
ಬೆಂಗಳೂರು: ಇತ್ತಿಚಿಗಂತು ನಕಲಿ ಮಾಡುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಫೇಸ್ ಬುಕ್ ನಲ್ಲಂತು ಪ್ರತಿದಿನ ಫೇಕ್ ಅಕೌಂಟ್ ಕ್ರಿಯೇಟ್ ಆಗಿದೆ ಎಂಬ ಮಾಹಿತಿ ಬರುತ್ತಾನೆ ಇರುತ್ತೆ. ಅದರಲ್ಲಿ ಅದೆಷ್ಟೋ ಜನ ಹಣ ಕಳೆದುಕೊಂಡವರಿದ್ದಾರೆ. ಹೀಗೆ ಪ್ರತಿದಿನ ನಕಲಿ ವಿಚಾರಗಳನ್ನು ಕೇಳುತ್ತಲೇ ಇರುತ್ತೀವಿ. ಇದೀಗ ಕಾಂಗ್ರೆಸ್ ವೆಬ್ಸೈಟ್ ಗೆ ಖದೀಮರು ಕಣ್ಣು ಹಾಕಿದ್ದಾರೆ.

ಕಾಂಗ್ರೆಸ್ ಹೆಸರಿನಲ್ಲಿ ನಕಲಿ ವೆಬ್ ಸೈಟ್ ಸೃಷ್ಟಿಯಾಗಿದೆ. Kpcc.in ಎಂಬ ಹೆಸರಿನಲ್ಲಿ ವೆಬ್ಸೈಟ್ ಸೃಷ್ಟಿ ಮಾಡಿದ್ದು, ನಗರ ನಕ್ಸಲೀಯರು ಎಂದು ವೆಬ್ ಸೈಟ್ ನಲ್ಲಿ ಹಾಕಲಾಗಿದೆ. ಅದರಲ್ಲಿ ಕಾಂಗ್ರೆಸ್ ಗೆ ಸಂಬಂಧ ಪಟ್ಟಂತೆ ಸ್ಟೋರಿಗಳನ್ನು ಹಾಕಲಾಗಿದೆ. ಕಾಂಗ್ರೆಸ್ ಕಾಲದಲ್ಲಿ ನಡೆದ ಭ್ರಷ್ಟಚಾರ ಎಂಬಂತೆ ಬಿಂಬಿಸಲಾಗಿದೆ. ಇದೊಂದು ಫೇಕ್ ಅಕೌಂಟ್ ಎಂದು ಈಗಾಗಲೇ ಮಾಹಿತಿ ಸಿಕ್ಕಿದೆ.
ಇನ್ನು ಇದೆ ಸಿದ್ದರಾಮಯ್ಯ ಹೆಸರಲ್ಲಿಯೂ ನಕಲಿ ಪತ್ರ ಅಪ್ಲೋಡ್ ಮಾಡಲಾಗಿದೆ. ಅದರಲ್ಲಿ ಸೋನಿಯಾ ಗಾಂಧಿಗೆ ಡಿಕೆ ಶಿವಕುಮಾರ್ ವಿರುದ್ಧ ಬರೆದ ಪತ್ರ ಅಪ್ಲೋಡ್ ಮಾಡಲಾಗಿದೆ. ಆ ಪತ್ರದಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.
GIPHY App Key not set. Please check settings