ಚಾಮರಾಜನಗರ: ವಿಧಾನಸಭಾ ಚುನಾವಣಾ ಕಣ ದಿನೇ ದಿನೇ ರಂಗೇರುತ್ತಿದೆ. ಅಧಿಕಾರಕ್ಕಾಗಿ ಭರ್ಜರಿ ಪ್ರಚಾರದ ಜೊತೆಗೆ ಜನರಿಗೆ ಆಮಿಷಗಳನ್ನು ಒಡ್ಡುವುದು ಜಾಸ್ತಿಯಾಗುತ್ತಾ ಇದೆ. ಈಗ ಅಭ್ಯರ್ಥಿಗಳ ಜೊತೆಗೇನೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡರಾ ಎಂಬ ಅನುಮಾನ ಕಾಡುವಂತೆ ಮಾಡಿದೆ ಒಂದು ಆಡಿಯೋ.
ವಿ ಸೋಮಣ್ಣ ಅವರು ಈ ಬಾರಿ ಎರಡು ಕಡೆ ಸ್ಪರ್ಧೆ ನಡೆಸಿದ್ದಾರೆ. ಒಂದು ಸಿದ್ದರಾಮಯ್ಯ ವಿರುದ್ಧ ವರುಣಾ ಕ್ಷೇತ್ರ ಹಾಗೂ ಚಾಮರಾಜನಗರ. ಈಗ ವೈರಲ್ ಆಗಿರುವ ಸೋಮಣ್ಣ ಅವರದ್ದೇ ಎನ್ನಲಾದ ಆಡಿಯೋ ಬಂದು, ಚಾಮರಾಜನಗರ ಜಿಲ್ಲೆಗೆ ಸಂಬಂಧಿಸಿದ್ದು. ಜೆಡಿಎಸ್ ಅಭ್ಯರ್ಥಿ ಮಲ್ಲಿಕಾರ್ಜುನ ಸ್ವಾಮಿ ಅವರಿಗೆ ಸೋಮಣ್ಣ ಕರೆ ಮಾಡಿ ಮಾತನಾಡಿದ್ದಾರೆ ಎಂಬ ಆಡಿಯೋವೊಂದು ವೈರಲ್ ಆಗಿದೆ.
ಆ ಆಡಿಯೋದಲ್ಲಿ ಹೀಗದೆ, “ತೊಟ್ಟಿ ನನ್ನ ಮಗನ ಮಾತು ಕೇಳಿ ನಿಂತಿದ್ದೀಯಾ. ಮೊದಲು ತೆಗಿ ಆಮೇಲೆ ಎಲ್ಲಾ ಮಾತನಾಡೋಣಾ. ನಿನ್ನ ಬದುಕಿಗೆ ಏನು ಬೇಕೋ ಅದನ್ನು ಮಾಡುತ್ತೇನೆ. ಹಿತ ಕಾಪಾಡುತ್ತೇನೆ” ಎಂದು ಆ ಆಡಿಯೋದಲ್ಲಿ ಇದೆ. ಇದು ಸೋಮಣ್ಣ ಅವರೇ ಮಾತನಾಡಿರುವ ಮಾತಾ ಎಂಬುದನ್ನು ಅವರೇ ದೃಢಪಡಿಸಬೇಕಿದೆ.





GIPHY App Key not set. Please check settings