in ,

ಗ್ರಿಲ್ ಹಾಕಿಲ್ಲದೆ ಇದ್ದಿದ್ರೆ ಆ ಮಹಿಳೆ ಬದುಕುತ್ತಿದ್ದರಾ..?

suddione whatsapp group join

 

ಬೆಂಗಳೂರು: ನಿನ್ನೆ ಸಂಜೆ ವೇಳೆಗೆ ದೇವರಚಿಕ್ಕನಹಳ್ಳಿ ಆಶ್ರೀತಾ ಅಪಾರ್ಟ್ಮೆಂಟ್ ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ನೋಡ ನೋಡುತ್ತಲೆ ಮಹಿಳೆಯೊಬ್ಬರು ಸಜೀವ ದಹನವಾಗಿ ಹೋಗಿದ್ರು. ಯಾರು ಕೂಡ ಕಾಪಾಡೋದಕ್ಕೆ ಆಗ್ಲಿಲ್ಲ. ಜೊತೆಗೆ ಮನೆಯೊಳಗೂ ವೃದ್ಧೆಯೊಬ್ಬರು ಸಾವನ್ನಪ್ಪಿದ್ದಾರೆ. ಇದಕ್ಕೆಲ್ಲಾ ಕಾರಣ ಅವರ‌ ಮನೆಯಲ್ಲಿ ಹಾಕಿದ್ದ ಗ್ರಿಲ್ ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ.

ಹೌದು, ನಿನ್ನೆ ಸಿಕ್ಕ ವಿಡಿಯೋಗಳಲ್ಲಿ ಗಮನಿಸಬಹುದು. ಆ ಮಹಿಳೆ ಬಾಲ್ಕನಿಯಲ್ಲಿ ವಾಕ್ ಮಾಡುವಾಗ ಬೆಂಕಿ ಕಾಣಿಸಿಕೊಳ್ಳುತ್ತೆ. ಗ್ರಿಲ್ ಹಾಕಿದ್ರಿಂದ ಯಾವ ಕಡೆಗೂ ತಪ್ಪಿಸಿಕೊಳ್ಳೋದಕ್ಕೆ ಹಾಗಲ್ಲ. ನೋಡ ನೋಡುತ್ತಿದ್ದಂತೆಯೇ ಕಣ್ಣ ಮುಂದೆಯೇ ಸಜೀವ ದಹನವಾಗಿ ಹೋಗ್ತಾರೆ.

ಈ ಬಗ್ಗೆ ಸ್ಥಳೀಯರೊಬ್ಬರು ಹೇಳಿದ್ದು ಹೀಗೆ, ನಮಗೆ 3ನೇ ಮಹಡಿಯಲ್ಲಿ ಇದ್ದ ಮಹಿಳೆಯನ್ನು ಉಳಿಸಿಕೊಳ್ಳಲು ಆಗಲಿಲ್ಲ. ಅದು ಅಲ್ಲದೇ ಇದು ಅವರೇ ತಂದುಕೊಂಡ ಆಪತ್ತು. ಏಕೆಂದರೆ ಅವರ ಮನೆಯು ಗ್ರಿಲ್‍ನಲ್ಲಿ ಪೂರ್ತಿಯಾಗಿ ಮುಚ್ಚಿಕೊಂಡಿದ್ದೆ ಈ ಘಟನೆಗೆ ಕಾರಣವಾಯಿತು. ಕೆಲವೊಂದು ಕಡೆ ಗ್ರಿಲ್ ನನ್ನು ಓಪನ್ ಮಾಡಲು ಅವಕಾಶಗಳಿವೆ. ಆದರೆ ಅಪಘಾತವಾದ ಮನೆಯಲ್ಲಿ ಆ ರೀತಿ ಅವಕಾಶಗಳಿಲ್ಲ. ಹೀಗಾಗಿ ಇಬ್ಬರು ಮೃತಪಟ್ಟಿದ್ದಾರೆ ಎಂದಿದ್ದಾರೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

847 ಜನಕ್ಕೆ ಹೊಸದಾಗಿ ಸೋಂಕು.. 20 ಜನ ಸಾವು..!

ಈ ರಾಶಿಯವರಿಗೆ ಸರ್ಕಾರಿ ಕೆಲಸಕಾರ್ಯಗಳಲ್ಲಿ ಪ್ರಗತಿ!