜಾಗೃತಿಗಾಗಿ ವಿವಿಧ ಸ್ಪರ್ಧೆ: ಜಿ.ಪಂ ಉಪಕಾರ್ಯದರ್ಶಿ ಡಾ.ರಂಗಸ್ವಾಮಿ

Facebook
Twitter
Telegram
WhatsApp

ಚಿತ್ರದುರ್ಗ, (ಫೆಬ್ರವರಿ.25) : 12ನೇ ರಾಷ್ಟ್ರೀಯ ಮತದಾರರ ದಿನದ ಸಂದರ್ಭದಲ್ಲಿ ಭಾರತ ಚುನಾವಣಾ ಆಯೋಗವು ರಾಷ್ಟ್ರೀಯ ಮತದಾರರ ಜಾಗೃತಿ ಸ್ಪರ್ಧೆಯನ್ನು ಪ್ರಾರಂಭಿಸಿದ್ದು, ಈ ಸ್ಪರ್ಧೆಗಳಿಗೆ ಜಿಲ್ಲೆಯಿಂದ ಹೆಚ್ಚು ಜನರು ಭಾಗವಹಿಸುವ ನಿಟ್ಟಿನಲ್ಲಿ ಅಗತ್ಯಕ್ರಮಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಡಾ.ರಂಗಸ್ವಾಮಿ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ರಾಷ್ಟ್ರೀಯ ಮತದಾರರ ಜಾಗೃತಿ ಸ್ಪರ್ಧೆ ಅಂಗವಾಗಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ಭಾರತ ಚುನಾವಣಾ ಆಯೋಗದ ಸ್ವೀಪ್ ಕಾರ್ಯಕ್ರಮದ ಮೂಲಕ ರಾಷ್ಟ್ರೀಯ ಮತದಾರರ ಜಾಗೃತಿ ಸ್ಪರ್ಧೆಯು ಜನರ ಪ್ರತಿಭೆ ಮತ್ತು ಸೃಜನಶೀಲತೆಯನ್ನು ಹೊರಹೊಮ್ಮುವಂತೆ ಮಾಡುತ್ತದೆ ಮತ್ತು ಅವರ ಸಕ್ರಿಯ ಒಳಗೊಳ್ಳುವಿಕೆಯ ಮೂಲಕ ಪ್ರಜಾಪ್ರಭುತ್ವವನ್ನು ಬಲಪಡಿಸುತ್ತದೆ. ಎಲ್ಲ ವಯೋಮಾನದವರಿಗೂ ಮುಕ್ತವಾಗಿರುವ ಈ ಸ್ಪರ್ಧೆಯು ಪ್ರಜಾಪ್ರಭುತ್ವದಲ್ಲಿ ಪ್ರತಿಯೊಂದು ಮತದ ಪ್ರಾಮುಖ್ಯತೆಯ ವಿಷಯದ ಮೇಲೆ ರಚಿಸಲಾದ ವಿಚಾರಗಳು ಮತ್ತು ವಿಷಯವನ್ನು ಆಚರಿಸುವ ಗುರಿ ಹೊಂದಿದ್ದು, ಸ್ಪರ್ಧೆಯ ಕುರಿತು ಸಾರ್ವಜನಿಕರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ನಡೆಸಿ ಹೆಚ್ಚಿನ ಜನರು ಸ್ಪರ್ಧಿಸಲು ಉತ್ತೇಜನ ನೀಡಬೇಕು. ಈ ನಿಟ್ಟಿನಲ್ಲಿ ಅರಿವು ಮೂಡಿಸುವ ಕಾರ್ಯಮಾಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

18 ವರ್ಷಪೂರೈಸಿದ ಪ್ರತಿಯೊಬ್ಬರು ಸಹ ಮತದಾರರ ಪಟ್ಟಿಗೆ ನೊಂದಣಿಯಾಗಬೇಕು. ಈ ನಿಟ್ಟಿನಲ್ಲಿ ಹೆಚ್ಚಿನ ಜಾಗೃತಿ ಮೂಡಿಸಿ ಮತದಾರರ ಪಟ್ಟಿಗೆ ನವಮತದಾರರು ಸೇರ್ಪಡೆಯಾಗಬೇಕು. ಯಾರೂ ಸಹ ಮತದಾರರ ಪಟ್ಟಿಯಿಂದ ಹೊರಗುಳಿಬಾರದು ಎಂದರು.

ಚುನಾವಣಾ ತಹಶೀಲ್ದಾರ್ ಕೆ.ಕೃಷ್ಣಕುಮಾರ್ ಮಾತನಾಡಿ, ಪ್ರತಿಯೊಬ್ಬ ಮತದಾರರಿಗೂ ಜಾಗೃತಿ ಮೂಡಿಸುವ ಉದ್ದೇಶದಿಂದ ರಾಷ್ಟ್ರೀಯ ಮತದಾರರ ಜಾಗೃತಿ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. “ನನ್ನ ಮತ ನನ್ನ ಭವಿಷ್ಯ: ಒಂದು ಮತದ ಶಕ್ತಿ” ಎಂಬ ಧ್ಯೇಯವಾಕ್ಯದೊಂದಿಗೆ ಹವ್ಯಾಸಿ, ವೃತ್ತಿಪರ ಹಾಗೂ ಸಾಂಸ್ಥಿಕ ಸ್ಪರ್ಧೆಗಳನ್ನು ಜನವರಿ 25 ರಿಂದ ಈಗಾಗಲೇ ಪ್ರಾರಂಭಿಸಲಾಗಿದ್ದು, ಮಾರ್ಚ್ 15 ರವರೆಗೂ ಆನ್‍ಲೈನ್ ಮೂಲಕ ಸ್ಪರ್ಧೆಗಳನ್ನು ನಡೆಸಲಾಗುತ್ತಿದೆ. ವಿಜೇತರಿಗೆ ಆಕರ್ಷಕ ನಗದು ಬಹುಮಾನ ಹಾಗೂ ಇ-ಪ್ರಮಾಣ ಪತ್ರವನ್ನು ಚುನಾವಣಾ ಆಯೋಗದಿಂದ ನೀಡಲಾಗುವುದು ಎಂದರು.

ರಾಷ್ಟ್ರೀಯ ಮತದಾರರ ಜಾಗೃತಿ ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ರಾಷ್ಟ್ರೀಯ ಮತದಾರರ ಜಾಗೃತಿ ಸ್ಪರ್ಧೆಗಳನ್ನು ಆನ್‍ಲೈನ್ ಮೂಲಕ ನಡೆಸುತ್ತಿದ್ದು, ಸ್ಪರ್ಧಿಗಳು ತಮ್ಮ ನಮೂನೆಗಳನ್ನು ಕಳುಹಿಸಬಹುದು, ಸ್ಪರ್ಧೆಯ ವೆಬ್‍ಸೈಟ್ http://evisveep.nic.in/con-test ನಲ್ಲಿ ವಿವರವಾದ ಮಾರ್ಗಸೂಚಿಗಳು, ನಿಯಮಗಳು ಮತ್ತು ಷರತ್ತುಗಳನ್ನು ತಿಳಿಸಲಾಗಿದೆ.

ಸ್ಪರ್ಧೆಯಲ್ಲಿ ಭಾಗವಹಿಸುವವರು ಸ್ಪರ್ಧೆಯ ವೆಬ್‍ಸೈಟ್‍ನಲ್ಲಿ ರಿಜಿಸ್ಟರ್ ಮಾಡಿಕೊಂಡು, ಸಂಬಂಧಿಸಿದ ಎಲ್ಲಾ ರೀತಿಯ ಸಂಪೂರ್ಣ ವಿವರ ಅಂದರೆ ತಮ್ಮ ಹೆಸರು, ಸ್ಪರ್ಧಿಸುತ್ತಿರುವ ವರ್ಗದ ವಿವರವನ್ನು ಇ-ಮೇಲ್‍ನಲ್ಲಿ ಕಡ್ಡಾಯವಾಗಿ ನಮೂದಿಸಿ, ಮಾರ್ಚ್ 15ರೊಳಗಾಗಿ [email protected] ವೆಬ್‍ಸೈಟ್‍ನಲ್ಲಿ ನಮೂದಿಸಬೇಕು.

ಸ್ಪರ್ಧೆಗಳ ವಿವರ: ರಾಷ್ಟ್ರೀಯ ಮಟ್ಟದಲ್ಲಿ ರಸಪ್ರಶ್ನೆ ಸ್ಪರ್ಧೆ, ಸ್ಲೋಗನ್ ಸ್ಪರ್ಧೆ, ಗಾಯನ ಸ್ಪರ್ಧೆ, ಚಿತ್ರೀಕರಣ ಸ್ಪರ್ಧೆ ಹಾಗೂ ಘೋಸ್ಟರ್ ವಿನ್ಯಾಸ ಸ್ಪರ್ಧೆ ಸೇರಿದಂತೆ 5 ಬಗೆಯ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಈ ಸ್ಪರ್ಧೆಯಲ್ಲಿ ಸಂಸ್ಥೆ, ವೃತ್ತಿಪರ ಹಾಗೂ ಹವ್ಯಾಸಿ ಎಂಬ ಮೂರು ವರ್ಗಗಳಲ್ಲಿ ವಿಂಗಡಿಸಿ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ ಎಂದರು.

ಸಭೆಯಲ್ಲಿ ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಮೋಸಿನ್, ಜಿಲ್ಲಾ ವಾರ್ತಾಧಿಕಾರಿ ಬಿ.ಧನಂಜಯ ಸೇರಿದಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಗಳ ಗೃಹ ಕಟ್ಟಡ ಉದ್ಯಮದಾರಿಗೆ ಆರ್ಥಿಕ ಚೇತರಿಕೆ

ಈ ರಾಶಿಗಳ ಗೃಹ ಕಟ್ಟಡ ಉದ್ಯಮದಾರಿಗೆ ಆರ್ಥಿಕ ಚೇತರಿಕೆ, ಶುಕ್ರವಾರ ರಾಶಿ ಭವಿಷ್ಯ -ಏಪ್ರಿಲ್-19,2024 ಸೂರ್ಯೋದಯ: 06:00, ಸೂರ್ಯಾಸ್ತ : 06:29 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ ಸಂವತ್ಸರ , ಸಂವತ್2079,ಚೈತ್ರಮಾಸ,ಶುಕ್ಲ ಪಕ್ಷ,

ಕೋಟಿ ಕೋಟಿ ಆಸ್ತಿಯ ಒಡೆಯ ದಿಂಗಾಲೇಶ್ವರ ಸ್ವಾಮೀಜಿ : ಚಿನ್ನ, ಬೆಳ್ಳಿ ಸೇರಿ ಏನೆಲ್ಲಾ ಇದೆ‌ ಗೊತ್ತಾ..?

ಹುಬ್ಬಳ್ಳಿ: ಪ್ರಹ್ಲಾದ್ ಜೋಶಿ ಸ್ಪರ್ಧೆಗೆ ವಿರೋಧಿಸಿ, ಬಿಜೆಪಿ ಅಭ್ಯರ್ಥಿ ಪರ ಸ್ಪರ್ಧೆಗೆ ನಿಂತಿರುವ ದಿಂಗಾಲೇಶ್ವರ ಸ್ವಾಮೀಜಿ ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ವೇಳೆ ತಮ್ಮ ಬಳಿ ಇರುವ ಚರಾಸ್ಥಿ-ಸ್ಥಿರಾಸ್ತಿ ಸೇರಿದಂತೆ ಎಲ್ಲಾ ವಿವರವನ್ನು

ಪ್ರೀತಿ ನಿರಾಕರಿಸಿದ್ದಕ್ಕೆ ಕಾರ್ಪೋರೇಟರ್ ಪುತ್ರಿಯನ್ನೇ ಚಾಕುವಿನಿಂದ ಇರಿದು ಕೊಲೆ : ಬೆಚ್ಚಿ ಬಿದ್ದ ಹುಬ್ಬಳ್ಳಿ-ಧಾರವಾಡ ಮಂದಿ

ಹುಬ್ಬಳ್ಳಿ: ಪ್ರೀತಿ ಮಾಡಲು ನಿರಾಕರಿಸಿದ್ದಕ್ಕೆ ಕಾರ್ಪೋರೇಟರ್ ಮಗಳನ್ನೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿ ನಗರದಲ್ಲಿ ನಡೆದಿದೆ. ನೇಹಾ ಬರ್ಬರವಾಗಿ ಕೊಲೆಯಾದ ಯುವತಿ. ಫಯಾಜ್ ಕೊಲೆ ಮಾಡಿದಾತ. ನೇಹಾ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ

error: Content is protected !!