ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಲಾಕ್ ಆಗಿ, ಜಾಮೀನಿನ ಮೇಲೆ ಹೊರ ಬಂದ ಮೇಲೆ ದರ್ಶನ್ ಆಕ್ಡೀವ್ ಆಗಿದ್ದಾರೆ. ಅರ್ಧಕ್ಕೆ ನಿಂತು ಹೋಗಿದ್ದ ಸಿನಿಮಾವನ್ನು ಮತ್ತೆ ಶುರು ಮಾಡಿದ್ದಾರೆ. ಅದರಲ್ಲೂ ಹೆಂಡತಿ, ಮಗನ ಜೊತೆಗೆ ಹೆಚ್ಚು ಸಮಯವನ್ನು ಕಳೆತುತ್ತಿದ್ದಾರೆ. ವಿಜಯಲಕ್ಷ್ಮಿ ಅವರು ಕೂಡ ದರ್ಶನ್ ಏಳ್ಗೆಗೆ ಶ್ರಮ ಹಾಕುತ್ತಿದ್ದಾರೆ. ಇದೀಗ ಕುಟುಂಬ ಸಮೇತ ಶಕ್ತಿ ಪೀಠಕ್ಕೆ ಭೇಟಿ ನೀಡಿದ್ದಾರೆ.
ಕೇರಳದ ಕಣ್ಣೂರಿಲ್ಲಿ ಪ್ತಸಿದ್ಧ ದೇವಾಲಯವೊಂದಿದೆ. ಮಡಾಯಿ ಶ್ರೀ ತಿರುವರ್ಕಾಟ್ಟು ಕಾವು ಭಗವತಿ ದೇವಸ್ಥಾನ. ಇಲ್ಲಿಗೆ ಹಲವು ರಾಜಕಾರಣಿಗಳು ಶತ್ರು ಸಂಹಾರ ಪೂಜೆ ಮಾಡಿಸಲು ತೆರಳುತ್ತಾರೆ. ಈ ದೇವಾಲಯಕ್ಕೂ ನಟ ದರ್ಶನ್ ಕುಟುಂಬ ಸಮೇತವಾಗಿ ತೆರಳಿದ್ದಾರೆ. ಆ ಫೋಟೋ, ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಇಲ್ಲಿ ಶತ್ರು ಸಂಹಾರ ಪೂಜೆ ಮಾಡಿಸಿದ್ದಾರೆ ಎನ್ನಲಾಗಿದೆ. ಈ ದೇವಾಸ್ಥಾನ ಖ್ಯಾತಿ ಪಡೆದಿರುವುದೇ ಶತ್ರು ಸಂಹಾರಕ್ಕಾಗಿ. ಹೀಗಾಗಿ ದರ್ಶನ್ ಅವರು ಕೂಡ ಶತ್ರು ಸಂಹಾರ ಪೂಜೆ ಮಾಡಿಸಿದರಾ ಎಂಬ ಅನುಮಾನ ಎಲ್ಲರನ್ನು ಕಾಡಿದೆ. ದರ್ಶನ್ ಅವರ ಬಿಡುಗಡೆಗಾಗಿ ವಿಜಯಲಕ್ಷ್ಮಿ ತಿರುಗಿದ ದೇವಸ್ಥಾನಗಳೇ ಹೆಚ್ಚು. ಅದರಲ್ಲೂ ಶಕ್ತಿ ಪೀಠಗಳ ಮೊರೆ ಹೋಗಿದ್ದರು. ದರ್ಶನ್ ಅವರು ಆದಷ್ಟು ಬೇಗ ಬಿಡುಗಡೆಯಾಗಲಿ ಎಂದೇ ಬೇಡಿಕೊಂಡಿದ್ದರು. ಹರಕೆ ಹೊತ್ತುಕೊಂಡಿದ್ದರು. ಇದೀಗ ದರ್ಶನ್ ಹಾಗೂ ಮಗ ವಿನೀಶ್ ಜೊತೆಗೂಡಿ ದೇವಸ್ಥಾನಗಳಿಗೆ ಭೇಟಿ ನೀಡುತ್ತಾ ಇದ್ದಾರೆ. ಇಂದು ಕೇರಳದ ಮಡಾಯಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಈಗಾಗಲೇ ದರ್ಶನ್ ಅವರಿಂದ ಹಲವರನ್ನು ದೂರ ಇಟ್ಟಿರುವ ವಿಜಯಲಕ್ಷ್ಮಿ, ಯಾರ ಕೆಟ್ಟ ಕಣ್ಣು ಬೀಳದಿರಲೆಂದು ಪೂಜೆ ಮಾಡಿಸಿರಬಹುದು.
ಹುಬ್ಬಳ್ಳಿ; ಬಸವರಾಜ್ ಹೊರಟ್ಟಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ವಿಧಾನಪರಿಷತ್…
ಸುದ್ದಿಒನ್, ಚಿತ್ರದುರ್ಗ, ಮಾ.23 : ನಗರದ ಜೆ.ಸಿ.ಆರ್. ಬಡಾವಣೆ ಹತ್ತಿರ ರಾಷ್ಟ್ರೀಯ ಹೆದ್ದಾರಿ 13ರ ಸೇತುವೆ ಬಳಿ ಶನಿವಾರ…
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ, ಮಾ. 23…
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮಾರ್ಚ್.…
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮಾರ್ಚ್.…
ಸುದ್ದಿಒನ್ ಮುಂಬರುವ ಯುಗಾದಿ ಮತ್ತು ರಂಜಾನ್ ಹಬ್ಬಗಳ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಸರಿದೂಗಿಸಲು ಮೈಸೂರು ಮತ್ತು ವಿಜಯಪುರ…