Connect with us

Hi, what are you looking for?

ಪ್ರಮುಖ ಸುದ್ದಿ

ರತ್ನಗಳ ಮೂಲ ಅರಿತರೆ ನಿಮಗೆ ಕಾದಿದೆ ಅಚ್ಚರಿ; ಮಿಸ್ ಮಾಡದೆ ಓದಿ ಈ ಲೇಖನ

diamond natural production

ಲೇಖಕರು-ಜೆ. ಪರಶುರಾಮ

ರತ್ನಗಳು ಆಕರ್ಷಕವಾಗಿ ಕಾಣುವ ಹಾಗೂ ಅತಿ ಬೆಲೆ ಬಾಳುವ ಖನಿಜಗಳು. ಉಪಯೋಗ, ಹೆÇಳಪು ಮತ್ತು ಲಭ್ಯತೆಗೆ ತಕ್ಕಂತೆ ರತ್ನಗಳ ಬೆಲೆಯನ್ನು ಅಳೆಯಲಾಗುವುದು. ಆಭರಣಗಳಿಗಾಗಿ ಇವುಗಳನ್ನು ಕತ್ತರಿಸಿ ಪಾಲೀಸ್ ಮಾಡಲಾಗುವುದು. ಹೆಚ್ಚಿನ ರತ್ನಗಳು, ಖನಿಜದ ಸ್ಫಟಿಕದ ರೂಪದಲ್ಲಿರುತ್ತವೆ.

ಒಂದು ನಿರ್ದಿಷ್ಟ ರಾಸಾಯನಿಕ ಬಂಧ ಹಾಗೂ ಸ್ಪಷ್ಟ ಅಣು ರಚನೆಯಿಂದಾಗಿ, ರತ್ನದ ಕಲ್ಲು ಪಾರದರ್ಶಕವಾಗಿರುತ್ತದೆ. ರತ್ನದ ಕಲ್ಲುಗಳಿಗೆ ಬಳಸುವ 120 ಖನಿಜಗಳ ಪೈಕಿ ಕೇವಲ 25 ಮಾದರಿಗಳನ್ನು ಇಂದು ಆಭರಣಗಳ ತಯಾರಿಕೆಯಲ್ಲಿ ಬಳಸುತ್ತಾರೆ. ವಜ್ರ, ಪಚ್ಚೆ, ಮಾಣಿಕ್ಯ ಮತ್ತು ನೀಲಮಣಿಗಳು ಅತಿ ಬೆಲೆಬಾಳುವ ರತ್ನಗಳಲ್ಲಿ ಮುಖ್ಯವಾದವು. ಪುಷ್ಯರಾಗ, ಕ್ಷೀರಸ್ಫಟಿಕ ಮತ್ತು ಪದ್ಮರಾಗ ಮಣಿಗಳು ಎರಡನೇ ಗುಣಮಟ್ಟದ ರತ್ನಗಳು.

ಹೆಚ್ಚಿನ ರತ್ನಗಳು, ಸಾಮಾನ್ಯ ಖನಿಜಗಳ ಅತಿಸಾಮಾನ್ಯ ರೂಪದಲ್ಲಿರುತ್ತವೆ. ಉದಾಹರಣೆಗೆ ವಜ್ರ. ಇದು ಪೆನ್ಸಿಲ್‍ಗಳಲ್ಲಿ ಉಪಯೋಗಿಸುವ ಗ್ರಾಫೈಟ್‍ನಲ್ಲಿರುವ ಇಂಗಾಲದ ಸ್ವಲ್ಪ ವಿಭಿನ್ನ ರೂಪ ಅಷ್ಟೇ. ಅಂದರೆ ವಜ್ರಗಳು ಶುದ್ಧ ಇಂಗಾಲದ, ಗಟ್ಟಿಯಾದ ಮತ್ತು ಹೆÇಳೆಯುವ ಹರಳು ಎಂದರ್ಥ. ಆದರೆ ಸಾಮಾನ್ಯ ಗ್ರಾಫೈಟ್ ಬೂದು ಬಣ್ಣದಾಗಿದ್ದು, ನೋಡಲು ಆಕರ್ಷಕವೆನಿಸುವುದಿಲ್ಲ. ಪ್ರಾಕೃತಿಕವಾಗಿ ದೊರೆಯುವ ವಜ್ರ, ಗಾಜಿನ ತುಂಡುಗಳಂತಿರುತ್ತವೆ. ಅದನ್ನು ಕತ್ತರಿಸಿ, ಪಾಲೀಷ್ ಮಾಡಿದಾಗ ಕಣ್ಣು ಕುಕ್ಕುವಂತೆ ಹೆÇಳೆಯುತ್ತದೆ.

ಅತಿ ಅಮೂಲ್ಯದ ವಜ್ರ ನೀಲಿ ಬಣ್ಣ ಅಥವಾ ಬಣ್ಣವನ್ನು ಹೆÇಂದಿರುವುದಿಲ್ಲ. ವಜ್ರವು ಖನಿಜಗಳಲ್ಲೇ ಅತಿ ಕಠಿಣ ಎನ್ನಬಹÅದು. ಅದನ್ನು ಇನ್ನೊಂದು ವಜ್ರದಿಂದಷ್ಟೇ ಕತ್ತರಿಸಲು ಸಾಧ್ಯ. ಜ್ವಾಲಾಮುಖಿಗಳ ಒಳಪದರದಲ್ಲಿ ಅತ್ಯಂತ ಬಿಸಿ ಹಾಗೂ ಒತ್ತಡದಲ್ಲಿ ಇವು ರೂಪಗೊಳ್ಳುವುದು ಇದಕ್ಕೆ ಕಾರಣ. ದಕ್ಷಿಣ ಆಫ್ರಿಕ, ಸೈಬೀರಿಯ, ಆಸ್ಟ್ರೇಲಿಯ, ಬ್ರೆಜಿಲ್ ಮತ್ತು ಭಾರತ ವಜ್ರ ಉತ್ಪಾದನೆಯ ಮುಂಚೂಣಿಯಲ್ಲಿ ನಿಲ್ಲುವ ರಾಷ್ಟ್ರಗಳು.

ಸ್ಫಟಿಕ ಶಿಲೆಗಳು ಮಣ್ಣು ಮತ್ತು ಕಲ್ಲುಗಳಲ್ಲಿ ಸಾಮಾನ್ಯವಾಗಿ ದೊರೆಯುವ ಖನಿಜ. ಶುದ್ಧ ಸ್ಫಟಿಕ ಶಿಲೆಯ ಹರಳಿನಲ್ಲಿ ಕಬ್ಬಿಣ ಹಾಗೂ ಮ್ಯಾಂಗನೀಸ್‍ನ ಅಂಶಗಳೂ ಇರುತ್ತವೆ. ಸ್ಫಟಿಕದ ಹರಳು ನೇರಳೆ ಬಣ್ಣದಲ್ಲಿದ್ದರೆ, ಅದನ್ನು ಪದ್ಮರಾಗ ಮಾಣಿಕ್ಯ ಎನ್ನುತ್ತಾರೆ. ಇವು ಮುಖ್ಯವಾಗಿ ಉರಾಲ್ ಪರ್ವತಗಳು, ಬಾರತ, ಅಮೆರಿಕ, ಉರುಗ್ವೆ ಮತ್ತು ಬ್ರೆಜಿಲ್‍ನಲ್ಲಿ ಸಿಗುತ್ತವೆ.
ಕೋರಂಡಮ್, ಸಿಲಿಕಾ ಕಡಿಮೆಯಿರುವ ಅಗ್ನಿಶಿಲೆ ಹಾಗೂ ರೂಪಾಂತರಗಳಲ್ಲಿ ದೊರೆಯುವ ಇನ್ನೊಂದು ಸಾಮಾನ್ಯ ಖನಿಜ. ವಜ್ರದ ಬಳಿಕ ಇದೇ ಕಠಿಣವಾದ ಖನಿಜ. ಇದನ್ನು ಶುದ್ಧೀಕರಿಸಿದಾಗ ವಿವಿಧ ಬಣ್ಣಗಳನ್ನು ಪಡೆಯುತ್ತದೆ. ಕೋರಂಡಮ್‍ನಲ್ಲಿ ಕ್ರೋಮಿಯಂ ಆಕ್ಸೈಡ್‍ನ ಅಂಶವಿದ್ದರೆ ಅದು ಕೆಂಪು ಬಣ್ಣ ಪಡೆದು ಕೆಂಪು ಪದ್ಮರಾಗ ಮಾಣಿಕ್ಯ ಎನಿಸಿಕೊಳ್ಳುತ್ತದೆ. ಇವು ಮುಖ್ಯವಾಗಿ ಬರ್ಮಾದಲ್ಲಿ ಸಿಗುತ್ತವೆ. ಕಬ್ಬಿಣ ಮತ್ತು ಟೈಟಾನಿಯಂನ ಅಂಶಗಳಿದ್ದರೆ, ನೀಲಮಣಿ ಎನಿಸಿಕೊಳ್ಳುತ್ತದೆ. ಇವು ಕೆಂಪು ಹೆÇರತುಪಡಿಸಿ ಯಾವುದೇ ಬಣ್ಣದಲ್ಲಿರಬಹÅದು. ಆದರೆ ಸಾಮಾನ್ಯವಾಗಿ ಕಡುನೀಲಿ ಬಣ್ಣದಲ್ಲಿ ಇರುತ್ತದೆ. ಹಳದಿ ಬಣ್ಣದಲ್ಲಿ ಇರುವ ನೀಲಮಣಿಗಳೂ ಇವೆ.

ಪಚ್ಚೆ ರತ್ನ ಮುಖ್ಯವಾಗಿ ಗ್ರಾನೈಟ್ ಅದಿರುಗಳಲ್ಲಿರುತ್ತವೆ. ಮರಕತ ಮತ್ತು ನೀಲ ರತ್ನ ಇದರ ಎರಡು ವಿಧಗಳು. ಮರಕತ ನಿಷ್ಕಲ್ಮಶ ಹಸಿರು ಬಣ್ಣದಲ್ಲಿದ್ದು, ಕೊಲಂಬಿಯ, ರಷ್ಯದ ಉರಲ್ ಪರ್ವತಗಳು, ಜಿಂಬಾಬ್ವೆ ಮತ್ತು ಆಸ್ಟ್ರೇಲಿಯದಲ್ಲಿ ನೈಸರ್ಗಿಕವಾಗಿ ದೊರೆಯುತ್ತವೆ. ನೀಲ ರತ್ನ ತಿಳಿ ನೀಲಿ ಬಣ್ಣದಲ್ಲಿರುತ್ತದೆ.

ಎಲ್ಲ ರತ್ನಗಳೂ ಖನಿಜಗಳಲ್ಲ. ಮುತ್ತು ಮತ್ತು ಶಿಲಾರಾಳ ಅಥವಾ ಅಂಬರು, ನಿಜಾರ್ಥದಲ್ಲಿ ಖನಿಜಗಳಲ್ಲ. ಅವುಗಳ ರಚನೆಯ ಹಿಂದೆ ಸಾವಯವ ಜೀವಿಗಳ ಹಿನ್ನೆಲೆಯಿದೆ. ಅವು ಪ್ರಾಣಿ ಮತ್ತು ಸಸ್ಯಗಳ ನೆರವಿನಿಂದ ರೂಪು ಪಡೆಯುತ್ತವೆ. ಉದಾಹರಣೆಗೆ ಮುತ್ತು, ಕಪ್ಪೆ ಚಿಪ್ಪು ಮೀನಿನ ಚಿಪ್ಪಿನೊಳಗೆ ಇರುವಂಥದ್ದು. ಅದೇ ರೀತಿ ಅಂಬರು, ದೇವದಾರು ಹಾಗೂ ಸೂಚಿಪರ್ಣ ವೃಕ್ಷಗಳ ರಾಳದಿಂದ ರೂಪು ಪಡೆಯುತ್ತದೆ. ಇವು ವರ್ಷಾನುಗಟ್ಟಲೆ ಕಲ್ಲುಗಳ ನಡುವೆ ಸಮಾಧಿಯಾಗಿ ರತ್ನ ಎನಿಸಿಕೊಳ್ಳುತ್ತದೆ.
ಮನುಷ್ಯ ಇಂದು ಕೃತಕ ರತ್ನಗಳನ್ನು ರಚಿಸುವ ವಿದ್ಯೆಯನ್ನು ಕರಗತ ಮಾಡಿಕೊಂಡಿದ್ದಾನೆ.

ಭೂಮಿಯ ಮೇಲ್ಪದರದಲ್ಲಾಗುವ ಒತ್ತಡದ ಮಾದರಿಯಲ್ಲೇ ಪ್ರಯೋಗಶಾಲೆಗಳಲ್ಲಿ ಒತ್ತಡವನ್ನು ರಚಿಸಿ ರತ್ನಗಳನ್ನು ತಯಾರಿಸಲಾಗುತ್ತದೆ. ಸೂಕ್ಷ್ಮ ವಜ್ರಗಳನ್ನು ಗ್ರಾಫೈಟ್‍ನಿಂದ ಪ್ರಯೋಗಶಾಲೆಗಳಲ್ಲೇ ಪಡೆಯಬಹÅದು. ಇವನ್ನು ದಂತ ವೈದ್ಯರ ಹಲ್ಲು ಕತ್ತರಿಸುವ ಉಪಕರಣ, ಗಾಜು ಕತ್ತರಿಸುವ ಹಾಗೂ ಬಂಡೆಗಳನ್ನು ಕೊರೆಯುವ ಗರಗಸ ಮತ್ತು ಡ್ರಿಲ್‍ಬಿಟ್‍ಗಳಲ್ಲಿ ಬಳಸುತ್ತಾರೆ. ಕೃತಕ ಮಾಣಿಕ್ಯವನ್ನು ಲೇಸರ್‍ಗಳಲ್ಲಿ ಬಳಸುತ್ತಾರೆ. ನೀಲಮಣಿ ಹಾಗೂ ಪಚ್ಚೆ ರತ್ನಗಳನ್ನೂ ಯಶಸ್ವಿಯಾಗಿ ತಯಾರಿಸಬಹÅದು. ಅಮೆರಿಕದ ಜನರಲ್ ಎಲೆಕ್ಟ್ರಿಕ್ ಕಂಪೆನಿ ಮೊದಲ ಬಾರಿಗೆ ಕೃತಕ ರತ್ನಗಳ ತಯಾರಿಕೆಯನ್ನು 1955ರಲ್ಲಿ ಆರಂಭಿಸಿತು.

ಲೇಖಕರು-ಜೆ. ಪರಶುರಾಮ
ನಿವೃತ್ತ ಹಿರಿಯ ಭೂವಿಜ್ಞಾನಿ
ಗೌರವಾಧ್ಯಕ್ಷರು, ವಿ.ಕೆ.ಎಸ್., ಚಿತ್ರದುರ್ಗ
ಸದಸ್ಯರು, ಬೆಂಗಳೂರು ಸೌತ್ ಸೆಂಟರ್ (ರಿ.)

Click to comment

Leave a Reply

Your email address will not be published. Required fields are marked *

Latest

ದಿನ ಭವಿಷ್ಯ

ಬುಧವಾರ ರಾಶಿ ಭವಿಷ್ಯ-ಆಗಸ್ಟ್-4,2021 ಕಾಮಿಕಾ ಏಕಾದಶಿ ಸೂರ್ಯೋದಯ: 06:04 AM, ಸೂರ್ಯಸ್ತ: 06:44 PM ಸ್ವಸ್ತಿ ಶ್ರೀ ಮನೃಪ ಶಾಲಿವಾಹನ ಶಕೆ1943, ಸಂವತ್2077, ಪ್ಲವ ನಾಮ ಸಂವತ್ಸರ ಆಷಾಢ ಮಾಸ, ದಕ್ಷಿಣಾಯಣ, ಗ್ರೀಷ್ಮ...

ಚಿತ್ರದುರ್ಗ

upper bhadra meeting in DS Hally, chitradurga ಡಿಎಸ್ ಹಳ್ಳಿಯಲ್ಲಿ ಭದ್ರಾ ಮೇಲ್ದಂಡೆ ಸಭೆ; ಗ್ರಾಮಸ್ಥರು ಭಾಗಿ ಸುದ್ದಿಒನ್, ಚಿತ್ರದುರ್ಗ, (ಆ.03) : ತಾಲೂಕಿನ ದೊಡ್ಡಸಿದ್ದವ್ವನಹಳ್ಳಿ ಗ್ರಾಮದ ಜ್ಞಾನಪೂರ್ಣ ಶಾಲೆ ಆವರಣದಲ್ಲಿ...

ಚಿತ್ರದುರ್ಗ

ಸುದ್ದಿಒನ್, ಚಿತ್ರದುರ್ಗ, (ಆ.03) : ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಎಸ್ ಜೆ ಎಮ್ ಸಿ ಬಿ ಎಸ್ ಇ ರೆಸಿಡೆನ್ಷಿಯಲ್ ಶಾಲೆಯು 2020-21 ನೇ ಸಾಲಿನ ಸಿ ಬಿ ಎಸ್ ಇ...

ಪ್ರಮುಖ ಸುದ್ದಿ

ಬೆಂಗಳೂರು: ಸಚಿವ ಸಂಪುಟ ರಚನೆ ಬಗ್ಗೆ ಚರ್ಚೆ ನಡೆಸೋದಕ್ಕಾಗಿಯೇ ಸಿಎಂ ಮೂರು ದಿನದಿಂದ ದೆಹಲಿಯಲ್ಲಿದ್ದಾರೆ. ಈಗಾಗಲೇ ಹೈಕಮಾಂಡ್ ಜೊತೆ ಈ ಬಗ್ಗೆ ಮಾತುಕತೆ ನಡೆದಿದೆ ಎನ್ನಲಾಗಿದೆ. ಅಷ್ಟೇ ಅಲ್ಲ ಸಂಪುಟದಲ್ಲಿ ಯಾರೆಲ್ಲಾ ಇರ್ಬೇಕು...

ಪ್ರಮುಖ ಸುದ್ದಿ

ಮುಂಬೈ: ಶಿಲ್ಲಾ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಎಷ್ಟು ಆ್ಯಕ್ಟೀವ್ ಆಗಿದ್ರೋ ಮಗ ವಿಹಾನ್ ಕುಂದ್ರಾ ಕೂಡ ಅಷ್ಟೇ ಆ್ಯಕ್ಟೀವ್ ಆಗಿದ್ದ. ಸದಾ ಸೋಷಿಯಲ್ ಮೀಡಿಯಾದಲ್ಲಿ ಒಂದಿಲ್ಲೊಂದು ಪೋಸ್ಟ್ ಹಾಕ್ತಾ ಇದ್ದ. ಆದ್ರೆ ರಾಜ್...

ಪ್ರಮುಖ ಸುದ್ದಿ

ರಾಜಸ್ಥಾನ : ಹಿಂದಿನ ಕಾಲದಿಂದಲೂ ಪಾರಿವಾಳ ಸಂದೇಶ ರವಾನಿಸುವ, ಬೇಹುಗಾರಿಕೆಯಲ್ಲೂ ತನ್ನ ಚಾಣಾಕ್ಯತನ ತೋರಿದೆ. ತಂತ್ರಜ್ಞಾನ ಮುಂದುವರೆದ ಕಾಲದಲ್ಲೂ ಪಾಕಿಸ್ತಾನದಿಂದ ಪತ್ರವೊಂದನ್ನ ಹೊತ್ತು ತಂದಿದೆ ಪಾರಿವಾಳ. ಹೌದು, ಈ ಘಟನೆ ನಡೆದಿರೋದು ರಾಜಸ್ಥಾನದ...

You May Also Like

ಚಿತ್ರದುರ್ಗ

ಚಿತ್ರದುರ್ಗ, (ಜು.31): ಕೋಟೆನಾಡಿನಲ್ಲಿ ಮತ್ತೆ ಸರಗಳ್ಳತ ಹಾವಳಿ ಶುರುವಾಗಿದೆ. ಬೆಳಗಿ ಹೊತ್ತು ವಾಯು ವಿಹಾರಕ್ಕೆ ಬರುವ ಮಹಿಳೆಯರನ್ನು ಟಾರ್ಗೆಟ್ ಮಾಡುವ ಕಳ್ಳರು ಬೈಕ್ ನಲ್ಲಿ ಬಂದು ಸರ ಕಿತ್ತುಕೊಂಡು ಪರಾರಿಯಾಗುತ್ತಿದ್ದಾರೆ. ಶನಿವಾರ ಬೆಳಗ್ಗೆ...

ಪ್ರಮುಖ ಸುದ್ದಿ

ಅಭಿಮಾನಿಗಳು ತಮ್ಮ ಅಭಿಮಾನವನ್ನ ಒಂದೊಂದು ಬಾರಿ ಒಂದೊಂದು ರೀತಿಯಲ್ಲಿ ಅಭಿಮಾನ ತೋರಿಸ್ತಾರೆ. ಅದರಲ್ಲೂ ಅಭಿಮಾನಿಗಳು ತಮ್ಮ ನೆಚ್ಚಿನ ನಟ ನಟಿಯರ ಫೋಟೋಗಳಿಗೆ ಹಾರ ಹಾಕಿ, ಅಭಿಷೇಕ‌ ಮಾಡಿ ಎಂಜಾಯ್ ಮಾಡ್ತಾರೆ. ಇನ್ನು ಒಂದೆಜ್ಜೆ...

ಆರೋಗ್ಯ

ರಾಗಿ ತಿಂದೋನಿಗೆ ರೋಗವಿಲ್ಲ ಅನ್ನೋ ಮಾತು ಕೇಳಿರ್ತೀರಿ. ಆದ್ರೆ ಈ ಮಾತು ಯಾಕೆ ಹೇಳ್ತಾರೆ ಅಂತ ಗೊತ್ತಾಗ್ಬೇಕಂದ್ರೆ ರಾಗಿಯಿಂದ ಆರೋಗ್ಯಕ್ಕೆ ಅದೆಷ್ಟೆಲ್ಲ ಲಾಭಗಳಿವೆ ಎಂದು ತಿಳ್ಕೋಬೇಕು. ರಾಗಿಯಲ್ಲಿ ಸಾಕಷ್ಟು ಕ್ಯಾಲ್ಶಿಯಂ ಇದೆ. ಆಸ್ಟಿಯೋಪೋರೋಸಿಸ್...

ಆರೋಗ್ಯ

ಅರಳಿ ಮರ ಸಾಮಾನ್ಯವಾಗಿ ಎಲ್ಲೆಡೆ ಇರುತ್ತೆ. ಅದಕ್ಕೆ ನಗರ, ಗ್ರಾಮೀಣ ಅಂತೆಲ್ಲಾ ಏನಿಲ್ಲ. ನಗರ ಪ್ರದೇಶದಲ್ಲೂ ದೇವಾಲಯದ ಮುಂದೆ ಅರಳಿಮರವನ್ನ ಕಾಣಬಹುದು. ಈ ಅರಳಿ‌ಮರದ ಎಲೆಗಳಿಂದ ಸಾಕಷ್ಟು ಲಾಭಗಳಿವೆ. ಅದು ಅಷ್ಟಾಗಿ ಯಾರಿಗೂ...

Copyright © 2021 Suddione. Kannada online news portal

error: Content is protected !!