in ,

ಸರ್ಕಾರದ ಸುರ್ಪದಿಗೆ ಶ್ರೀ ಏಕನಾಥೇಶ್ವರಿ ದೇವಿಯ ಬಂಗಾರದ ಮುಖಪದ್ಮ, ವಜ್ರ ಮತ್ತು ಬೆಳ್ಳಿಯ ಆಭರಣಗಳು

suddione whatsapp group join

ಸುದ್ದಿಒನ್, ಚಿತ್ರದುರ್ಗ, (ಸೆ.26) : ಭಕ್ತರ ಕಾಣಿಕೆಯಿಂದ ಸಿದ್ಧಗೊಳಿಸಿದ ಏಕನಾಥೇಶ್ವರಿ ಅಮ್ಮನವರ ಬಂಗಾರದ ಮುಖಪದ್ಮವನ್ನು ಸೆ.28ರಂದು ಸರ್ಕಾರದ ಸುರ್ಪದಿಗೆ ನೀಡಲಾಗುತ್ತದೆ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಏಕನಾಥೇಶ್ವರಿ ಜೀರ್ಣೋದ್ಧಾರ ಸಮಿತಿಯಿಂದ ಭಕ್ತರು ನೀಡಿದ ಕಾಣಿಕೆಯಿಂದ ಬಂಗಾರ ಹಾಗೂ ಬೆಳ್ಳಿ ಆಭರಣಗಳನ್ನು ಸಿದ್ಧಗೊಳಿಸಲಾಗಿದೆ. ಇದು ನಿಜಕ್ಕೂ ಮಾದರಿಯ ಕಾರ್ಯ ಎಂದರು.

1.479.40 ಗ್ರಾಂ ಬಂಗಾರದಲ್ಲಿ 1,424.620 ಗ್ರಾಂನಲ್ಲಿ ಮುಖಪದ್ಮ, 1.5 ಕ್ಯಾರೆಟ್‍ವುಳ್ಳ ವಜ್ರದ ಹರಳುಗಳು ಹಾಗೂ ರೂಭಿ ಮುತ್ತನ್ನು ಒಳಗೊಂಡ 30.520 ಗ್ರಾಂ.ನ ವಿಭೂತಿಪಟ್ಟಿ, ಕಣ್ಣುಗಳು ಹಾಗೂ 23.900 ಗ್ರಾಂ. ನ ತಾಳಿ ಹಾಗೂ 371 ಗ್ರಾಂ.ನ ಬೆಳ್ಳಿ ಕೀರಿಟ, 350 ಗ್ರಾಂ.ನ ಕಿವಿ ಓಲೆ, 1221 ಗ್ರಾಂ.ನ ನಾಗರ ಹೆಡೆ ಹಾಗೂ 723 ಗ್ರಾಂ.ನ ಕೇದಿಗೆ ಎಲೆ ಸಿದ್ಧಗೊಳಿಸಲಾಗಿದೆ. 28ರಂದು ಪೂಜೆ ಸಲ್ಲಿಸಿದ ತಹಸೀಲ್ದಾರ್‍ಗೆ ಒಪ್ಪಿಸಲಾಗುತ್ತದೆ ಎಂದು ತಿಳಿಸಿದರು.

ಈ ವೇಳೆ ತಹಶೀಲ್ದಾರ್ ಸತ್ಯನಾರಾಯಣ ಹಾಗೂ ಸಮಿತಿಯ ಅಧ್ಯಕ್ಷ ಜಮೀನ್ದಾರ್ ದೊರೆಸ್ವಾಮಿ, ನಿರ್ದೇಶಕರಾದ ಬಿ.ರಾಮಪ್ಪ, ಎಂ.ಮಲ್ಲಿಕಾರ್ಜುನ್, ಗೌಡ್ರು ಗುರುಸಿದ್ದಪ್ಪ, ನಗರ ಸಭಾ ಸದಸ್ಯ ಶಶಿಧರ್ ಇತರರಿದ್ದರು.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಅರ್ಹ ಫಲಾನುಭವಿಗಳಿಗೆ ಶೀಘ್ರ ಮನೆ ನಿರ್ಮಾಣ; ಶಾಸಕ ಜಿ.ಎಚ್.ತಿಪ್ಪಾರೆಡ್ಡಿ

ಬಯಲು ಸೀಮೆ ರೈತನ ಬದುಕಿಗೆ ಬಲ ನೀಡಿದ ದಾಳಿಂಬೆ