Connect with us

Hi, what are you looking for?

ಪ್ರಮುಖ ಸುದ್ದಿ

ತಡರಾತ್ರಿ ಗುಂಡಿನ ಸದ್ದು: ಓರ್ವನ ಹತ್ಯೆ, ಇನ್ನಿಬ್ಬರಿಗೆ ಗಂಭೀರ ಗಾಯ

ಧಾರವಾಡ: ಧಾರವಾಡದಲ್ಲಿ ನಿನ್ನೆ ತಡರಾತ್ರಿ ಗುಂಡಿನ ಸದ್ದು ಕೇಳಿ ಬಂದಿದ್ದು, ಓರ್ವ ಹತ್ಯೆಗೀಡಾಗಿದ್ದು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡು ಕಿಮ್ಸ್ ಗೆ ದಾಖಲಾಗಿದ್ದಾರೆ.

ಧಾರವಾಡದ ಮದಿಹಾಳದ ಗಣೇಶನಗರದಲ್ಲಿ ಈ ಘಟನೆ ನಡೆದಿದೆ. ಶಿವಯೋಗಿ ಭಾವಿಕಟ್ಟಿ ಎಂಬಾತನೇ ಹತ್ಯೆಗೀಡಾಗಿದ್ದು, ಈರಪ್ಪ ಹೆಬ್ಬಳ್ಳಿ ಹಾಗೂ ಸುನೀಲ ಪೊನ್ನಣ್ಣವರ ಗಂಭೀರವಾಗಿ ಗಾಯಗೊಂಡು ಕಿಮ್ಸ್ ಗೆ ದಾಖಲಾಗಿದ್ದಾರೆ. ತಡರಾತ್ರಿಯೇ ಘಟನಾ ಸ್ಥಳಕ್ಕೆ ಶಹರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನವಲಗುಂದ ತಾಲೂಕಿನ ಶಿರೂರು ಗ್ರಾಮದ ಶ್ರೀಶೈಲ ಗಾಣಿಗೇರ ಎಂಬಾತನೇ ಹತ್ಯೆ ಮಾಡಿದ ಆರೋಪಿ. ಶ್ರೀಶೈಲ ಹಾಗೂ ಶಿವಯೋಗಿ ಮಧ್ಯೆ ಆಸ್ತಿಗೆ ಸಂಬಂಧಿಸಿದ ವ್ಯವಹಾರ ಇತ್ತು. ನಿನ್ನೆ ತಡರಾತ್ರಿ ಶಿವಯೋಗಿ ತನ್ನ ಇಬ್ಬರು ಸ್ನೇಹಿತರೊಂದಿಗೆ ಮದಿಹಾಳದ ಶ್ರೀಶೈಲನ ಮನೆಗೆ ಹೋಗಿ ಕ್ಯಾತೆ ತೆಗೆದಿದ್ದಾನೆ. ಇದರಿಂದ ಇಬ್ಬರ ನಡುವೆ ವಾಗ್ವಾದ ನಡೆದು, ಆ ವಾಗ್ವಾದ ಕೊಲೆಯಲ್ಲಿ ಅಂತ್ಯಗೊಂಡಿದೆ.

ಶ್ರೀಶೈಲ ರಿವಾಲ್ವಾರ್ ನಿಂದ ಗುಂಡು ಹಾರಿಸಿದ್ದು, ಶಿವಯೋಗಿ ಸಾವನ್ನಪ್ಪಿದ್ದಾನೆ. ಉಳಿದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

Click to comment

Leave a Reply

Your email address will not be published. Required fields are marked *

You May Also Like

ಪ್ರಮುಖ ಸುದ್ದಿ

ಯುಗಾದಿ ಭಾರತೀಯರ ಪಾಲಿನ ಹೊಸ ವರುಷ. ದೂರು ದೂರುಗಳಲ್ಲಿ ನೆಲೆಸಿದ್ದರು, ಹಬ್ಬಗಳಿಗೆ ತನ್ನ ತವರಿಗೆ ಬರ್ತಾರೆ. ಸಿಹಿ ಮಾಡಿ ಬೇವು ಬೆಲ್ಲವನ್ನಂಚಿ ಜೀವನದ ಸಾರ ಸಾರುತ್ತಾರೆ. ಹೀಗೆ ಆ ಕುಟುಂಬ ಕೂಡ ಹಬ್ಬದ...

ಪ್ರಮುಖ ಸುದ್ದಿ

ದಾವಣಗೆರೆ: ಅಸಲಿ ಚಿನ್ನದ ನಾಣ್ಯಗಳನ್ನು ಕೊಡುವುದಾಗಿ ನಂಬಿಸಿ ವೃದ್ಧ ದಂಪತಿಗಳಿಂದ ಹಣ, ಬಂಗಾರದ ಸರ ಲಪಟಾಯಿಸಿದ್ದ ಓರ್ವ ಆರೋಪಿಯನ್ನು ಬಂಧಿಸಿರುವ ಪೊಲೀಸರು, ಮತ್ತೋರ್ವನಿಗಾಗಿ ಜಾಲ ಬೀಸಿದ್ದಾರೆ. ಮೈಸೂರು ಜಿಲ್ಲೆ, ತಾಲ್ಲೂಕಿನ ಬೆಳವಾಡಿ ಗ್ರಾಮದ...

ಪ್ರಮುಖ ಸುದ್ದಿ

ಸುಮಾರು ತಿಂಗಳಿಂದ ಪ್ರೀತಿಯಲ್ಲಿ ಬಿದ್ದಿದ್ದ ಹಕ್ಕಿಗಳು ಆ ಇಬ್ಬರು. ಆದ್ರೆ ಆಕೆಗೆ ಪ್ರಿತಮ ತನಗೆ ಮೋಸ ಮಾಡುತ್ತಿದ್ದಾನೆಂದು ತಿಳಿದು ಬಂದಿದೆ. ಇದನ್ನ ಅರಗಿಸಿಕೊಳ್ಳದ ಪ್ರಿಯತಮೆ ಆತ ಮಲಗಿರುವಾಗ ಮರ್ಮಾಂಗವನ್ನೇ ಕತ್ತರಿಸಿ ಸಿಗದ ರೀತಿ...

ಪ್ರಮುಖ ಸುದ್ದಿ

ಮಂಗಳೂರು: ಇತ್ತೀಚೆಗೆ ಪರಿಚಿತವಾಗಿರುವ ಆನ್ ಲೈನ್  ಗೇಮ್ ಗಳು ಮಕ್ಕಳ ಭವಿಷ್ಯವನ್ನೆ ಹಾಳು ಮಾಡುತ್ತಿವೆ. ಪಬ್ ಜೀ ಅಂತ ಗೇಮ್ ಅದೆಷ್ಟೋ ಮಕ್ಕಳ ಜೀವ ಬಲಿ ಪಡೆದರೆ, ಇನ್ನಷ್ಟು ಮಕ್ಕಳನ್ನ ಡಿಪ್ರೆಶನ್ ಗೆ...

ಪ್ರಮುಖ ಸುದ್ದಿ

ಮೈಸೂರು: ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಇಬ್ಬರು ಸಾವನ್ನಪ್ಪಿದ್ದಾರೆ. ಅದರಲ್ಲಿ 5 ವರ್ಷದ ಮಗುವು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಬೆಳ್ಳೂರು ಸಮೀಪದ ಅಗಚನಹಳ್ಳಿಯಲ್ಲಿ ನಡೆದಿದೆ. ತನ್ವೀತ್ ಎಂಬ ಪುಟ್ಟ ಬಾಲಕ ಹಾಗೂ ದೀಪಕ್ ಎಂಬಾತ...

ಪ್ರಮುಖ ಸುದ್ದಿ

ಬೆಂಗಳೂರು: ಸಣ್ಣ ಪುಟ್ಟ ಮಾತಿಗೂ ಜಗಳಗಳಾಗೋದು ಸರ್ವೇ ಸಾಮಾನ್ಯ. ಸಣ್ಣ ವಿಚಾರಕ್ಕೂ ಜೋರು ಜಗಳ ತೆಗೆದು, ಅದರಿಂದ ಅನಾಹುತಗಳು ಆಗಿವೆ, ಎಷ್ಟೋ ಜೀವಗಳು ಹೋಗಿವೆ. ಇದೀಗ ಬುದ್ಧಿ ಮಾತು ಹೇಳಿದ್ದಕ್ಕೆ ಇಬ್ಬರ ಕುಟುಂಬದ...

ಪ್ರಮುಖ ಸುದ್ದಿ

ಕೋಲಾರ: ಮನುಷ್ಯನಿಗೆ ಕೋಪ ಜಾಸ್ತಿ. ಆದ್ರೆ ಅದನ್ನ ಎಲ್ಲಿ ಉಪಯೋಗಿಸಬೇಕೋ ಅಲ್ಲಿಯೇ ಉಪಯೋಗಿಸಬೇಕು. ಎಷ್ಟೊ ಬಾರಿ ಬೇಡದೆ ವಿಚಾರ, ತಲೆ ಕೆಡಿಸಿಕೊಳ್ಳದೇ ಇರುವ ಸಣ್ಣ ಪುಟ್ಟ ವಿಚಾರಕ್ಕೂ ಜೀವಗಳೇ ಹೋಗಿವೆ. ಇದೀಗ ಅಂತದ್ದೇ...

ಪ್ರಮುಖ ಸುದ್ದಿ

ಮಕ್ಕಳನ್ನ ಆಟವಾಡಲು ಬಿಟ್ಟಾಗ ಚೂರು ಹೆಚ್ಚಾಗಿಯೇ ಗಮನ ಕೊಡಬೇಕಾಗುತ್ತದೆ. ಎಷ್ಟೋ ಘಟನೆಗಳನ್ನ ನಾವೂ ನೀವೂ ಕೇಳಿದ್ದೇವೆ. ಆಟವಾಡಲೂ ಹೋಗಿ‌ ಮಗು ಪ್ರಾಣ ಕಳೆದುಕೊಂಡದ್ದು, ಕಣ್ತಪ್ಪಿ ಇನ್ನೇನೋ ಆಗೋದು. ಇಷ್ಟೆಲ್ಲಾ ಘಟನೆಗಳ ನಡುವೆಯೂ ಪೋಷಕರ...

ಪ್ರಮುಖ ಸುದ್ದಿ

ದಾವಣಗೆರೆ: ಪ್ರಿಯಕರನೊಟ್ಟಿಗಿನ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ತಂದೆಯನ್ನೇ ಮಗಳು, ಮೊಮ್ಮಗಳು ಸೇರಿ ಕೊಲೆಗೈದ ಘಟನೆಯನ್ನು ಹೊನ್ನಾಳಿ ಪೊಲೀಸರು ಬೇಧಿಸಿ, ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಕುಳಗಟ್ಟೆ ಗ್ರಾಮದ ಜಿರಾಯ್ತಿ ಕೆಲಸದ ವೈ.ಟಿ.ಶ್ರೀನಿವಾಸ(34...

error: Content is protected !!